ಉಮಾಶ್ರೀ

ಬಸುರಿಯಾಗಿದ್ದಾಗಲೇ ಉಮಾಶ್ರೀಗೆ ಗಂಡ ಏನ್ ಮಾಡಿದ್ದ ಗೊತ್ತಾ! ಇಡ್ಲಿ ಮಾರುತ್ತಿದ್ದ ಉಮಾಶ್ರೀ ಸಚಿವೆ ಆಗಿದ್ದು ಹೇಗೆ ಗೋತ್ತಾ?

CINEMA/ಸಿನಿಮಾ Entertainment/ಮನರಂಜನೆ

ಅತಿ ಚಿಕ್ಕ ವಯಸ್ಸಿನಲ್ಲೇ ತಮ್ಮ ನೋವುಗಳನ್ನು ಬಣ್ಣದ ಬದುಕಿನ ಮುಖಾಂತರ ಸುಂದರವಾಗಿಸಿಕೊಂಡಂತಹ ಉಮಾಶ್ರೀ ಅವರ ಜೀವನದಲ್ಲಿ ಏನೆಲ್ಲಾ ಕಷ್ಟಗಳನ್ನು ಅನುಭವಿಸಿದರು? ತುಂಬು ಗರ್ಭಿಣಿಯಾಗಿದ್ದಾಗ ಅವರ ಗಂಡ ನೀಡಿದಂತಹ ಹಿಂಸೆ ಎಂತಹದ್ದು? ಇಡ್ಲಿ ಮಾರುತಿದ್ದ ಸಾಮಾನ್ಯ ಮಹಿಳೆ ಸಾವಿರಾರು ಅಭಿಮಾನಿಗಳನ್ನು ಗಳಿಸಿ ಸಚಿವೆ ಆಗಲು ಹೇಗೆ ಸಾಧ್ಯವಾಯಿತು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಹೆತ್ತವರನ್ನು ಕಳೆದುಕೊಂಡು ತಂದೆ ತಾಯಿಯ ಪ್ರೀತಿಯಿಂದ ವಂಚಿತರಾದರು. ಹೀಗೆ ತಂದೆ ತಾಯಿಯನ್ನು ಕಳೆದುಕೊಂಡ ಕಾರಣ ಉಮಾಶ್ರೀಯವರು ತಮ್ಮ ದೊಡ್ಡಮ್ಮನವರ ಆಶ್ರಯದಲ್ಲಿ ಬೆಳೆಯಬೇಕಾಯಿತು. ಉಮಾಶ್ರೀಯವರ ದೊಡ್ಡಮ್ಮ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಬರದಿದ್ದರೆ ತನ್ನ ಬದುಕು ಏನಾಗುತ್ತಿತ್ತೋ ಏನೋ ಎಂದು ಉಮಾಶ್ರೀ ಅವರೇ ಹಲವಾರು ಸಂದರ್ಶನಗಳಲ್ಲಿ ಹೇಳಿದ್ದು ಇದೆ.

ಅಷ್ಟೇ ಅಲ್ಲದೆ ಕಾಲೇಜಿನ ವಯಸ್ಸಿನಲ್ಲಿ ಪ್ರೀತಿ-ಪ್ರೇಮ ಎಂದುಕೊಂಡು ನನ್ನ ಬದುಕನ್ನು ನಾನೇ ಸ್ವತಃ ಹಾಳು ಮಾಡಿಕೊಂಡೆ ಎಂದು ಉಮಾಶ್ರೀಯವರು ಈಗಲೂ ಕೊರಗುತ್ತಾರೆ. ಹೌದು ನಟಿ ಉಮಾಶ್ರೀ ಮೈಸೂರು ಕಾಲೇಜು ಓದುತ್ತಿರುವಾಗಲೇ ಒಬ್ಬ ಹುಡುಗನನ್ನು ಪ್ರೀತಿಸುತ್ತಿರುತ್ತಾರೆ. ಈ ವಿಷಯ ದೊಡ್ಡಮ್ಮನಿಗೆ ತಿಳಿದು ಅವರಿಗೆ ಹೊಡೆದು ಬಡೆದು ಬುದ್ಧಿವಾದ ಹೇಳುತ್ತಾರೆ ಆದರೆ ವಾಸ್ತವವನ್ನು ಅರ್ಥಮಾಡಿಕೊಳ್ಳಲಾಗದೆ ಉಮಾಶ್ರೀಯವರು ತಾನು ಪ್ರೀತಿಸಿದ ಹುಡುಗನನ್ನೇ ಕೈಹಿಡಿದರು. ಆದರೆ ಮದುವೆಯಾಗಿ ಕೆಲದಿನಗಳ ನಂತರ ಉಮಾಶ್ರೀಯವರ ಗಂಡ ದುಶ್ಚಟಗಳಿಗೆ ದಾಸರಾಗುತ್ತಾನೆ.

ಯಾವುದೇ ದುಡಿಮೆ ಸಹಾಯ ಇಲ್ಲದೆ ಹೆಂಡತಿಯನ್ನು ಹೊಡೆದು ಬಡೆದು ಹಿಂಸಿಸುವುದನ್ನು ಬಿಟ್ಟು ಬೇರೆ ಏನು ಮಾಡುತ್ತಿರಲಿಲ್ಲ. ಉಮಾಶ್ರೀಯವರು ಅಷ್ಟೊತ್ತಿಗಾಗಲೇ ಒಂದು ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದು, ಇನ್ನೊಂದು ಮಗುವನ್ನು ಹೊಟ್ಟೆಯಲ್ಲಿ ಹೊತ್ತಿದ್ದರು. ಅಲ್ಲದೆ ಆ ಸಮಯದಲ್ಲಿ ಗಂಡ ಇನ್ನೊಂದು ಮದುವೆಯಾಗಿ ಆ ಹೆಂಡತಿಯನ್ನು ಮನೆಗೆ ಕರೆದುಕೊಂಡು ಬರುತ್ತಾರೆ. ಆಕೆಯನ್ನು ಕೂಡ ಉಮಾಶ್ರೀಯವರ ಸಾಕುವಂತಹ ಪರಿಸ್ಥಿತಿ ಬರುತ್ತದೆ. ಹೀಗೆ ವೈಯಕ್ತಿಕ ಜೀವನದಲ್ಲಿ ಬೇಸತ್ತಿದ್ದ ಉಮಾಶ್ರೀ ಬಣ್ಣದ ಬದುಕಿನ ಕಡೆ ತಮ್ಮ ಒಲವನ್ನು ತೋರಿಸಿ ಗಂಡನನ್ನು ಬಿಟ್ಟು ಬರುತ್ತಾರೆ. ಬಣ್ಣ ಹಚ್ಚುವ ಮೂಲಕ ತಮ್ಮ ಜೀವನದ ಬಣ್ಣವನ್ನೇ ಬದಲಾಯಿಸಿಕೊಂಡರು ಎಂದರೆ ತಪ್ಪಾಗಲಾರದು ಉಮಾಶ್ರೀಯವರ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.