Kannada News: ಉಪೇಂದ್ರ (Upendra) ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಯುಐ(UI) ಚಿತ್ರವು ಸಾಕಷ್ಟು ಕ್ರೆಜ್ ಮತ್ತು ನಿರೀಕ್ಷೆ ಹುಟ್ಟು ಹಾಕಿದೆ. ಸಾಕಷ್ಟು ಸಮಯದ ನಂತರ ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ನಿರ್ದೇಶಕರ ಕ್ಯಾಪ್ ತೊಟ್ಟಿದ್ದಾರೆ. ವರ್ಷಗಳ ಬಳಿಕ ನಿರ್ದೇಶನದ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದಾರೆ. ಉಪೇಂದ್ರ ಅವರ ನಿರ್ದೇಶನ ಅಂದ್ರೆ ಜನರಿಗೆ ಬೇರೆಯದೇ ರೀತಿಯ ಲೆಕ್ಕಾಚಾರ ಶುರುವಾಗುತ್ತದೆ. ಪ್ರತಿ ಬಾರಿಯೂ ಅಭಿಮಾನಿಗಳ ನಿರೀಕ್ಷೆಯನ್ನು ಮೀರುವಷ್ಟರ ಮಟ್ಟಿಗೆ ಬೇರೆ ಬೇರೆ ರೀತಿಯ ಚಿತ್ರಗಳನ್ನು ಅವರು ತರುತ್ತಾರೆ. ಉಪೇಂದ್ರ ಅವರ ಸಿನಿಮಾ ರೀತಿ, ಕಥೆ ಹೇಳುವ ರೀತಿ ಎಲ್ಲವೂ ಕೂಡ ವಿಭಿನ್ನ ಶೈಲಿಯಲ್ಲಿ ಇರುತ್ತದೆ. ಇನ್ನು ಅವರ ಬಹು ನಿರೀಕ್ಷಿತ ಯುಐ ಚಿತ್ರದ ಚಿತ್ರೀಕರಣ ಶುರುವಾಗಿ ಈಗಾಗಲೇ ತಿಂಗಳುಗಳೆ ಕಳೆದುಹೋಗಿವೆ. ಆದರೆ ಅಚ್ಚರಿ ಎಂದರೆ ಇದುವರೆಗೂ ಕೂಡ ಈ ಚಿತ್ರಕ್ಕೆ ನಾಯಕಿ ಯಾರು ಎನ್ನುವುದು ಅಂತಿಮಗೊಂಡಿರಲಿಲ್ಲ. ಬಾಲಿವುಡ್ (Bollywood) ನಿಂದ ಈ ಚಿತ್ರಕ್ಕಾಗಿ ನಾಯಕಿಯನ್ನು ಕರೆದು ತರಲಾಗುವುದು ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ ಇದೀಗ ಅಂತಿಮವಾಗಿ ಚಿತ್ರಕ್ಕೆ ನಾಯಕಿ ಆಯ್ಕೆಯಾಗಿದ್ದು ಆ ನಟಿ ಯಾರು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.
ರಿಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಯುಐ ಚಿತ್ರ ಪ್ಯಾನ್ ಇಂಡಿಯಾ ಮಟ್ಟದ ಚಿತ್ರವಾಗಿದೆ. ಸಾಕಷ್ಟು ದಿನಗಳ ನಂತರ ಇಂತಹದೊಂದು ವಿಭಿನ್ನ ರೀತಿಯ ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಇನ್ನು ಈ ಚಿತ್ರಕ್ಕೆ ನಾಯಕಿ ಯಾರು ಎನ್ನುವ ಪ್ರಶ್ನೆ ಬಂದಾಗ ಸಾಕಷ್ಟು ತಿಂಗಳುಗಳಿಂದಲೂ ಬೇರೆ ಬೇರೆಯಾದ ಸುದ್ದಿಗಳು ಹರಿದಾಡುತ್ತಿದ್ದವು. ಉಪೇಂದ್ರ ಅವರು ತಮ್ಮ ಮುಂದಿನ ಚಿತ್ರಕ್ಕಾಗಿ ಬಾಲಿವುಡ್ ನಿಂದ ಜನಪ್ರಿಯ ನಟಿಯನ್ನು ಕರೆದು ತರುತ್ತಾರೆ ಎಂದು ಸುದ್ದಿಯಾಗಿತ್ತು. ಇಷ್ಟು ಮಾತ್ರವಲ್ಲದೆ ಚಿತ್ರತಂಡವು ಕೂಡ ಅದೇ ರೀತಿಯಾಗಿ ನಾಯಕಿಯ ಆಯ್ಕೆಯ ಪ್ರಯತ್ನವನ್ನು ಮಾಡಿತ್ತು. ಇಷ್ಟಾದರೂ ಕೂಡ ನಾಯಕಿ ಯಾರು ಎನ್ನುವುದು ಅಂತಿಮ ಕೊಂಡಿರಲಿಲ್ಲ. ಚಿತ್ರೀಕರಣ ಶುರುವಾಗಿ ತಿಂಗಳುಗಳ ಕಾಲ ಶೂಟಿಂಗ್ ಆದರೂ ಕೂಡ ನಾಯಕಿಯ ಪಾತ್ರ ಮಾತ್ರ ನಿರ್ಧಾರ ಆಗಿರಲೇ ಇಲ್ಲ. ಆದರೆ ಅಂತಿಮವಾಗಿ ಈ ಚಿತ್ರಕ್ಕೆ ಕನ್ನಡದ ನಟಿಯನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಇದನ್ನು ಓದಿ.

ಅಷ್ಟಕ್ಕೂ ಆ ನಟಿ ಬೇರೆ ಯಾರು ಅಲ್ಲ, ಅವರೇ ರೀಷ್ಮಾ ನಾಣಯ್ಯ (Reeshma Nanaiha). ರೀಷ್ಮಾ ನಾಣಯ್ಯ ಅವರು ಏಕ್ ಲವ್ ಯಾ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟರು. ಗಣೇಶ್ (Ganesh) ಜೊತೆಗೆ ಬಾನ ದಾರಿಯಲ್ಲಿ ಚಿತ್ರ ಸೇರಿದಂತೆ ಅವರು ಇದುವರೆಗೆ ಮೂರ್ನಾಲ್ಕು ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇದೀಗ ರಿಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಯುಐ ಚಿತ್ರಕ್ಕಾಗಿ ನಾಯಕಿಯ ಪಾತ್ರಕ್ಕೆ ಅವರು ಆಯ್ಕೆಯಾಗಿದ್ದಾರೆ. ರೀಷ್ಮಾ ಅವರ ಪಾತ್ರ ಹೇಗಿರಲಿದೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಮಾಧ್ಯಮದವರು ಸ್ವತಃ ಅವರನ್ನು ಈ ಪ್ರಶ್ನೆ ಕೇಳಿದಾಗ ಪಾತ್ರದ ಗುಟ್ಟನ್ನು ಅವರು ಬಿಟ್ಟು ಕೊಟ್ಟಿಲ್ಲ. ಜೊತೆಗೆ ಈ ಚಿತ್ರಕ್ಕೆ ಆಯ್ಕೆ ಆಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿರುವ ಅವರು ಉಪೇಂದ್ರ ಅವರ ನಿರ್ದೇಶನದ ಸಿನಿಮಾಗೆ ನನಗೆ ಅವಕಾಶ ಸಿಕ್ಕಿರುವುದು ಬಹಳ ಖುಷಿಯಾಗಿದೆ. ಇದನ್ನು ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ. ಈ ಚಿತ್ರ ನನ್ನ ವೃತ್ತಿ ಬದುಕಿನಲ್ಲಿ ಒಂದು ದೊಡ್ಡ ಅವಕಾಶವಾಗಲಿದೆ ಎಂದು ಸಂತೋಷ ಹಂಚಿಕೊಂಡಿದ್ದಾರೆ. ಇದನ್ನು ಓದಿ..
