TWO-HUSBANDS

ಇಬ್ಬರು ಗಂಡಂದಿರಿಗೆ ಒಬ್ಬಳೇ ಹೆಂಡತಿ,ದಿನಾ ರಾತ್ರಿ ಈ ಇಬ್ಬರು ಪತಿಯರ ಬೀದಿ ಜಗಳ

Entertainment/ಮನರಂಜನೆ

ಕೆಲ ಪುರುಷರು ಎರಡು ಮದುವೆಯಾಗಿ ಬಾಳುತ್ತಿರುವುದನ್ನು ಕೇಳಿರ್ತೀವಿ. ಹಾಗೆ ನೋಡಿರುತ್ತೇವೆ ಕೂಡ. ಆದರೆ ಇಲ್ಲೊಬ್ಬ ಹೆಣ್ಣು ಎರಡು ಮದುವೆಯಾಗಿದ್ದಾಳೆ. ಈ ವಿಷಯ ಪೊಲೀಸ್ ಠಾಣೆಯಲ್ಲಿ ಗೊತ್ತಾಗಿದ್ದು ಇವಳು ನನ್ನ ಹೆಂಡತಿ. ನನ್ನ ಹೆಂಡತಿ ಎಂದು ಗಂಡರಿಬ್ಬರು ಜಗಳವಾಡಿಕೊಂಡಿದ್ದಾರೆ. ಈಕೆಯ ಕೈ ಹಿಡಿದು ಮನೆಗೆ ಬರುವಂತೆ ಕೇಳಿಕೊಂಡಿದ್ದಾರೆ. ಅಷ್ಟಕ್ಕೂ ಈ ಘಟನೆ ನೆಡೆದಿರುವುದು ಬಿಹಾರ್ ಅಲ್ಲಿ ಆ ಮಹಿಳೆಯ ಹೆಸರು ಶಾಂತಾದೇವಿ ಎಂದು.

ಈ ಮಹಿಳೆ ತನ್ನ ಕುಡುಕ ಗಂಡನ ಕಾಟ ತಾಳಲಾರದೆ ಮಕ್ಕಳನ್ನು ಬಿಟ್ಟು ತವರು ಮನೆಗೆ ಹೋಗಿ ಉಳಿಯುತ್ತಾಳೆ. ಅಲ್ಲಿ ಗೋಪಾಲ ಮಿಶ್ರಾ ಎಂಬ ಅಂಗಡಿಯವನ ಪರಿಚಯವಾಗಿ ಅವನೊಂದಿಗೆ ಸಂಸಾರ ನೆಡೆಸತೊಡಗಿದ್ದಾಳೆ. ಮನೆಯನ್ನು ಬಿಟ್ಟು ಹೋದ ಹೆಂಡತಿ ಆರು ತಿಂಗಳು ಕಳೆದರೂ ವಾಪಸ್ಸು ಬರದಿದ್ದದ್ದನ್ನು ನೋಡಿ ಮೊದಲ ಗಂಡನು ಮಕ್ಕಳೊಂದಿಗೆ ಹೆಂಡತಿಯ ತವರಿಗೆ ಬಂದು ನೋಡಿದರೆ ಶಾಂತಾ ದೇವಿ ಇಲ್ಲಿ ಎರಡನೇ ಮದುವೆಯಾಗಿ ಸುಖ ಜೀವನ ನಡೆಸುತ್ತಿದ್ದಾಳೆ.

ಅದರಿಂದ ಕೋಪಗೊಂಡ ಮೊದಲ ಗಂಡನು ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ. ಅಲ್ಲಿ ಶಾಂತಾದೇವಿಯ ಎರಡನೇ ಗಂಡ ಕೂಡ ಇವಳು ನನ್ನ ಹೆಂಡತಿ ಎಂದು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಹವಾಲು ನೀಡಿದ್ದಾನೆ. ಒಟ್ಟಿನಲ್ಲಿ ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಶಾಂತಾದೇವಿ ಮೊದಲ ಗಂಡನ ಜೊತೆ ಹೋಗುತ್ತಾಳೋ ಇಲ್ಲ ತನ್ನ ಒಳ್ಳೆಯದನ್ನು ನೋಡಿಕೊಳ್ಳಲು ಎರಡನೇ ಗಂಡನ ಬಳಿ ಹೋಗುತ್ತಾಳೋ ಕಾದುನೋಡಬೇಕಿದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.