ತಲೆಯ ಮೇಲಿಂದ ಟ್ರ್ಯಾಕ್ಟರ್ ಹಾಯ್ದು ಹೋದರೂ ಹೆಲ್ಮೆಟ್ ನಿಂದ ಉಳಿಯಿತು ಜೀವ,ನೋಡಿ ಈ ಅಪಘಾತದ ವೈರಲ್ ವಿಡಿಯೋ!

ದೇಶದಲ್ಲಿ ದಿನಂಪ್ರತಿ ಅನೇಕ ಅಪಘಾತಗಳು ಆಗುತ್ತಿರುತ್ತವೆ. ಇವುಗಳಲ್ಲಿ ಕೆಲವಂತೂ ತುಂಬಾ ಭಯಾನಕವಾಗಿರುತ್ತವೆ. ಅದರಲ್ಲಿ ಕೆಲವೊಂದು ಅಪಘಾತಗಳಂತೂ ಎಂದೂ ಮರೆಯಲಿಕ್ಕೆ ಸಾಧ್ಯವಿರುವುದಿಲ್ಲ. ಒಂದು ಸಮೀಕ್ಷೆಯ ಪ್ರಕಾರ ದೇಶದಲ್ಲಿ ಪ್ರತಿವರ್ಷ ಸುಮಾರು 1.5 ಲಕ್ಷ ಪ್ರವಾಸಿಗರು ಸಾವಿಗೀಡಾಗುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ ವಾಹನಗಳನ್ನು ನಿಧಾನವಾಗಿ ಚಲಾಯಿಸಬೇಕು ಮತ್ತು ಸಾರಿಗೆ ನಿಯಮಗಳನ್ನು ಪಾಲಿಸಬೇಕು ಎಂದು ಜನರಿಗೆ ಆಗಾಗ ಅಭಿಯಾನಗಳ ಮುಖಾಂತರ ಹೇಳಲಾಗುತ್ತದೆ. ಟು ವ್ಹೀಲರ್ ಪ್ರವಾಸಿಗರಿಗೆ ಹೆಲ್ಮೆಟ್ ಹಾಕಿಕೊಂಡು ಪ್ರವಾಸ ಮಾಡಬೇಕೆಂದು ತಪ್ಪದೇ ಹೇಳಲಾಗುತ್ತದೆ. ಹೆಲ್ಮೆಟ್ ನ ಮಹತ್ವವನ್ನು ಹೇಳುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗುತ್ತಿದೆ.

ರಸ್ತೆಗುಂಡಿಯಿಂದಾಗಿ ಟು ವ್ಹೀಲರ್ ಸವಾರ ಬಿದ್ದನು ಕೆಳಗೆ…

ವೈರಲ್ ಆಗುತ್ತಿರುವ ಈ ವಿಡಿಯೋ ತುಂಬಾ ಹೆದರಿಕೆ ಬರುವಂತದ್ದಾಗಿದೆ. ಈ ವಿಡಿಯೋದಲ್ಲಿ ಒಬ್ಬ ಬೈಕ್ ಸವಾರನ ಅಪಘಾತವಾಗಿರುವದು ಕಂಡುಬರುತ್ತದೆ. ರಸ್ತೆಯ ಮೇಲಿನ ಗುಂಡಿಯಿಂದಾಗಿ ಈ ದುರ್ಘಟನೆ ಆಗಿರುವುದು ತಿಳಿದುಬರುತ್ತದೆ. ಬೈಕ್ ಸವಾರನ ಹಿಂದೆ ಮಹಿಳೆಯೊಬ್ಬಳು ಮಗುವನ್ನು ಹಿಡಿದುಕೊಂಡು ಕುಳಿತಿದ್ದಾಳೆ. ಬೈಕ್ ಸವಾರನಿಗೆ ರಸ್ತೆ ಮೇಲಿರುವ ಗುಂಡಿಯ ಕಲ್ಪನೆ ಇರಲಿಲ್ಲ. ಹೀಗಾಗಿ ರಸ್ತೆ ಮೇಲಿರುವ ಗುಂಡಿಯಿಂದಾಗಿ ಬೈಕ್ ಸವಾರ ಕೆಳಗೆ ಬಿದ್ದಿದ್ದಾನೆ.

ತಲೆಯ ಮೇಲಿನಿಂದ ಹೋಯಿತು ಟ್ರ್ಯಾಕ್ಟರ್ ವ್ಹೀಲ್!

ಬೈಕ್ ಸವಾರನ ಎದುರುಗಡೆಯಿಂದ ಒಂದು ಟ್ರ್ಯಾಕ್ಟರ್ ಬರುತ್ತಿತ್ತು. ಆ ಟ್ರ್ಯಾಕ್ಟರ್ ಗಾಲಿಯು ನೇರವಾಗಿ ಈ ಬೈಕ್ ಸವಾರನ ತಲೆಯ ಮೇಲಿಂದ ಹೋಗಿದೆ. ಈ ಅಪಘಾತವನ್ನು ನೋಡಿದಾಗ ಬೈಕ್ ಸವಾರನ ಪ್ರಾಣ ಅಲ್ಲಿಯೇ ಹೋಗಿರಬಹುದೆನಿಸುತ್ತದೆ. ಆದರೆ ಕೆಳಗೆ ಬಿದ್ದ ಬೈಕ್ ಸವಾರನ ತಲೆಯ ಮೇಲೆ ಹೆಲ್ಮೆಟ್ ಇರುವ ಕಾರಣದಿಂದಾಗಿ ಆತನ ಪ್ರಾಣ ಉಳಿದಿದೆ. ಟ್ರ್ಯಾಕ್ಟರ್ ದ ಗಾಲಿಯು ಬೈಕ್ ಸವಾರನು ಹಾಕಿಕೊಂಡ ಹೆಲ್ಮೆಟ್ ಮೇಲಿಂದ ಜಾರಿದೆ. ಹಾಗೂ ಹೆಲ್ಮೆಟ್ ನಿಂದಾಗಿ ಬೈಕ್ ಸವಾರನ ತಲೆಗೆ ಸ್ವಲ್ಪವೂ ಪೆಟ್ಟು ಅಥವಾ ಗಾಯವಾಗಿಲ್ಲ. ಹೀಗಾಗಿ ಹೆಲ್ಮೆಟ್ ನಿಂದಾಗಿ ಬೈಕ್ ಸವಾರನ ಪ್ರಾಣ ಸುರಕ್ಷಿತವಾಗಿ ಉಳಿದಿದೆ.

ಸೋಶಿಯಲ್ ಮೀಡಿಯಾದಲ್ಲಿ ಆಗುತ್ತಿದೆ ಈ ವಿಡಿಯೋ ವೈರಲ್.

ಅಪಘಾತದ ಸಂಪೂರ್ಣ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರಸ್ತುತ ವಿಡಿಯೋ ಎಲ್ಲಿಯದಿದೆ ಎಂಬುದು ತಿಳಿದುಬಂದಿಲ್ಲ. ಮಾತ್ರ ಈ ವೀಡಿಯೋ ನೋಡಿದ ನೆಟ್ಟಿಗರು ಆಶ್ಚರ್ಯ ವ್ಯಕ್ತ ಮಾಡುತ್ತಿದ್ದಾರೆ ಹಾಗೂ ಕಮೆಂಟ್ ಗಳ ಮುಖಾಂತರ ತಮ್ಮ ಪ್ರತಿಕ್ರಿಯೆಗಳನ್ನು ಹೊರಹಾಕುತ್ತಿದ್ದಾರೆ. ಐಪಿಎಸ್ ಅಧಿಕಾರಿ ರೂಪಿನ್ ಶರ್ಮ ಅವರು ತಮ್ಮ ಟ್ವಿಟರ್ ಅಕೌಂಟ್ ನಿಂದ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ.

You might also like

Comments are closed.