today Astrology Kannada prediction: ಮೇಷ ರಾಶಿ: ಈ ದಿನ ಮೇಷ ರಾಶಿಯವರಿಗೆ ಇಂದಿನ ನಿಮ್ಮ ಕೆಲಸ ಕಾರ್ಯಗಳು ಉತ್ತಮವಾಗಿ ನೆರವೇರಲಿದೆ. ಆದಾಯದಲ್ಲಿ ಹೆಚ್ಚಳ ಸಾಧ್ಯತೆ. ಜೀವನದಲ್ಲಿ ಒತ್ತಡ ಹೆಚ್ಚಲಿದೆ. ಅನಿರೀಕ್ಷಿತ ಧನಾಗಮನ ಆಗುವ ಸಾಧ್ಯತೆ ಇದೆ ಹಗ್ಗವು ನಿಮ್ಮ ಪ್ರೀತಿ ಪಾತ್ರರೊಂದಿಗೆ ಉತ್ತಮವಾಗಿ ಸಮಯ ಕಳೆಯಲಿದ್ದೀರಿ
ವೃಷಭ ರಾಶಿ: ಇವತ್ತಿನ ದಿನ ವೃಷಭ ರಾಶಿಯವರು ನೀವು ಇಂದು ಪ್ರೀತಿಪಾತ್ರರೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಯಸುತ್ತೀರಿ. ನಿಮ್ಮ ಗಂಭೀರ ಸಮಸ್ಯೆಗಳೂ ದೂರವಾಗಲಿವೆ. ಅಷ್ಟೇ ಅಲ್ಲ ಮಕ್ಕಳ ವಿಷಯದಲ್ಲಿ ಸಂತೋಷದ ಸುದ್ದಿ ಕೇಳಲಿದ್ದೀರಿ ಇನ್ನು ನಿಮ್ಮ ಕಾರ್ಯಕ್ಷೇತ್ರದಲ್ಲಿ ಸಂಪೂರ್ಣ ಅನುಕೂಲವಾಗಿರುತ್ತದೆ.
ಮಿಥುನ ರಾಶಿ: ಈ ದಿನ ಮಿಥುನ ರಾಶಿಯವರು ಆರೋಗ್ಯದ ದೃಷ್ಟಿಯಿಂದ ಯಾವುದೇ ತೊಂದರೆಗಳು ಕಾಣುತ್ತಿಲ್ಲ. ನಿಮ್ಮ ಮನೆಗೆ ದೂರದ ಸಂಬಂಧಿಗಳ ಆಗುವ ನಿರೀಕ್ಷೆ ಇದೆ ಕೊಟ್ಟಂತ ಸಾಲ ಮರಳಿ ಪಡೆಯುವ ಸಾಧ್ಯತೆ ಇದೆ
ಕಟಕ ರಾಶಿ: ಇವತ್ತಿನ ದಿನ ಕಟಕ ರಾಶಿಯವರು ಈ ದಿನ ಶೀಘ್ರ ಹಣ ಸಂಪಾದಿಸಲು ಯಾವುದೇ ಕೆಟ್ಟ ಮಾರ್ಗ ಆಯ್ದುಕೊಳ್ಳದಿರಿ. ಕಚೇರಿಯಲ್ಲಿ ಸಹೋದ್ಯೋಗಿಗಳ ಸಹಕಾರ ಇರುತ್ತದೆ. ನಿಮ್ಮ ಪ್ರಯಾಣ ವಿಚಾರದಲ್ಲಿ ಸ್ವಲ್ಪ ಎಚ್ಚರವಾಗಿರಿ
ಸಿಂಹ ರಾಶಿ: ಈ ದಿನ ಸಿಂಹ ರಾಶಿಯವರು ಸಂಗಾತಿಯೊಂದಿಗೆ ಕಲಹ ಉಂಟಾಗಬಹುದು. ಪದಗಳ ಬಳಕೆಯಲ್ಲಿ ಎಚ್ಚರಿಕೆ ಇರಲಿ. ವ್ಯಾಪಾರಿಗಳಿಗೆ ನಷ್ಟ ಉಂಟಾಗುವ ಸಾಧ್ಯತೆಗಳಿವೆ. ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಚೆನ್ನಾಗಿ ಯೋಚಿಸಿ. ಯಾವುದೇ ಹೊಸ ಕೆಲಸಕ್ಕೆ ಕೈ ಹಾಕುವ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ
ಕನ್ಯಾ ರಾಶಿ: ಇವತ್ತಿನ ದಿನ ಕನ್ಯಾ ರಾಶಿಯವರಿಗೆ ಇಂದು ನಿಮಗೆ ಕಚೇರಿಯಲ್ಲಿ ಕೆಲ ಸವಾಲುಗಳು ಬರಬಹುದು. ಕುಟುಂಬ ಜೀವನ ಉತ್ತಮವಾಗಿರುತ್ತದೆ. ಹಿತಶತ್ರುಗಳ ಮೇಲೆ ಗಮನವಿರಿಸಿ. ನಿಮ್ಮ ಕೆಲಸ ಕಾರ್ಯದ ಬಗ್ಗೆ ಹಿಂದೆ ಮಾತಾಡುತ್ತಾರೆ ಇದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ನಿಮ್ಮ ಕೆಲಸ ಕಾರ್ಯದಲ್ಲಿ ನಿರತರಾಗಿ
ತುಲಾ ರಾಶಿ: ಈ ದಿನ ತುಲಾ ರಾಶಿಯವರಿಗೆ ಇಂದು ನಿಮಗೆ ಉತ್ತಮ ದಿನವಾಗಿದೆ. ಇಂದು ನಿಮ್ಮ ಕೆಲಸಗಳು ಪೂರ್ಣಗೊಳ್ಳಲಿದೆ. ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತದೆ. ನಿಮ್ಮ ದಿನನಿತ್ಯದ ವೆಚ್ಚದ ಮೇಲೆ ಸ್ವಲ್ಪ ನಿಯಂತ್ರಣ ಇರಲಿ. ಅರೋಗ್ಯ ವಿಚಾರದಲ್ಲಿ ಸ್ವಲ್ಪ ಎಚ್ಚರವಾಗಿರಿ
ವೃಶ್ಚಿಕ ರಾಶಿ: ಈ ದಿನ ವೃಶ್ಚಿಕ ರಾಶಿಯವರು ಇಂದು ನಿಮ್ಮ ಉದ್ಯೋಗದಲ್ಲಿ ಹೊರೆ ಹೆಚ್ಚಲಿದೆ. ದೂರದ ಪ್ರಯಾಣ ಏರ್ಪಡಬಹುದು. ಪ್ರಯಾಣದಲ್ಲಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿ. ಈ ದಿನ ಮಕ್ಕಳ ವಿಚಾರದಲ್ಲಿ ಸ್ವಲ್ಪ ಜಾಗೃತರಾಗಿ
ಧನು ರಾಶಿ: ಧ್ಜನು ರಾಶಿಯವರು ಈ ದಿನ ಸ್ನೇಹಿತರೊಂದಿಗೆ ಸಮಯ ಕಳೆಯಲು ಉತ್ತಮ ದಿನವಾಗಿದೆ. ನಕಾರಾತ್ಮಕ ಯೋಚನೆಗಳು ನಿಮ್ಮಲ್ಲಿ ಬರಲು ಬಿಡಬೇಡಿ. ಪ್ರಯಾಣದಲ್ಲಿ ಎಚ್ಚರವಾಗಿರಿ ಸ್ನೇಹಿತರಿಂದ ಸಹಾಯ ಸಿಗಲಿದೆ
ಮಕರ ರಾಶಿ: ಮಕರ ರಾಶಿಯವರ ಈ ದಿನ ನೀವು ಕೆಲಸದ ಮೇಲೆ ಹೆಚ್ಚಿನ ಗಮನ ನೀಡಿ. ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರಲಿದೆ. ಉತ್ತಮ ಆರೋಗ್ಯವನ್ನು ಹೊಂದಿರಲಿದ್ದೀರಿ. ಭವಿಷ್ಯದ ಕುರಿತು ಉಳಿತಾಯವನ್ನು ಮಾಡಬಯಸಿದ್ದರೆ ಇಂದು ನಿರ್ಧಾರ ಕೈಗೊಳ್ಳಲು ಉತ್ತಮ ದಿನವಾಗಿದೆ.
ಕುಂಭ ರಾಶಿ: ಕುಂಭ ರಾಶಿಯವರಿಗೆ ಇಂದು ಒತ್ತಡಗಳಿಂದ ದೂರವಾಗಿ ನಿರಾಳವಾಗುತ್ತೀರಿ. ಕೋರ್ಟ್ ಕಚೇರಿ ಕೆಲಸಗಳಿಂದ ಈ ದಿನ ನಿಮಗೆ ಬ್ರೇಕ್ ಸಿಗುವ ಸಾಧ್ಯತೆ ಹೀಚಾಗಿದೆ
ಮೀನ ರಾಶಿ: ಈ ದಿನ ಮೀನಾ ರಾಶಿಯವರ ಪಾಲಿಗೆ ಮೇಲಧಿಕಾರಿಗಳಿಗೆ ಬೇಜವಾಬ್ದಾರಿಯ ಉತ್ತರ ನೀಡಿದರೆ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಕೋಪವನ್ನು ನಿಯಂತ್ರಿಸಿ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿ.