ಶಾಲಾ ದಿನಗಳಲ್ಲಿ ನಿಮಗೂ ಸಹ ಕೆಲವು ಶಿಕ್ಷಕರು ಮಾಡುವ ಪಾಠ ತುಂಬಾ ಬೋರಿಂಗ್ ಆಗಿದ್ದು, ಇನ್ನು ಕೆಲವು ಶಿಕ್ಷಕರು ಮಾಡುವ ಪಾಠ ತುಂಬಾನೇ ಇಂಟೆರೆಸ್ಟಿಂಗ್ ಆಗಿರಬಹುದು, ಇದಕ್ಕೆ ಕಾರಣ ಆ ಶಿಕ್ಷಕರ ಪಾಠ ಮಾಡುವ ಶೈಲಿಯೇ ಆಗಿರುತ್ತದೆ. ಕೆಲವು ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ಅದೆಷ್ಟರ ಮಟ್ಟಿಗೆ ತಮ್ಮ ಪಾಠದತ್ತ ಸೆಳೆದಿರುತ್ತಾರೆ ಎಂದರೆ ಆ ಶಿಕ್ಷಕ ಅಥವಾ ಶಿಕ್ಷಕಿಯ ಪಾಠ ಶುರುವಾದರೆ ಸಾಕು ಕೊಂಚವು ಗಮನ ಬೇರೆ ಕಡೆಗೆ ಹೋಗದಂತೆ ನೋಡಿಕೊಳ್ಳುವ ರೀತಿಯಲ್ಲಿರುತ್ತದೆ.
ಈ ರೀತಿ ಮಕ್ಕಳನ್ನು ತಮ್ಮ ಪಾಠದತ್ತ ಸೆಳೆಯಲು, ಕೆಲವು ಶಿಕ್ಷಕ ಶಿಕ್ಷಕಿಯರು ಒಂದು ಹೆಜ್ಜೆ ಮುಂದೆ ಹೋಗಿ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಪಾಠದ ಮಧ್ಯದಲ್ಲಿ ಅವರೊಂದಿಗೆ ನೃತ್ಯ ಮಾಡುವುದು ಕಥೆ ಹೇಳುವುದು ಹಾಡು ಹೇಳುವುದು ಮುಂತಾದ ಮನರಂಜನೆ ನೀಡುವ ಕೆಲಸ ಮಾಡಿ ಮಕ್ಕಳನ್ನು ತಮ್ಮತ್ತ ಸೆಳೆಯುವ ಕೆಲಸ ಮಾಡುತ್ತಾರೆ, ಹೀಗಾಗಿ ಮಕ್ಕಳಿಗೆ ಇಂತಹ ಶಿಕ್ಷಕ ಶಿಕ್ಷಕಿಯರ ಪಾಠವೆಂದರೆ ಬಲು ಇಷ್ಟವಾಗಿರುತ್ತದೆ.
ಇಂತಹುದೇ ಒಂದು ವಿಡಿಯೋ ಸಧ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದು ಅದರಲ್ಲಿ ದೆಹಲಿ ಮೂಲದ ಓರ್ವ ಶಾಲಾ ಶಿಕ್ಷಕಿ ಮನು ಗುಲಾಟಿ ಎಂಬುವವರು ತಮ್ಮ ವಿದ್ಯಾರ್ಥಿಗಳೊಂದಿಗೆ, “ಕಜರಾ ಮೋಹಬ್ಬತ್ ವಾಲಾ” ಎಂಬ ಹಾಡಿಗೆ ಹೆಜ್ಜೆ ಹಾಕಿದ್ದಾರೆ, ಆ ಡಾನ್ಸ್ ನಲ್ಲಿ ಶಿಕ್ಷಕಿಗೆ ಅವರ ವಿದ್ಯಾರ್ಥಿನಿಯರು ಸಾಥ್ ನೀಡಿದ್ದು ನೋಡಿದರೆ ತಿಳಿಯುತ್ತದೆ ಈ ಶಿಕ್ಷಕಿ ಮಕ್ಕಳೊಂದಿಗೆ ಅದೆಷ್ಟು ಬೆರೆತು ಹೋಗಿದ್ದಾರೆ ಎಂದು.
ಸಮ್ಮರ್ ಕ್ಯಾಂಪ್ ನ ಕೊನೆಯ ದಿನ ತಮ್ಮ ವಿದ್ಯಾರ್ಥಿಗಳೊಂದಿಗೆ ಹೆಜ್ಜೆ ಹಾಕಿರುವ ಮನು ಗುಲಾಟಿಯವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆ ManuGulati11 ಎಂಬ ಖಾತೆಯಲ್ಲಿ “ದೆಹಲಿ ನಗರದ ಸಾರಾ ಮೀನಾ ಬಜಾರ್ ನಿಂದ, ಸಮ್ಮರ್ ಕ್ಯಾಂಪ್ ನ ಕೊನೆಯ ದಿನ ನಮ್ಮ ಡಾನ್ಸ್ ಮೂವ್ ಗಳು ನಮ್ಮೆಲ್ಲರ ಸಂತೋಷ ಹೆಚ್ಚಿಸುವಲ್ಲಿ ಉಪಯುಕ್ತವಾಗುತ್ತವೆ” ಎಂಬ ಕ್ಯಾಪ್ಷನ್ ನೊಂದಿಗೆ ಹಂಚಿಕೊಂಡಿದ್ದಾರೆ.
ಇದುವರೆಗೂ ಈ ವಿಡಿಯೋವನ್ನು 6 ಲಕ್ಷಕ್ಕಿಂತಲೂ ಅಧಿಕ ಜನರು ವೀಕ್ಷಿಸಿದ್ದು, ಸಾವಿರಾರು ಜನರು ಲೈಕ್ ಮಾಡಿದ್ದಾರೆ ಹಾಗೂ ಶಿಕ್ಷಕಿ ಹಾಗೂ ವಿದ್ಯಾರ್ಥಿಗಳ ಪ್ರೀತಿಯನ್ನು ಕಂಡು ಸಂತಸ ವ್ಯಕ್ತಪಡಿಸಿ ಕಾಮೆಂಟ್ ಕೂಡ ಮಾಡಿದ್ದಾರೆ, ಮುಖ್ಯವಾಗಿ ಶಿಕ್ಷಕಿಯ ಲವಲವಿಕೆ, ಕಲಿಸುವಲ್ಲಿನ ಆಸಕ್ತಿ, ಮಕ್ಕಳೊಂದಿಗೆ ಬೆರೆಯುವ ಪರಿ ಇವೆಲ್ಲವನ್ನೂ ಮೆಚ್ಚಿ ತುಂಬಾ ಜನ ಕಾಮೆಂಟ್ ಮಾಡಿದ್ದಾರೆ.
ಆ ವಿಡಿಯೊ ಕೆಳಗಿದೆ ನೋಡಿ…
दिल्ली शहर का सारा मीना बाज़ार ले के।☺️
Our imperfect dance moves on the last day of summer camp…leading to some perfect moments of joy and togetherness.💕#SchoolLife #TeacherStudent pic.twitter.com/K50Zi1Qajf
— Manu Gulati (@ManuGulati11) June 16, 2022