ಚಿಕ್ಕ ವಯಸ್ಸಿನಿಂದಲೂ ಶಾಲಾ-ಕಾಲೇಜುಗಳಲ್ಲಿ ವಿದ್ಯೆ ಕಲಿಸುವ ಗುರುವನ್ನು ದೇವರು ಎಂದೇ ಭಾವಿಸಲಾಗುತ್ತೆ. ಒಬ್ಬ ಮನುಷ್ಯ ಉತ್ತಮ ನಾಗರಿಕನಾಗಬೇಕು ಎಂದರೆ ಅಲ್ಲಿ ಗುರುಗಳ ಪಾತ್ರ ಬಹಳ ಮುಖ್ಯ. ಅವರು ಹೇಳಿಕೊಟ್ಟಿರುವ ವಿದ್ಯೆ ಒಬ್ಬ ಮನುಷ್ಯನ ಜೀವನದಲ್ಲಿ ಬಹಳ ಮುಖ್ಯವಾಗಿರುತ್ತೆ ಗುರು ಶಿಷ್ಯರ ಸಂಬಂಧ ಇಂದು ನಿನ್ನೆಯದಲ್ಲ. ಪುರಾತನ ಕಾಲದಿಂದಲೂ ಗುರು ಶಿಷ್ಯ ಪರಂಪರೆ ನಮ್ಮಲ್ಲಿ ಚಾಲ್ತಿಯಲ್ಲಿದೆ
ಅದು ಈಗ ಆಧುನಿಕ ರೂಪ ಪಡೆದುಕೊಂಡಿದೆ ಅಷ್ಟೇ ಹೊರತು ಗುರು ಹಾಗೂ ಶಿಷ್ಯರು ಎನ್ನುವ ಸಂಬಂಧ ಇಂದಿಗೂ ಹಾಗೆಯೇ ಉಳಿದಿದೆ. ಸ್ನೇಹಿತರೆ ನಿಮಗೂ ನೆನಪಿರಬಹುದು ಚಿಕ್ಕವಯಸ್ಸಿನಲ್ಲಿ ಗುರು ಅಂದ್ರೆ ಭಯ ಇತ್ತು. ಟೀಚರ್ ಕ್ಲಾಸ್ ಗೆ ಬರುತ್ತಿದ್ದಾರೆ ಅಂದ್ರೆ ಮಕ್ಕಳು ಸೈಲೆಂಟ್ ಆಗಿ ಕುಳಿತುಕೊಳ್ಳುತ್ತಿದ್ದರು. ಅಷ್ಟೇ ಅಲ್ಲ ಪ್ರತಿ ತಪ್ಪಿಗೂ ಛಡಿ ಏಟು ಬೀಳುತ್ತಿತ್ತು.
ಗುರುಗಳ ಬಳಿ ಹೀಗೆ ಪೆಟ್ಟು ತಿಂದ ವಿದ್ಯಾರ್ಥಿಗಳು ತಮ್ಮ ತಪ್ಪನ್ನು ತಿದ್ದಿಕೊಳ್ಳುತ್ತಿದ್ದರು ಆದರೆ ಈಗ ಗುರು ಶಿಷ್ಯರ ಸಂಬಂಧದಲ್ಲಿ ತುಸು ಬದಲಾವಣೆಯಾಗಿದೆ ಅಥವಾ ಟೀಚರ್ ಹಾಗೂ ವಿದ್ಯಾರ್ಥಿಯ ನಡುವೆ ಭಯ ಭಕ್ತಿ ಗಿಂತ ಸ್ನೇಹ ಹೆಚ್ಚಾಗಿದೆ. ಸರ್ಕಾರದ ನೀತಿಯ ಪ್ರಕಾರವು ಇದೀಗ ಮಕ್ಕಳನ್ನು ಧಂಡಿಸುವ ಹಾಗೆ ಇಲ್ಲ. ಅವರನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳಬೇಕು.
ಅದೇ ರೀತಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಇದೀಗ ಹೆಚ್ಚು ಫ್ರೆಂಡ್ಶಿಪ್ ಕಾಣುತ್ತಿದೆ. ಇದು ಕೆಲವೊಮ್ಮೆ ಒಳ್ಳೆಯದೇ ಆದರೆ ಇನ್ನೂ ಕೆಲವೊಮ್ಮೆ ಇದು ವಿದ್ಯಾರ್ಥಿಗಳು ಹಾಳಾಗುವಲ್ಲಿಯೂ ಕೂಡ ಕಾರಣವಾಗಬಹುದು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಒಂದು ಗ್ಯಾಪ್ ಇರಲೇಬೇಕು ಅದನ್ನ ಬಿಟ್ಟು ಶಿಕ್ಷಕರ ಮಟ್ಟಕ್ಕೆ ವಿದ್ಯಾರ್ಥಿ ಯೋಜನೆ ಮಾಡಿದರೆ ಅಲ್ಲಿ ಅಪರಾಧಗಳು ನಡೆಯಬಹುದು.
ಗುರು ಶಿಷ್ಯರ ನಡುವೆ ಪ್ರೀತಿ ಇದ್ದರೆ ಒಳ್ಳೆಯದು ಆದರೆ ಅದು ಅಭಿಮಾನದ ಪ್ರೀತಿ ಆಗಿರಬೇಕೇ ಹೊರತು ಬೇರೆ ಯಾವ ಅರ್ಥವನ್ನು ಪಡೆದುಕೊಳ್ಳಬಾರದು. ಇತ್ತೀಚಿಗೆ, ತಮ್ಮ ಬೀಳ್ಕೊಡುಗೆ ಸಮಾರಂಭದಲ್ಲಿ ವಿದ್ಯಾರ್ಥಿಯೊಬ್ಬ ಟೀಚರ್ ಕೈಹಿಡಿದು ನೃತ್ಯ ಮಾಡಿದ್ದಾನೆ. ಬಹುಶಃ ಆ ಟೀಚರ್ ಆ ಕ್ಲಾಸಿನ ಫೇವರೆಟ್ ಟೀಚರ್ ಆಗಿರಬಹುದು, ಹಾಗಾಗಿ ಅವರು ಅಷ್ಟು ಕ್ಲೋಸ್ ಆಗಿ ಇದ್ದಾರೆ ಎಂದು ಅನಿಸುತ್ತೆ.
ಆದರೂ ವಿದ್ಯಾರ್ಥಿಯೊಬ್ಬ ತನಗೆ ಪಾಠ ಮಾಡುವ ಟೀಚರ್ ಜೊತೆ ಹೀಗೆ ನೃತ್ಯ ಮಾಡಿದ್ದು ನಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಟೀಚರ್ ಕೂಡ ಬಹಳ ಆಧುನಿಕ ರೀತಿಯಲ್ಲಿ ಸಾರಿ ಹುಟ್ಟು ವಿದ್ಯಾರ್ಥಿಯ ಜೊತೆ ನೃತ್ಯ ಮಾಡಿದ್ದಾರೆ ಈ ರೀತಿ ಮಾಡಿದರೆ ನೀವು ಮಕ್ಕಳಿಗೆ ಏನು ಶಿಕ್ಷಣ ಕೊಡುತ್ತೀರಿ ಎಂದು ಟೀಚರ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ನೆಟ್ಟಿಗರು. ನೀವು ಈ ವಿಡಿಯೊವನ್ನು ಇಲ್ಲಿ ನೋಡಬಹುದು. ಈ ವಿಡಿಯೋ ನೋಡಿ ನಿಮಗೆ ಏನು ಅನ್ನಿಸಿತು ಎನ್ನುವುದನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.