
ಭಾರತದ ಅದ್ಭುತ ಕಾರು ನಿರ್ಮಾತೃ ಕಂಪನಿ ಟಾಟಾ ಮೋಟರ್ಸ್ ರವರು ಭಾರತೀಯ ಗ್ರಾಹಕರ ನೆಚ್ಚಿನ ಫ್ಯಾಮಿಲಿ ಕಾರ್ ಟಾಟಾ ಸುಮೋವನ್ನು ಅದ್ಭುತ ಸ್ಪೇಸ್ ಹಾಗೂ ಆಧುನಿಕ ಫೀಚರ್ಸ್ ನೊಂದಿಗೆ ಮಾರುಕಟ್ಟೆಗೆ ತರುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹವಾ ಮಾಡುತ್ತಿರುವ ಮಹಿಂದ್ರಾ & ಮಹಿಂದ್ರಾ ಕಂಪನಿಯ ಬೊಲೆರೋ ಅಪ್ಡೇಟೆಡ್ ಮಾಡೆಲ್ ಹಾಗೂ ಸ್ಕಾರ್ಪಿಯೋ ಅಪ್ಡೇಟೆಡ್ ಮಾಡೆಲ್ ಗಳಿಗೆ ಟಕ್ಕರ್ ಕೊಡಲು ಬರುತ್ತಿರುವ ಈ ಕಾರು ಅವುಗಳಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ, ಅಂದರೆ ಈ ಕಾರಿನ ಆರಂಭಿಕ ಬೆಲೆ ಕೇವಲ 5.45 ಲಕ್ಷ ರೂಪಾಯಿಗಳಿಂದ ಆರಂಭವಾಗಲಿದೆ!
ಟಾಟಾ ಸುಮೋ ಅಪ್ಡೇಟೆಡ್ ವರ್ಷನ್ ನ ಎಂಜಿನ್ :
ಹೊಸ ಟಾಟಾ ಸುಮೋದದಲ್ಲಿ 2.0 ಲೀಟರ್ ನ ರೋಟೆಕ್ ಡೀಸೆಲ್ ಎಂಜಿನ್ ನ ಡಿ-ಟ್ಯೂನ್ ನೀಡಲಾಗಿದೆ, ಈ ಎಂಜಿನ್ 140 bh ಪವರ್ ಹಾಗೂ 350 nm ಟಾರ್ಕ್ ಜೆನರೇಟ್ ಮಾಡುತ್ತದೆ, ಇದಲ್ಲದೇ 1.6 ಲೀಟರ್ ಪೆಟ್ರೋಲ್ ಎಂಜಿನ್ ಡಿ-ಟ್ಯೂನ್ ನೊಂದಿಗೆ ಸಹ ಬರುತ್ತಿದ್ದು, ಈ ಎಂಜಿನ್ ಅನ್ನು ಈಗಾಗಲೇ ಟಾಟಾರವರ ಹ್ಯಾರಿಯರ್ ಹಾಗೂ ಸಫಾರಿಗಳಲ್ಲಿ ಬಳಸಲಾಗಿದೆ.
ಮೊದಲಿನಿಂದಲೂ ಟಾಟಾ ಸುಮೊ ಎಂಬುದು ಟಾಟಾರವರ ಒಂದು ಅದ್ಭುತ ಕಾರ್ ಆಗಿ ಹೊರಹೊಮ್ಮಿದೆ, ಕಾಲಕಾಲಕ್ಕೆ ಅದರ ಅಪ್ಡೆಟೆಡ್ ವರ್ಷನ್ ಬರುತ್ತಲೇ ಇರುತ್ತವೆ. ಈ ಟಾಟಾ ಸುಮೋ ಬಹುದಿನಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಹವಾ ಸೃಷ್ಟಿಸಿದ್ದು, 2936 ಸಿಸಿ ಡೀಸೆಲ್ ಎಂಜಿನ್ ನೊಂದಿಗೆ ಅಂದಾಜು 15 kmpl ಮೈಲೇಜ್ ನೀಡುತ್ತಿದೆ.
ಅಪ್ಡೇಟೆಡ್ ಟಾಟಾ ಸುಮೋದ ಆಧುನಿಕ ಫೀಚರ್ಸ್ :
ಟಾಟಾ ಮೋಟರ್ಸ್ ರವರು ತಮ್ಮ ಕಂಪನಿಯ ಮರಿ ಆನೆಯಂತಿರುವ 7 ಸೀಟರ್ ಟಾಟಾ ಸುಮೋ ಹೊಸ ವರ್ಷನ್ ಈ ಸೆಗ್ಮೆಂಟ್ ನ ಕಾರುಗಳಿಗೆ ಟಕ್ಕರ್ ಕೊಡಲಿದೆ, ಅದ್ಭುತ ಫೀಚರ್ಸ್ ನೊಂದಿಗೆ ಈ ಕಾರಿನಲ್ಲಿ ಕ್ರೂಜ್ ಕಂಟ್ರೋಲ್ ಕೂಡ ಅಳವಡಿಸಿದ್ದು ಇದರಿಂದ ಲಾಂಗ್ ಹೈ ವೇ ಗಳಲ್ಲಿ ಡ್ರೈವ್ ಮಾಡುವಾಗ ಡ್ರೈವರ್ ಗೆ ಭಾರೀ ಸಹಕಾರಿಯಾಗಲಿದೆ.
ಆಧುನಿಕ ಫೀಚರ್ ಗಳಾದ, ಡಿಜಿಟಲ್ ಇನ್ಫೋಟೆನ್ಮೆಂಟ್ ಸಿಸ್ಟಮ್ ಮತ್ತು ಆಂಡ್ರಾಯ್ಡ್ ಆಟೋ ಸ್ಪೋರ್ಟ್ ಕೂಡ ಅಳವಡಿಸಲಾಗಿದೆ, ಇದರೊಟ್ಟಿಗೆ ಚೈಲ್ಡ್ ಸೇಫ್ಟಿ ಲಾಕ್, ಕೀ ಲೆಸ್ ಸ್ಟಾರ್ಟ್, ಡಿಜಿಟಲ್ USB ಸಪೋರ್ಟ್, SMS ಅಲರ್ಟ್, ಕಾಲ್ ಅಲರ್ಟ್, ಬ್ಲೂ ಟೂತ್ ಸಪೋರ್ಟ್, LCD ಕನೆಕ್ಟಿವಿಟಿ, ಡುಯಲ್ ಏರ್ ಬ್ಯಾಗ್ ಮತ್ತು ಪವರ್ಫುಲ್ ಬ್ರೇಕ್ ನಂತಹ ಅದ್ಭುತ ಫೀಚರ್ಸ್ ಟಾಟಾ ಸುಮೋವನ್ನು ಮೊದಲಿಗಿಂತಲೂ ಅದ್ಭುತವಾಗಿಸಿವೆ.
ಹೊಸ ಟಾಟಾ ಸುಮೋದ ಮೇಲೆಜ್ :
ಟಾಟಾ ಸುಮೋ ಅದ್ಭುತ ಶಕ್ತಿಶಾಲಿ ಎಂಜಿನ್ ಗಳೊಂದಿಗೆ ಬರುತ್ತಿದ್ದರೂ ಸಹ ಈ ಕಾರಿನ ಮೈಲೇಜ್ ಮಾತ್ರ ಈ ಸೆಗ್ಮೆಂಟ್ ನ ಬೇರೆ ಕಾರುಗಳಿಗಿಂತ ಹೆಚ್ಚಾಗಿಯೇ ಇದೆ, ಅಂದರೆ ಟಾಟಾ ಸುಮೋ 16 kmpl ಮೈಲೇಜ್ ನೀಡಲಿದೆ. ಇನ್ನು ಹೊಸ ಟಾಟಾ ಸುಮೋದ ಡೈಮೆನ್ಶನ್ ಬಗ್ಗೆ ಮಾತನಾಡುವುದಾದರೆ, ಈ ಕಾರಿನ ಗ್ರೌಂಡ್ ಕ್ಲಿಯರನ್ಸ್ 190 mm ಇದ್ದು, ಉದ್ದ 4258 mm ಆಗಿದೆ, ಅಗಲ 1700 mm ಹಾಗೂ ವೀಲ್ ಬೇಸ್ 2425 mm ನೀಡಲಾಗಿದೆ.
ಟಾಟಾ ಸುಮೋದ ಬೆಲೆ :
ಟಾಟಾ ಸುಮೋ ಕಾರಿನ ವೆರಿಯಂಟ್ ಗಳು ಇಂಧನದ ಪ್ರಕಾರಗಳ ಮೇಲೆ ನಿರ್ಧಾರಿತವಾಗುತ್ತದೆ. ಟಾಟಾ ಮೋಟಾರ್ಸ್ ರವರ ಈ ಅದ್ಭುತ ವಾಹನದ ಬೆಲೆ 6.5 ಲಕ್ಷ ರೂಪಾಯಿಗಳಿಂದ ಆರಂಭವಾಗಿ 10 ಲಕ್ಷ ರೂಪಾಯಿಗಳವರೆಗೂ ಇರಲಿದೆ, ಈ ವಾಹನದ ಅತ್ಯಂತ ಕಡಿಮೆ ಆನ್ ರೋಡ್ ಪ್ರೈಸ್ ಹಿಮಾಚಲ ಪ್ರದೇಶದ ಸೋಲನ್ ಎಂಬಲ್ಲಿ ಲಭ್ಯವಿದೆ.
Comments are closed.