ತುಂಬು ಗರ್ಭಿಣಿಯಾದ ನಟಿ ತಾರಾ,ತಾರಾ ಅವರನ್ನ ನೋಡಿ ಬೆಚ್ಚಿಬಿದ್ದ ಜನತೆ!

CINEMA/ಸಿನಿಮಾ

ಕನ್ನಡ ಚಿತ್ರರಂಗದ ಜನಪ್ರಿಯ ನಟಿ ತಾರಾ ಅನುರಾಧಾ (Tara Anuradha). ‘ಹಸೀನಾ’, ‘ಸೈನೈಡ್’, ‘ಹೆಬ್ಬೆಟ್ ರಾಮಕ್ಕ’, ‘ಬಡವ ರಾಸ್ಕಲ್’ ಮುಂತಾದ ಅನೇಕ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ತಾರಾ ಅನುರಾಧಾ ಇದೀಗ ಸುದ್ದಿಯಾಗಿದ್ದಾರೆ. ಅದಕ್ಕೆ ಕಾರಣ ಒಂದು ವೈರಲ್ ಫೋಟೋ. ನಟಿ ತಾರಾ ಅನುರಾಧಾ ಗರ್ಭಿಣಿಯಂತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗಾದ್ರೆ, ಈ ಫೋಟೋದ ಅಸಲಿಯತ್ತೇನು ಅಂತ ಕೇಳಿದ್ರಾ..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ…

ವೈರಲ್ ಫೋಟೋ
ಹಳದಿ ಬಣ್ಣದ ಸೀರೆ ತೊಟ್ಟಿರುವ ನಟಿ ತಾರಾ ಅನುರಾಧಾ ಗರ್ಭಿಣಿಯಂತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದರ ಅಸಲಿಯತ್ತು ಏನೆಂದರೆ.. ನಟಿ ತಾರಾ ಅನುರಾಧಾ ನಿಜ ಜೀವನದಲ್ಲಿ ಗರ್ಭಿಣಿಯಾಗಿಲ್ಲ. ಆದರೆ, ಸಿನಿಮಾದಲ್ಲಿ ಗರ್ಭಿಣಿಯ ಪಾತ್ರ ನಿಭಾಯಿಸುತ್ತಿದ್ದಾರೆ. ಗರ್ಭಿಣಿಯ ಗೆಟಪ್‌ನಲ್ಲಿ ನಟಿ ತಾರಾ ಅನುರಾಧಾ ಕಾಣಿಸಿಕೊಂಡಾಗ ಕ್ಲಿಕ್ ಮಾಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಅಷ್ಟೇ..!

ನಟಿ ತಾರಾ ಅನುರಾಧಾ ಭಿನ್ನ-ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಬಾರಿ ಅವರು ಗರ್ಭಿಣಿಯ ಪಾತ್ರವನ್ನು ಆಯ್ದುಕೊಂಡಿದ್ದಾರೆ. ‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ರಾಜೀವ್‘ಉಸಿರೇ ಉಸಿರೇ’ ಚಿತ್ರಕ್ಕೆ ಸಿ.ಎಂ.ವಿಜಯ್ ನಿರ್ದೇಶನ ಮಾಡುತ್ತಿದ್ದಾರೆ. ಪ್ರದೀಪ್ ಯಾದವ್ ಎಂಬುವರು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಶ್ರೀಜಿ ಘೋಷ್ ನಾಯಕಿಯಾಗಿ ನಟಿಸುತ್ತಿದ್ದಾರೆ.

ವೈರಲ್ ಫೋಟೋ: ತುಂಬು ಗರ್ಭಿಣಿಯಾದ ನಟಿ ತಾರಾ ಅನುರಾಧಾ

ನಟಿ ತಾರಾ
‘ತುಳಸಿದಳ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ನಟಿ ತಾರಾ ಗುರುತಿಸಿಕೊಂಡರು. ಬಳಿಕ ‘ಆನಂದ್’, ‘ಗುರಿ’, ‘ಮನೆಯೇ ಮಂತ್ರಾಲಯ’, ‘ರಣರಂಗ’, ‘ಡಾಕ್ಟರ್ ಕೃಷ್ಣ’, ‘ಉಂಡು ಹೋದ ಕೊಂಡು ಹೋದ’, ‘ಬೆಳ್ಳಿ ಕಾಲುಂಗುರ’, ‘ಮುಂಜಾನೆಯ ಮಂಜು’, ‘ಮುದ್ದಿನ ಮಾವ’, ‘ಸಿಪಾಯಿ’, ‘ಕಾನೂರು ಹೆಗ್ಗಡತಿ’, ‘ಹಸೀನಾ’, ‘ಸೈನೈಡ್’, ‘ಈ ಬಂಧನ’, ‘ಶ್ರಾವಣಿ ಸುಬ್ರಮಣ್ಯ’, ‘ಹೆಬ್ಬೆಟ್ ರಾಮಕ್ಕ’, ‘ಬಡವ ರಾಸ್ಕಲ್’ ಮುಂತಾದ ಸಿನಿಮಾಗಳಲ್ಲಿ ತಾರಾ ಅನುರಾಧಾ ಅಭಿನಯಿಸಿದ್ದಾರೆ. ತಮ್ಮ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಹಾಗೂ ರಾಷ್ಟ್ರ ಪ್ರಶಸ್ತಿಯನ್ನು ತಾರಾ ಅನುರಾಧಾ ಮುಡಿಗೇರಿಸಿಕೊಂಡಿದ್ದಾರೆ.

ಕಿರುತೆರೆಯಲ್ಲಿ ‘ರಾಜಾ ರಾಣಿ’ ಹಾಗೂ ‘ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ನಟಿ ತಾರಾ ಅನುರಾಧಾ ಭಾಗವಹಿಸಿದ್ದರು.
ನಾಯಕನಾಗಿ ‘ಉಸಿರೇ ಉಸಿರೇ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಚಿತ್ರದಲ್ಲಿ ನಟಿ ತಾರಾ ಅನುರಾಧಾ ಕೂಡ ಪ್ರಮುಖ ಪಾತ್ರದಲ್ಲಿದ್ದು, ತುಂಬು ಗರ್ಭಿಣಿಯ ಪಾತ್ರ ನಿಭಾಯಿಸುತ್ತಿದ್ದಾರೆ.




ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಚಂದನ್ ಕುರಿತು ಕೆಟ್ಟದಾಗಿ ಕಾಮೆಂಟ್ ಮಾಡಿದವರಿಗೆ ಕವಿತಾ ಖಡಕ್ ವಾರ್ನ್..! ಹೇಳಿದ್ದು ಕೇಳಿ...