
Kannada News: ಕನ್ನಡ ಕಿರುತೆರೆಯಲ್ಲಿ ಮನೆಮಾತಾಗಿರುವ ಹೆಸರು ಶ್ವೇತಾ ಚೆಂಗಪ್ಪ (Shwetha Chengappa). ಧಾರಾವಾಹಿಗಳ ಮೂಲಕ ತೆರೆಮುಂದೆ ಬಂದ ನಟಿ ಶ್ವೇತಾ, ಬೆಳ್ಳಿತೆರೆಯಲ್ಲೂ ನಟಿಸಿದ್ದಾರೆ. ಸಾಹಸಸಿಂಹ ಡಾ.ವಿಷ್ಣುವರ್ಧನ್ (Vishnuvardhan) ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರ ಜೊತೆ ತೆರೆಹಂಚಿಕೊಂಡಿದ್ದಾರೆ. ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಶ್ವೇತಾ. ಉದಯ ಟಿವಿ ಹಾಗೂ ಅಂದಿನ ಈಟಿವಿಯಲ್ಲಿ ಹಲವಾರು ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ನಂತರ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದ ಶ್ವೇತಾ, ಮಜಾ ಟಾಕೀಸ್ (Maja Talkies) ಮೂಲಕ ಕಿರುತೆರೆಗೆ ವಾಪಸ್ ಬಂದರು.
ಮಜಾ ಟಾಕೀಸ್ ನಲ್ಲಿ ರಾಣಿ ಪಾತ್ರ ನಿರ್ವಹಿಸುತ್ತಿದ್ದ ಶ್ವೇತಾ ಚೆಂಗಪ್ಪ ಹಾಸ್ಯಪಾತ್ರದಲ್ಲಿ ಎಲ್ಲರ ಮನಸೆಳೆದರು. ರಾಣಿ ಪಾತ್ರದ ಮೂಲಕ ಇನ್ನಷ್ಟು ಜನಪ್ರಿಯತೆ ಪಡೆದರು. ರಾಣಿ ಪಾತ್ರದಲ್ಲಿ ಪ್ರತಿ ಸಂಚಿಕೆಯಲ್ಲೂ ಸಹ ವಿಭಿನ್ನವಾದ ಗೆಟಪ್ ಗಳಲ್ಲಿ ಮಿಂಚುತ್ತಿದ್ದರು ಶ್ವೇತಾ. ಮಗು ಜಿಯಾನ್ ಅಯ್ಯಪ್ಪನಿಗೆ ಜನ್ಮ ನೀಡಿದ ನಂತರ ನಟನೆಯಿಂದ ಮತ್ತೊಂದು ಬ್ರೇಕ್ ತೆಗೆದುಕೊಂಡಿದ್ದರು. ಎಲ್ಲಾ ಹೆಣ್ಣು ಮಕ್ಕಳಂತೆ ಶ್ವೇತಾ ಸಹ ತಮ್ಮ ಸಂಪೂರ್ಣ ಸಮಯವನ್ನು ಮಗುವಿನ ಜೊತೆ ಕಳೆಯಲು ಬಯಸಿದ್ದರು. ಅಂತೆಯೇ ಪೂರ್ಣ ಸಮಯವನ್ನು ಮಗುವಿನ ಪಾಲನೆ ಪೋಷಣೆ, ಗಂಡನನ್ನು ನೋಡಿಕೊಳ್ಳುವುದರಲ್ಲೇ ಕಳೆಯುತ್ತಿದ್ದಾರೆ. ಇದನ್ನು ಓದಿ.
ಈಗ ಶ್ವೇತಾ ಚೆಂಗಪ್ಪ ಅವರು ವೇದ (Vedha) ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಶಿವಣ್ಣ (Shivarajkumar) ಅವರ 125ನೇ ಸಿನಿಮಾದಲ್ಲಿ ಬಹಳ ಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಶ್ವೇತಾ ಚೆಂಗಪ್ಪ. ಈ ಪಾತ್ರ ಬಹಳ ಬೋಲ್ಡ್ ಆಗಿದ್ದು, ಖಳನಾಯಕರನ್ನು ಬಡಿದೆಬ್ಬಿಸಿ ಫೈಟ್ ಮಾಡುವಂತಹ ಪಾತ್ರ ಇದಾಗಿದೆ.
ಈ ಪಾತ್ರದಲ್ಲಿ ಶ್ವೇತಾ ಚೆಂಗಪ್ಪ ಅವರ ಅಭಿನಯವನ್ನು ಜನರು ತುಂಬಾ ಇಷ್ಟಪಟ್ಟಿದ್ದು ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬೋಲ್ಡ್ ಆದ ಪಾತ್ರದಲ್ಲಿ ನಟಿಸಿ, ಈಗಲೂ ಬಹಳ ಯಂಗ್ ಆಗಿ ಕಾಣುವ ಶ್ವೇತಾ ಚೆಂಗಪ್ಪ ಅವರ ವಯಸ್ಸು ಎಷ್ಟು ಎಂದು ಜನರಲ್ಲಿ ಕುತೂಹಲ ಮೂಡಿದ್ದು, ಶ್ವೇತಾ ಅವರಿಗೆ ಈಗ 42 ವರ್ಷಗಳು. ನಿಜವಾಗಿಯೂ ಶ್ವೇತಾ ಅವರನ್ನು ನೋಡಿದರೆ ಕಾಣಿಸುವುದಿಲ್ಲ. ವೇದ್ ಸಿನಿಮಾದಲ್ಲಿ ಶ್ವೇತಾ ಚೆಂಗಪ್ಪ, ಅದಿತಿ ಸಾಗರ್ ಮತ್ತು ಗಾನವಿ ಲಕ್ಷ್ಮಣ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನು ಓದಿ.
Comments are closed.