ಸದ್ಯ ನಮ್ಮ ಕನ್ನಡ ಕಿರುತೆರೆಯ ರಿಯಾಲಿಟಿ ಶೋ ನಲ್ಲಿ ಆಂಕರ್ ಅಂದರೆ ಕೇಳಿ ಬರುವ ಮೊದಲ ಹೆಸರು ಅನುಶ್ರೀ ಅವರದ್ದು ಮಾತ್ರ ಎನ್ನಬಹುದು. ಹೌದು ಅದರಲ್ಲೂ ಜೀ ವಾಹಿನಿಯಲ್ಲಿ ಪ್ರಸಾರವಾಗುವ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಹೆಚ್ಚು ಕಡಿಮೆ ಅನುಶ್ರೀಯವರ ನಿರೂಪಣೆ ಇದ್ದೇ ಇರುತ್ತದೆ. ಇನ್ನು ಚಿತ್ರರಂಗದಲ್ಲಿ ಯಾವುದೇ ಸಿನಿಮಾ ಇವೆಂಟ್ ಗಳು ನಡೆದರೂ ಸಹ ಅಲ್ಲಿ ಅನುಶ್ರೀ ಅವರದ್ದೇ ಹೋಸ್ಟಿಂಗ್.
ಒಟ್ಟಾರೆಯಾಗಿ ಹೇಳುವುದಾದರೆ ಕನ್ನಡಚಿತ್ರರಂಗದಲ್ಲಿ ಹಾಗೂ ಕಿರುತೆರೆ ಲೋಕದಲ್ಲಿ ನಿರೂಪಕಿ ಎಂದು ಅನುಶ್ರೀ ಅವರನ್ನು ಮಾತ್ರ ಹೆಚ್ಚಾಗಿ ಗುರುತಿಸಲಾಗುತ್ತದೆ. ಆದರೆ ಇದೀಗ ಅನುಶ್ರೀ ಅವರ ದಾಖಲೆಯನ್ನು ಮುರಿಯುವುದಕ್ಕೆ ಇನ್ನೊಬ್ಬ ನಿರೂಪಕಿ ರೆಡಿಯಾಗಿದ್ದು ಇವರು ಬೇರೆ ಯಾರೂ ಅಲ್ಲ ಈವರೆಗೆ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿ ಹಲವು ರಿಯಾಲಿಟಿ ಶೋಗಳಲ್ಲಿಯೂ ಕೂಡ ಭಾಗವಹಿಸಿದ್ದ ಶ್ವೇತಾ ಚಂಗಪ್ಪ ಅವರು. ಮಂಗಳೂರಿನ ಬೆಡಗಿ ಅನುಶ್ರೀಗಿಂತ ಒಂದು ಕೈ ಮೇಲೆ ಎನ್ನುವಂತೆ ನಿರೂಪಣೆಯಲ್ಲಿ ಸಕ್ಸೆಸ್ ಆಗಿದ್ದಾರೆ ಈ ಕೊಡಗಿನ ಬೆಡಗಿ.
ಇನ್ನು ಕನ್ನಡ ಕಿರುತೆರೆಯಲ್ಲಿ ಕೊಡಗಿನ ಬೆಡಗಿ ಶ್ವೇತಾ ಚಂಗಪ್ಪ ಅವರು ಉತ್ತಮ ಹೆಸರು ಗಳಿಸಿದ್ದು ಧಾರಾವಾಹಿಗಳಲ್ಲಿ ಸಹ ನಟಿಸಿರುವ ಶ್ವೇತಾ ಚಂಗಪ್ಪ ತಂಗಿಗಾಗಿ ವರ್ಷ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಕನ್ನಡದ ದಿಗ್ಗಜ ನಟರಾದ ವಿಷ್ಣುವರ್ಧನ್ ಹಾಗೂ ಶಿವರಾಜ್ ಕುಮಾರ್ ಮೊದಲಾದವರು ಜೊತೆ ಅಭಿನಯಿಸಿ ಸೈ ಎನಿಸಿಕೊಂಡವರಾಗಿದ್ದು ಇನ್ನು ಶ್ವೇತ ಚಂಗಪ್ಪ ಹಲವು ರಿಯಾಲಿಟಿ ಶೋ ಗಳಲ್ಲಿಯೂ ಕೂಡ ಭಾಗವಹಿಸಿದ್ದಾರೆ.
ಉತ್ತಮ ನೃತ್ಯಗಾರ್ತಿಯು ಆಗಿರುವ ಶ್ವೇತಾ ಚಂಗಪ್ಪ ನೋಡುವುದಕ್ಕೂ ಬಹಳ ಸ್ಫುರದ್ರೂಪಿ ಯುವತಿಯಾಗಿದ್ದು ಮದುವೆಯಾಗಿ ಒಂದು ಮುದ್ದಾದ ಮಗು ಕೂಡ ಇದೆ. ಆದರೆ ನೋಡುವುದಕ್ಕೆ ಮಾತ್ರ ಶ್ವೇತಾ ಚಂಗಪ್ಪ ಬಹಳ ಫಿಟ್ ಆಗಿದ್ದು ಶ್ವೇತ ಚಂಗಪ್ಪ ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾಗಿದ್ದು ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ ಮಜಾ ಟಾಕೀಸ್ ಕಾರ್ಯಕ್ರಮದ ಮೂಲಕ.
ಈ ಕಾರ್ಯಕ್ರಮದಲ್ಲಿ ಒಬ್ಬ ಕಾಮಿಡಿಯನ್ ಆಗಿಯೂ ಕೂಡ ಶ್ವೇತಾ ಚಂಗಪ್ಪ ಜನರನ್ನ ರಂಜಿಸಿದ್ದು ಸದ್ಯ ಇದೀಗ ನಿರೂಪಣೆಯಲ್ಲಿಯೇ ಹೆಚ್ಚಿನ ಆಸಕ್ತಿ ಹೊಂದಿರುವ ಶ್ವೇತ ಚಂಗಪ್ಪರವರು ಸಾಕಷ್ಟು ಕಾರ್ಯಕ್ರಮಗಳನ್ನು ಹೋಸ್ಟ್ ಮಾಡಿದ್ದು ಈ ಹಿಂದೆ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಯಾರಿಗುಂಟು ಯಾರಿಗಿಲ್ಲ ಕುಣಿಯೋಣು ಬಾರ ರಿಯಾಲಿಟಿ ಶೋಗಳನ್ನು ಹಾಗೂ ಸ್ಟಾರ್ ಸುವರ್ಣ ವಾಹಿನಿಯ ಡಾನ್ಸ್ ಜೂನಿಯರ್ಸ್ ಶೋವನ್ನು ಶ್ವೇತಾ ಚೆಂಗಪ್ಪ ನಡೆಸಿಕೊಟ್ಟಿದ್ದರು. ಸದ್ಯ ಪ್ರಸ್ತುತ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೋಡಿ ನಂಬರ್ 1 ಕಾರ್ಯಕ್ರಮದ ನಿರೂಪಕಿಯಾಗಿ ಶ್ವೇತಾ ಚಂಗಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ.
ಅಂದಹಾಗೆ ನಟಿ ಹಾಗೂ ಕನ್ನಡದ ಅತ್ಯುತ್ತಮ ನಟಿ ಎನಿಸಿಕೊಂಡಿರುವ ಶ್ವೇತಾ ಚಂಗಪ್ಪ ಅವರು ಇದೀಗ ಅನುಶ್ರೀ ಅವರನ್ನು ಮೀರಿಸುತ್ತಿದ್ದು ಶ್ವೇತಾ ಚಂಗಪ್ಪ ಅವರ ನಿರೂಪಣೆ ಜನರಿಗೆ ಬಹಳ ಇಷ್ಟವಾಗುತ್ತಿದೆ.
ಅಲ್ಲದೆ ಈವರೆಗೆ ಆಂಕರ್ ಅನುಶ್ರೀ ಪಡೆದುಕೊಳ್ಳುವುದಕ್ಕಿಂತ ಹೆಚ್ಚಿನ ಸಂಭಾವನೆಯನ್ನು ಶ್ವೇತಾ ಚಂಗಪ್ಪ ಪಡೆದುಕೊಳ್ಳುತ್ತಿದ್ದು ಪ್ರತಿ ಎಪಿಸೋಡ್ ಗೆ ಶ್ವೇತಾ ಚಂಗಪ್ಪ ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆಯುತ್ತಿದ್ದಾರೆ.
ಹೌದು ಇದುವರೆಗೆ ನಿರೂಪಣೆ ಅಂದ್ರೆ ಅನುಶ್ರೀ ಅವರ ಹೆಸರು ಮಾತ್ರ ನೆನಪಾಗುತ್ತಿತ್ತು ಆದರೆ ಇದೀಗ ಈ ಸ್ಥಾನವನ್ನು ಶ್ವೇತಾ ಚಂಗಪ್ಪ ನಿಧಾನವಾಗಿ ಪಡೆದುಕೊಳ್ಳುತ್ತಿದ್ದು ನಿಮಗೂ ನಟಿ ನಿರೂಪಕಿ ಶ್ವೇತಾ ಚೆಂಗಪ್ಪ ಇಷ್ಟವಾಗಿದ್ದರೆ ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ. ಸದ್ಯ ಶ್ವೇತ ಅವರು ಎಪಿಸೋಡ್ ಒಂದಕ್ಕೆ ೨ ಲಕ್ಷದವರೆಗೆ ಪಡೆದಿರುವ ಬಗ್ಗೆ ಸುದ್ದಿಯಾಗಿದೆ.