ಸಿನಿಮಾರಂಗದಲ್ಲಿ ಒಂದು ಕಾಲದಲ್ಲಿ ಮಿಂಚಿದ್ದ ನಟಿಯರು ಈಗ ಮದುವೆ, ಮಕ್ಕಳು, ಸಂಸಾರ ಅಂತ ಸಿನಿ ರಂಗದಿಂದ ದೂರವಾಗಿ ವಯಕ್ತಿಕ ಜೀವನದಲ್ಲಿಯೇ ಮುಳುಗಿದ್ದಾರೆ. ಇದು ಇಂದು ನಿನ್ನೆಯ ರೂಢಿಯಲ್ಲ. ಮೊದಲಿನಿಂದಲೂ ಬಹುತೇಕ ನಟಿಯರು ಮದುವೆಯಾದ ಮೇಲೆ ನಟಿಸುವುದಕ್ಕೆ ಅವಕಾಶ ಇರುವುದಿಲ್ಲ. ಕೆಲವರು ಅವಕಾಶ ಇದ್ದರೂ ನಟಿಸುವುದಿಲ್ಲ.
ಆದರೆ ಈ ನಡುವೆ ಸೋಶಿಯಲ್ ಮೀಡಿಯಾ ಕಾರಣದಿಂದಾಗಿ ಸಾಕಷ್ಟು ನಟಿಯರು ತಮ್ಮ ವಯಕ್ತಿಕ ಜೀವನದ ಬಗ್ಗೆ ಹಂಚಿಕೊಳ್ಳುತ್ತಾ, ಅಭಿಮಾನಿಗಳಿಗೆ ಹತ್ತಿರವಾಗಿರುತ್ತಾರೆ. ಅಂತಹ ನಟಿಯರಲ್ಲಿ ಶ್ವೇತಾ ಶ್ರೀವಾತ್ಸವ್ ಕೂಡ ಒಬ್ಬರು. ನಟಿ ಶ್ವೇತಾ ಶ್ರೀವಾತ್ಸವ ಕನ್ನಡಿಗರಿಗೆ ಸಿಂಪಲ್ ಹುಡುಗಿ ಎಂದೇ ಚಿರಪರಿಚಿತವಾದ ನಟಿ.
ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ಅಭಿನಯದ ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಸಿನಿಮಾದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದರು. ರಫ್ ಅಂಡ್ ರಫ್ ಆಗಿರುವ ಶ್ವೇತಾ ಶ್ರೀವಾತ್ಸವ್ ಸಾಕಷ್ಟು ಬೋಲ್ಡ್ ಹಾಗೂ ಹಾಟ್ ಫೋಟೋಶೂಟ್ ಹಾಗೂ ಡ್ಯಾನ್ಸ್ ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡುತ್ತಿದ್ದು ಅವು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ನಟಿ ಶ್ವೇತಾ ಶ್ರೀವಾತ್ಸವ್ ಬೆಂಗಳೂರಿನಲ್ಲಿಯೇ ಜನಿಸಿ ಇಲ್ಲಿಯೇ ವಿದ್ಯಾಭ್ಯಾಸ ಮುಗಿಸಿದವರು. ಮೀಡಿಯಾ ಸ್ಟಡಿ ಮಾಡಿರುವ ಶ್ವೇತಾ ಶ್ರೀವಾತ್ಸವ್ ಸಾಕಷ್ಟು ಟಿವಿ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿಯೂ ಕೂಡ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ ಕನ್ನಡ, ತೆಲುಗು ಧಾರಾವಾಹಿಗಳಲ್ಲಿಯೂ ಕೂಡ ಅಭಿನಯಿಸಿದ್ದಾರೆ.
2013ರಲ್ಲಿ ತೆರೆಕಂಡ ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ನಂತರ ಶ್ವೇತ ಶ್ರೀವಾತ್ಸವ್ ಅವರ ಫೇಮ್ ಹೆಚ್ಚಿತು. ಇನ್ನು ಕನ್ನಡದಲ್ಲಿ ಟಾಪ್ ನಟಿ ಎನಿಸಿಕೊಂಡಿರುವ ಸಮಯದಲ್ಲಿಯೇ ಶ್ವೇತಾ ಶ್ರೀವಾತ್ಸವ್ ಮದುವೆಯಾಗಿ ದೊಡ್ಡ ಬ್ರೇಕ್ ತೆಗೆದುಕೊಂಡ್ರು. ತಮ್ಮ ಪುಟ್ಟ ಮಗಳ ಜೊತೆ ಸಾಕಷ್ಟು ವಿಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಾರೆ.
ಹೌದು, ಶ್ವೇತಾ ಶ್ರೀವಾತ್ಸವ್ ಅವರು ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದಾರೆ. ಹೆಚ್ಚಾಗಿ ಮಗಳ ಜೊತೆಯೇ ಇದ್ದ ಪೋಸ್ಟ್ ಹಂಚಿಕೊಳ್ಳುತ್ತಾರೆ. ಮಗಳ ಜೊತೆ ಹಬ್ಬ ಹರಿದಿನಗಳಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಸಾಕಷ್ಟು ವಿಶೇಷವಾದ ಫೋಟೋಶೂಟ್ ಮಾಡಿಸುತ್ತಾರೆ ನಟಿ ಶ್ವೇತಾ.

ವಯಸ್ಸು 36 ದಾಟಿದ್ರು ಯಾವ ಸ್ಟಾರ್ ನಟಿಗೂ ಕಡಿಮೆ ಇಲ್ಲದ ಶ್ವೇತ ಶ್ರೀವಾತ್ಸವ್ ಇತ್ತೀಚಿಗೆ ತಮ್ಮ ವರ್ಕೌಟ್ ವಿಡಿಯೋ ಹಾಗೂ ಡ್ಯಾನ್ಸ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚಿಗೆ ಹೋಪ್ ಎನ್ನುವ ಸಿನಿಮಾದಲ್ಲಿ ಅಭಿನಯಿಸುವುದರ ಮೂಲಕ ಸಿನಿ ರಂಗಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಇದರ ಜೊತೆಗೆ ಬೇರೆ ಬೇರೆ ಪ್ರಾಜೆಕ್ಟ್ ಗಳಿಗೂ ಸಹಿ ಹಾಕಿದ್ದಾರಂತೆ.
ಶ್ವೇತಾ ಶ್ರೀವಾತ್ಸವ್ ಅವರ ಸಕ್ಕತ್ ಹಾಟ್ ಆಗಿರುವ ಡ್ಯಾನ್ಸ್ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಿಂಪಲ್ ಸುಂದರಿಯ ಈ ವಿಡಿಯೋ ನೋಡಿ ಅವರ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಇಂತಹ ವಿಡಿಯೋಗಳನ್ನು ಇನ್ನಷ್ಟು ಮಾಡುವಂತೆ ಬೇಡಿಕೆಯಿಟ್ಟಿದ್ದಾರೆ.