ಬಸವ ತತ್ವ ಪ್ರತಿಪಾದಕ, ಅನುಯಾಯಿ ನೇಗಿನಹಾಳ ಶ್ರೀ ಗುರು ಮಡಿವಾಳೇಶ್ವರ ಮಠದ ಬಸವ ಸಿದ್ದಲಿಂಗ ಸ್ವಾಮೀಜಿ ನೇ-ಣಿಗೆ ಶರಣಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಶ್ರೀಗುರು ಮಡಿವಾಳೇಶ್ವರ ಮಠದ ಬಸವಸಿದ್ಧಲಿಂಗ ಸ್ವಾಮೀಜಿ ಅವರು ನೇ-ಣು ಬಿಗಿದು ಆತ್ಮ-ಹತ್ಯೆಗೆ ಶರಣಾಗಿದ್ದಾರೆ.
ನೇಗಿನಹಾಳ ಶ್ರೀ ಗುರು ಮಡಿವಾಳೇಶ್ವರ ಮಠದ ಬಸವ ಸಿದ್ದಲಿಂಗ ಸ್ವಾಮೀಜಿ (Lingayat seer Sri Guru Madiwaleshwar Mutt) ನೇ-ಣಿಗೆ ಶರಣಾಗಿದ್ದಾರೆ. ‘ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಸಾವಿಗೆ ನಾನೇ ಕಾರಣ. ಯಾರನ್ನೂ ವಿಚಾರಣೆಗೆ ಒಳಪಡಿಸಬೇಡಿ. ಈ ಲೋಕದ ಗೊಡವೆ ಸಾಕು. ಹಡೆದ ತಾಯಿ ನನ್ನ ಕ್ಷಮಿಸು’ ಎಂದು ಡೆ-ತ್ ನೋಟ್ ನಲ್ಲಿ ಸ್ವಾಮೀಜಿಗಳು ಬರೆದಿದ್ದಾರೆ.
“ನಾನು ಈ ಹಾದಿಯನ್ನು ಹಿಡಿಯಲು ನಾನೇ ಕಾರಣ. ಶ್ರೀ ಮಠದ ಈಗಿನ ಕಮಿಟಿಯವರು ಮತ್ತು ನೇಗಿನಹಾಳ ಭಕ್ತರು ಎಲ್ಲರೂ ಕೂಡಿಕೊಂಡು ಶ್ರೀ ಮಠವನ್ನು ಮುನ್ನಡೆಸಿ. ಹಡೆದ ತಾಯಿ ನನ್ನನ್ನು ಕ್ಷಮಿಸಿ ಬಿಡು. ಶ್ರೀ ಮಠದವರೇ ನನ್ನನ್ನು ಕ್ಷಮಿಸಿ. ನನ್ನ ಪಯಣ ಬಸವ ಮಡಿವಾಳೇಶನೆಡೆಗೆ. ಜೈ ಬಸವೇಶ, ಜೈ ಮಡಿವಾಳೇಶ ಶರಣು ಶರಣಾರ್ಥಿ, ಶ್ರೀ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಮಠ ನೇಗಿಹಾಳ ಬಸವ ಸಿದ್ದಲಿಂಗ ಸ್ವಾಮಿಗಳು” ಎಂದು ಡೆ-ತ್ ನೋಟ್ ಬರೆದಿಟ್ಟು ಶ್ರೀಗಳು ನೇ-ಣಿಗೆ ಶರಣಾಗಿದ್ದಾರೆ.
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...