ಶಬರಿಮಲೆ ಅಯ್ಯಪ್ಪನ ದೇವಸ್ಥಾನಕ್ಕೆ ನುಗ್ಗಲು ಧೈರ್ಯ ಪ್ರದರ್ಶಿಸಿದ್ದ ಮಹಿಳೆ ಈಗ ಪೊಲೀಸರ ಅತಿಥಿ!ಶಬರಿಮಲೆ ದೇವಸ್ಥಾನ ಸಾಕಷ್ಟು ವರ್ಷಗಳಿಂದ ಅಯ್ಯಪ್ಪನ ಭಕ್ತರ ಸನ್ನಿಧಾನದ ಪವಿತ್ರ ಪುಣ್ಯ ಸ್ಥಳವಾಗಿದೆ. ಪ್ರತಿ ವರ್ಷ ಇಲ್ಲಿ ಸಾವಿರಾರು ಲಕ್ಷಾಂತರ ಭಕ್ತಾಭಿಮಾನಿಗಳು ತಮ್ಮ ನೆಚ್ಚಿನ ಆರಾಧ್ಯ ದೈವನನ್ನು ಕಾಣಲೆಂದೇ ಈ ಸ್ಥಳಕ್ಕೆ ಬರುತ್ತಾರೆ.
ಶಬರಿಮಲೆ ಅಯ್ಯಪ್ಪನ ಸನ್ನಿಧಿ ತನ್ನದೇ ಆದಂತಹ ಸಾಕಷ್ಟು ವರ್ಷಗಳ ಇತಿಹಾಸವನ್ನು ಹೊಂದಿದ್ದು ಇಲ್ಲಿ ಮು’ ಟ್ಟಿನ ಸಂದರ್ಭದಲ್ಲಿ ಮಹಿಳಾ ಭಕ್ತಾ ಅಭಿಮಾನಿಗಳ ಪ್ರವೇಶಕ್ಕೆ ನಿರ್ಬಂಧವನ್ನು ಕೂಡ ವಿಧಿಸಲಾಗಿತ್ತು. ಆಚರಣೆಗಳ ಹಾಗೂ ನಂಬಿಕೆಗಳ ವಿರುದ್ಧವಾಗಿ ಇದೆ ಎನ್ನುವ ಕಾರಣಕ್ಕಾಗಿ ಈ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು ಎನ್ನುವುದನ್ನು ಕೂಡ ನಾವು ಇಲ್ಲಿ ಮನಗಾಣ ಬೇಕಾಗುತ್ತದೆ.

32 ವರ್ಷದ ರೆಹಾನಾ ಫಾತಿಮ್ ರವರು ಕೂಡ ಈ ಕಟ್ಟಾಳಿಗಳ ವಿರುದ್ಧವಾಗಿ ದೇವಸ್ಥಾನವನ್ನು ನೂರಾರು ಜನ ಆಫೀಸರ್ ಗಳ ನಡುವೆ ಪ್ರವೇಶಿಸುವಂತಹ ವ್ಯರ್ಥ ಪ್ರಯತ್ನವನ್ನು ಕೂಡ ಮಾಡಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಾರೆ. ಇದರ ಕುರಿತಂತೆ ಸಹಸ್ರಾರು ಅಯ್ಯಪ್ಪನ ಭಕ್ತ ಅಭಿಮಾನಿಗಳು ಕೂಡ ವಿರೋಧವನ್ನು ವ್ಯಕ್ತಪಡಿಸಿದ್ದರು.
ಸಾಕಷ್ಟು ಸಮಯಗಳಿಂದ ಈ ವಿಚಾರದ ಕುರಿತಂತೆ ಶಬರಿಮಲೆಯ ಭಕ್ತಾಭಿಮಾನಿಗಳಿಗೂ ಹಾಗೂ ಇಂತಹ ಕೆಲವೊಂದು ಮಾಡರ್ನ್ ಡೇ ಬುದ್ಧಿಜೀವಿಗಳಿಗೂ ಜಗಳ ನಡೆಯುತ್ತಲೇ ಇವೆ. ದೇವಸ್ಥಾನವನ್ನು ಪ್ರವೇಶಿಸಲು ರೆಹನಾ ಫಾತಿಮ್ ನಡೆಸಿದ ವ್ಯರ್ಥ ಪ್ರಯತ್ನ ಒಂದು ಫೋಟೋ ಈಗ ವಿ’ ವಾದಾತ್ಮಕ ರೂಪವನ್ನು ಪಡೆದುಕೊಂಡಿದೆ.

ಹೌದು ರೆಹನಾ ಫಾತಿಮಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅಯ್ಯಪ್ಪನ ಮಾಲಾಧಾರಿಗಳಂತೆ ವೇಷಭೂಷಣವನ್ನು ಧರಿಸಿ ತಮ್ಮ ತೊಡೆಯನ್ನು ತೋರಿಸುತ್ತಿರುವಂತಹ ಫೋಟೋವನ್ನು ಪೋಸ್ಟ್ ಮಾಡಿದ್ದು ಇದು ಅಯ್ಯಪ್ಪನ ಭಕ್ತ ಅಭಿಮಾನಿಗಳ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸವನ್ನು ಮಾಡಲಾಗಿದೆ ಎಂಬುದಾಗಿ ದೂರು ದಾಖಲಾಗಿದೆ. ಇದೇ ಹಿನ್ನೆಲೆಯಲ್ಲಿ ಅವರನ್ನು ಕೆಲಸದಿಂದ ತೆಗೆದುಹಾಕಿ, ಜೈಲಿಗಟ್ಟಲಾಗಿದೆ.

ಬ್ರಹ್ಮಚರ್ಯಕ್ಕೆ ಹೆಸರುವಾಸಿಯಾಗಿರುವಂತಹ ಅಯ್ಯಪ್ಪ ದೇವರ ಸನ್ನಿಧಿಯಲ್ಲಿ ಈ ರೀತಿ ಮನಸ್ಥಿತಿಯನ್ನು ಹೊಂದಿರುವಂತಹ ಹಾಗೂ ಮು’ ಟ್ಟಿನ ಸಂದರ್ಭದಲ್ಲಿ ದೇವಸ್ಥಾನವನ್ನು ಪ್ರವೇಶಿಸಬೇಕೆನ್ನುವಂತಹ ಮಹಿಳೆಯರಿಗೆ ತಕ್ಕ ಶಾಸ್ತಿ ಆಗಲೇಬೇಕು. ಒಬ್ಬ ಮಹಿಳೆ ಮೊಣಕಾಲನ್ನು ತೋರಿಸುತ್ತಿರುವುದು ಎಷ್ಟರಮಟ್ಟಿಗೆ ಧರ್ಮವಿರೋಧಿ ಆಗಿರುತ್ತದೆ ಎಂಬುದಾಗಿ ರೆಹನಾ ಫಾತಿಮಾ ಗಂಡ ಕೂಡ ಇದರ ಕುರಿತಂತೆ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕೂಡ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.