ಟಾಟಾ ಕಂಪನಿಯ ಈ ಜಬರ್ದಸ್ತ್ SUV ಮುಂದೆ ಮಹಿಂದ್ರಾ ಸ್ಕಾರ್ಪಿಯೋ ಹಾಗೂ ಹ್ಯುಂಡೈ ಕ್ರೆಟಾ ಫೇಲ್!

ಟಾಟಾ ಕಂಪನಿಯ ಈ SUV ಮುಂದೆ ಮಹಿಂದ್ರಾ ಸ್ಕಾರ್ಪಿಯೋ ಹಾಗೂ ಹ್ಯುಂಡೈ ಕ್ರೆಟಾ ಕಾರುಗಳು ಫೇಲ್ ಆಗಿದ್ದು, ಕಂಫರ್ಟ್ ಡ್ರೈವಿಂಗ್ ಹಾಗೂ ರೇಸಿಂಗ್ ನಲ್ಲಿ ಈ ಕಾರು ತನ್ನದೇ ಆದ ಛಾಪು ಮೂಡಿಸಿದೆ. SUV ಸೆಕ್ಟರ್ ಗಳಲ್ಲಿ ಟಾಟಾ ನೆಕ್ಸಾನ್ ಮಾರುಕಟ್ಟೆಯ ಕಿಂಗ್ ಆಗಿದೆ. ಟಾಟಾ ಮೋಟರ್ಸ್ ರವರ ಕಾರುಗಳಿಗೆ ಇತ್ತೀಚಿನ ದಿನಗಳಲ್ಲಿ ಗ್ರಾಹಕರ ಕಡೆಯಿಂದ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದ್ದು, ಈ ಬಗ್ಗೆ ಇದೇ ವರ್ಷದ ಅಕ್ಟೋಬರ್ ತಿಂಗಳ ಸೇಲ್ ಡೇಟಾ ನೋಡಿದಾಗ ತಿಳಿಯುತ್ತದೆ.

ಟಾಟಾರವರ ನೆಕ್ಸಾನ್ ಕಾರು ಬೇರೆ ಎಲ್ಲ ಕಂಪನಿಗಳ ಕಾರುಗಳನ್ನು ಹಿಂದಿಕ್ಕಿದೆ, ಈ ಕಾರಿನ ಮಾರಾಟದ ಮುಂದೆ ಮಾರುತಿ ಸುಜುಕಿ ಬ್ರಿಝಾ, ಗ್ರಾಂಡ್ ವಿಟಾರಾ ಮತ್ತು ಸ್ಕಾರ್ಪಿಯೋ ಎಲ್ಲವನ್ನೂ ಸಹ ಹಿಂದಿಕ್ಕಿದೆ ನೆಕ್ಸಾನ್! ಲುಕ್ – ಫೀಚರ್ಸ್ ಜೊತೆಗೆ ಅದರ ಗಟ್ಟಿಮುಟ್ಟಾದ ಬಾಡಿ ಭಾರತೀಯ ಗ್ರಾಹಕರನ್ನು ಆಕರ್ಷಿಸಿದೆ.

ಒಂದೇ ವರ್ಷದಲ್ಲಿ ಮಾರಾಟದ ದಾಖಲೆಗಳನ್ನು ಮುರಿದು ಹಾಕಿದೆ! : ಟಾಟಾ ಕಂಪನಿಯ ಪರವಾಗಿ ಅತೀ ಹೆಚ್ಚು ಮಾರಾಟವಾದ ಯಾವುದೇ ಸೆಗ್ಮೆಂಟ್ ನ ಕಾರುಗಳಲ್ಲಿ ನೆಕ್ಸಾನ್ ಮೊದಲ ಸ್ಥಾನದಲ್ಲಿದ್ದು. ಅಕ್ಟೋಬರ್-2022 ರ ಡೇಟಾ ನೋಡುವುದಾದರೆ ಬರೋಬ್ಬರಿ 13,767 ಯೂನಿಟ್ಸ್ ಮಾರಾಟವಾಗಿವೆ! ಇದೇ ಕಾರು ಕಳೆದ ವರ್ಷದ (2021) ಅಕ್ಟೋಬರ್ ನಲ್ಲಿ ಕೇವಲ 10,096 ಯೂನಿಟ್ಸ್ ಮಾರಾಟ ಮಾಡಿತ್ತು.

ಒಂದೇ ವರ್ಷದಲ್ಲಿ ಟಾಟಾ ನೆಕ್ಸಾನ್ ಕಾರು ಬರೋಬ್ಬರಿ 36% ನಷ್ಟು ಹೆಚ್ಚು ಮಾರಾಟವಾಗಿದ್ದು ದಾಖಲೆಯಾಗಿದೆ. ಈ ವರ್ಷದ ಅಕ್ಟೋಬರ್-2022 ರಲ್ಲಿ ಮಾರಾಟವಾದ SUV ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಹ್ಯುಂಡೈ ಕ್ರೆಟಾ ಕಾರು ಇದ್ದು, ಅದು 11,800 ಯೂನಿಟ್ಸ್ ಮಾರಾಟವಾಗಿದ್ದರೆ, ಮೂರನೇ ಸ್ಥಾನದಲ್ಲಿ ಮಾರುತಿ ಸುಜುಕಿಯ ಬ್ರಿಝಾ ಕಾರು ಇದೆ, ಆ ಕಾರಿನ 9,941 ಯೂನಿಟ್ಸ್ ಮಾರಾಟವಾಗಿವೆ.

ಟಾಟಾ ನೆಕ್ಸಾನ್ ಕಾರಿನ ಬೆಲೆ : ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಗ್ಲೋಬಲ್ NCAP ಕಡೆಯಿಂದ 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿರುವ ಈ ಕಾರಿನ ದೆಹಲಿ ಎಕ್ಸ್- ಷೋ ರೂಮ್ ಬೆಲೆ 7,39,900 ರೂಪಾಯಿಗಳಿಂದ 11,78,900 ರೂಪಾಯಿಗಳ ನಡುವೆ ಇದೆ. ಕಂಪನಿಯ ಪ್ರಕಾರ ಟಾಟಾ ನೆಕ್ಸಾನ್ ಏಪ್ರಿಲ್-2021 ರಿಂದ ಆಗಸ್ಟ್-2022 ರವರೆಗೆ ನಂಬರ್.1 ರಲ್ಲಿ ಇತ್ತಂತೆ, ಆದರೆ ಅಕ್ಟೋಬರ್ ತಿಂಗಳ ಡೇಟಾ ನೋಡಿದಾಗ ತಿಳಿದುಬರುವುದೇನೆಂದರೆ ಈ ಕಾರು ಇಂದಿಗೂ ಸಹ ಗ್ರಾಹಕರ ಮನಸ್ಸು ಗೆಲ್ಲುತ್ತಿದೆ ಎಂದು.

ಮೊದಲಿಗಿಂತಲೂ ಪವರ್ಫುಲ್ ಎಂಜಿನ್ ನೊಂದಿಗೆ ಬಂದಿರುವ ಟಾಟಾ ನೆಕ್ಸಾನ್! : ಕಂಪನಿಯು ತನ್ನ ಗ್ರಾಹಕರಿಗೆ 67 ವೆರಿಯಂಟ್ ನ ಆಪ್ಷನ್ ನೀಡುತ್ತಿದೆ, ಇವುಗಳಲ್ಲಿ ಪೆಟ್ರೋಲ್ ನಲ್ಲಿ 19 ವೆರಿಯಂಟ್, ಡೀಸೆಲ್ ನಲ್ಲಿ 18 ವೆರಿಯಂಟ್ ಹಾಗೂ 30 ವೆರಿಯಂಟ್ ಗಳು ಆಟೋಮ್ಯಾಟಿಕ್ ನಲ್ಲಿ ಬರುತ್ತಿವೆ. ಕಂಪನಿಯು ಈ ಕಾರಿನಲ್ಲಿ 1.2 ಲೀಟರ್ 3 ಸಿಲಿಂಡರ್ ಟರ್ಬೋ ಹಾಗೂ 1.5 ಲೀಟರ್ ಟರ್ಬೋ ಡೀಸೆಲ್ ಎಂಜಿನ್ ಅಳವಡಿಸಿದ್ದು ಈ ಎರಡು ಎಂಜಿನ್ ಗಳಿಗೂ ಸಹ 6 ಸ್ಪೀಡ್ ಮಾನ್ಯುಯಲ್ ಹಾಗೂ 6 ಸ್ಪೀಡ್ AMT ಗೇರ್ ಬಾಕ್ಸ್ ಅಳವಡಿಸಲಾಗಿದೆ.

ಟಾಟಾ ನೆಕ್ಸಾನ್ ಫೀಚರ್ಸ್ : ಟಾಟಾ ಮೋಟಾರ್ಸ್ ರವರ ನೆಕ್ಸಾನ್ ನ XZ+L ವೆರಿಯಂಟ್ ಇದೇ ಸೆಪ್ಟೆಂಬರ್ ನಲ್ಲಷ್ಟೇ ಲಾಂಚ್ ಆಗಿದ್ದು ಇದು ಮಿಡ್ ಸೆಗ್ಮೆಂಟ್ ನದ್ದಾಗಿದೆ, ಈ ವೆರಿಯಂಟ್ XZ+(O) ಮತ್ತು XZ+(P) ಗಳ ಮಧ್ಯದಲ್ಲಿ ಬರುತ್ತದೆ, ಈ ವೆರಿಯಂಟ್ ನಲ್ಲಿ  ಪೆಟ್ರೋಲ್ ಹಾಗೂ ಡೀಸೆಲ್ ಎರಡು ಫ್ಯೂಲ್ ಟೈಪ್ ಗಳಲ್ಲಿಯೂ ಸಹ ಲಭ್ಯವಿದೆ.

ಕಾರಿನ ದೆಹಲಿ ಎಕ್ಸ್-ಷೋ ರೂಮ್ ಬೆಲೆ 11.38 ಲಕ್ಷ ರೂಪಾಯಿಗಳಾಗಿದೆ, ನೆಕ್ಸಾನ್ ನಲ್ಲಿ ಸಿಗಬಹುದಾದ ಫೀಚರ್ಸ್ ಬಗ್ಗೆ ಮಾತನಾಡುವುದಾರೆ, ಇದರಲ್ಲಿ ವೈರ್ ಲೆಸ್ ಚಾರ್ಜರ್, ವೆಂಟಿಲೇಟೆಡ್ ಲೆದರ್ ಸೀಟ್ಸ್, ಏರ್ ಪ್ಯೂರಿಫೈರ್ ಮತ್ತು ಆಟೋಮ್ಯಾಟಿಕ್ ಡೀಮಿಂಗ್ IRVM ಹಾಗೂ ಅನೇಕ ಆಧುನಿಕ ಫೀಚರ್ಸ್ ಲಭ್ಯವಿವೆ.

You might also like

Comments are closed.