ಎರಡನೇ ಮದುವೆಯಾಗಿ,46 ವರ್ಷ ವಯಸ್ಸಾದರೂ,ಯುವತಿಯ ಹಾಗೆ ಕಾಣುವ ಸುಮನ್ ಸೌಂದರ್ಯದ ಹಿಂದಿನ ಗುಟ್ಟೇನು ಗೊತ್ತಾ??

CINEMA/ಸಿನಿಮಾ

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಭಾರತ ಚಿತ್ರರಂಗದಲ್ಲಿ ಹಲವಾರು ನಟಿಯರ ಇಂದಿಗೂ ಕೂಡ ಎಷ್ಟೇ ವಯಸ್ಸಾದರೂ ಚಿರ ಯುವತಿಯಂತೆ ಕಾಣುತ್ತಾರೆ. ಅವರ ಸೌಂದರ್ಯ ಎಷ್ಟೇ ವಯಸ್ಸಾದರೂ ಮಾಸುವುದೇ ಇಲ್ಲ ಎಂಬಂತೆ ಕಾಣುತ್ತದೆ. ಇದಕ್ಕೆ ಉದಾಹರಣೆ ನೀಡಲು ಹಲವಾರು ನಟಿಯರಿದ್ದಾರೆ. ಆದರೆ ಇವರಿಗೆ ಯಾರು ಹೋಲಿಕೆಯಲ್ಲ. ಹೌದು ನಾವು ಯಾವ ನಟಿಯ ಕುರಿತಂತೆ ಮಾತನಾಡಲು ಹೊರಟಿದ್ದೇವೆ ಎಂಬುದನ್ನು ನಿಮಗೆ ಅವರ ವಿವರದೊಂದಿಗೆ ಸಂಪೂರ್ಣವಾಗಿ ತಿಳಿಸುತ್ತೇವೆ ಬನ್ನಿ.

ಹೌದು ನಾವು ಮಾತನಾಡಲು ಹೊರಟಿರುವುದು 46ರ ಹರೆಯದಲ್ಲೂ ಕೂಡ 20ರ ಯುವತಿಯಂತೆ ಕಾಣುವ ಈ ನಟಿಯ ಕುರಿತಂತೆ. ನೀವು ಕರೆಕ್ಟಾಗಿ ಗೆಸ್ ಮಾಡಿರಬಹುದು ಹೌದು ನಾವು ಮಾತನಾಡಲು ಹೊರಟಿರುವುದು ಕನ್ನಡಮೂಲದ ಬಹುಭಾಷಾ ನಟಿ ಸುಮನ್ ರಂಗನಾಥ್ ರವರ ಬಗ್ಗೆ. 1974 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಸುಮನ್ ರಂಗನಾಥ್ ರವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 1989 ರಲ್ಲಿ. ಮೊದಲಿಗೆ ಮಾಡಲಿಂಗ್ ಕ್ಷೇತ್ರದಲ್ಲಿ ಮಿಂಚಿದ್ದರು ನಟಿ ಸುಮನ್ ರಂಗನಾಥ್.

ಸುಮನ್ ರಂಗನಾಥ್ ಅವರು ಮುಖ್ಯವಾಗಿ ಕಾಣಿಸಿಕೊಂಡಿದ್ದು ಕನ್ನಡ ಚಿತ್ರರಂಗದಲ್ಲಿ. ಕನ್ನಡ ಚಿತ್ರರಂಗದೊಂದಿಗೆ ತಮಿಳು ಮಲಯಾಳಂ ತೆಲುಗು ಹಿಂದಿ ಹಾಗೂ ಭೋಜಪುರಿ ಸಿನಿಮಾ ಗಳಲ್ಲಿ ಕೂಡ ನಟಿಸಿದ್ದಾರೆ ನಟಿ ಸುಮನ್ ರಂಗನಾಥ್. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿ ಕನ್ನಡಿಗ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ ನಟಿ ಸುಮನ್ ರಂಗನಾಥ್. ಸಿದ್ಲಿಂಗು ದಂಡುಪಾಳ್ಯ ಹೀಗೆ ಹಲವಾರು ಕನ್ನಡದ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ ನಟಿ ಸುಮನ್ ರಂಗನಾಥ್.

ನಟಿ ಸುಮನ್ ರಂಗನಾಥ್ ರವರು ಪ್ರಸಿದ್ಧ ನಿರ್ಮಾಪಕರಾದ ಬಂಟಿ ವಾಲಿಯ ರವರನ್ನು ವಿವಾಹವಾದರು. ನಂತರ ಇವರಿಬ್ಬರೂ 2007 ರಲ್ಲಿ ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಪರಸ್ಪರ ವಿವಾಹ ವಿಚ್ಛೇದನ ಪಡೆದರು. ನಂತರ ಇತ್ತೀಚಿನ ವರ್ಷಗಳಲ್ಲಷ್ಟೇ 2019 ರಲ್ಲಿ ಕೊಡಗಿನ ಕಾಫಿ ಪ್ಲಾಂಟರ್ ಆದ ಸಾಜನ್ ಚಿನ್ನಪ್ಪ ರವರನ್ನು ಮದುವೆಯಾಗಿ ಈಗ ಸುಖ ಸಂಸಾರ ನಡೆಸುತ್ತಿದ್ದಾರೆ.

ಇನ್ನು 46 ವಯಸ್ಸಿನಲ್ಲಿ ಕೂಡ ಇಪ್ಪತ್ತರ ಹರೆಯದ ಯುವತಿ ಅಂತೆ ಕಾಣುವ ಕಾಣುವ ಸುಮನ್ ರಂಗನಾಥ್ ರವರ ಸೌಂದರ್ಯದ ಹಿಂದಿನಗುಟ್ಟು ಏನೆಂದು ಕೇಳಿದಾಗ ಅವರು ಹೇಳಿದ್ದೇನು ಗೊತ್ತೆ. ಬನ್ನಿ ಅದನ್ನು ವಿವರವಾಗಿ ಹೇಳುತ್ತೇನೆ ನಿಮಗೆ. ಹೌದು ಹೇಗೆ ಒಮ್ಮೆ ಸಂದರ್ಶನದಲ್ಲಿ ಸಂದರ್ಶನಕಾರರು ನಿಮ್ಮ ಈ ಸೌಂದರ್ಯದ ಹಿಂದಿನ ರಹಸ್ಯವೇನು ಈ ವಯಸ್ಸಲ್ಲೂ ಕೂಡ ಇಷ್ಟೊಂದು ಸುಂದರಿ ಆಗಿರುವ ಕಾರಣವೇನೆಂದು ಕೇಳಿದಾಗ ನಟಿ ಸುಮನ್ ರಂಗನಾಥ್ ರವರು ಕೊಟ್ಟ ಉತ್ತರ ಹೀಗಿತ್ತು.

ಹೌದು ಸುಮನ್ ರಂಗನಾಥ್ ರವರು ನಾನು ಸರಿಯಾದ ಸಮಯಕ್ಕೆ ಊಟ ಮಾಡುತ್ತೇನೆ ಸರಿಯಾದ ಸಮಯಕ್ಕೆ ನಿದ್ದೆ ಹಾಗೂ ಶಾಂತಿಯನ್ನು ಪಡೆಯುತ್ತೇನೆ. ಎಲ್ಲದಕ್ಕಿಂತ ಹೆಚ್ಚಾಗಿ ತಪ್ಪದೆ ಪ್ರತಿ ದಿನ ಯೋಗವನ್ನು ಮಾಡಿ ಆರೋಗ್ಯವನ್ನು ಮತ್ತು ಮನಸ್ಸನ್ನು ರಿಲ್ಯಾಕ್ಸ್ ಮೂಡ್ ನಲ್ಲಿ ಇರಿಸಿ ಕೊಳ್ಳುತ್ತೇನೆ ಇದು ನನ್ನ ಸೌಂದರ್ಯದ ಹಿಂದಿನಗುಟ್ಟು ಆಗಿರಬಹುದು ಎಂದು ಹೇಳಿದ್ದಾರೆ ನಟಿ ಸುಮನ್ ರಂಗನಾಥ್. ಸುಮನ್ ರಂಗನಾಥ್ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

ಇದನ್ನೂ ಓದಿ >>>  ಮಲ್ಲ ಸಿನಿಮಾ ನನಗೆ ಅತ್ಯಂತ ಕಠಿಣವಾದ ಸವಾಲಾಗಿತ್ತು! ಮಲ್ಲ ಚಿತ್ರದಲ್ಲಿ ಪಟ್ಟ ಕಷ್ಟಗಳ ಬಿಚ್ಚಿಟ್ಟ ನಟಿ ಪ್ರಿಯಾಂಕ ಹೇಳಿದ್ದೇನು ನೋಡಿ!!







ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...