ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಬೇರೆ ವಿಚಾರದ ಬಗ್ಗೆ ಭಾರಿ ಸುದ್ದಿಯಾಗಿದ್ದರು, ತಿಂಗಳುಗಟ್ಟಲೆ ಅವಈ ಬಗೆಗಿನ ಸುದ್ದಿಗಳು ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಇದೀಗ ಶಾರುಖ್ ಖಾನ್ ಅವರ ಮಗಳು ಸುಹಾನ ಖಾನ್ ಅವರು ಪಾರ್ಟಿ ಒಂದರಲ್ಲಿ ಸ್ನೇಹಿತರ ಜೊತೆಗೆ ಕಾಣಿಸಿಕೊಂಡಿದ್ದರು. ಇದರಿಂದ ಸುಹಾನ ಖಾನ್ ಅವರು ಮಾಧ್ಯಮದ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಎಲ್ಲಾ ಕ್ಯಾಮೆರಾಗಳು ಕೂಡ ಸುಹಾನ ಖಾನ್ ಅವರ ಮೇಲೆಯೇ ಇತ್ತು. ಕೆಂಪು ಬಣ್ಣದ ಡ್ರೆಸ್ ಧರಿಸಿ ಸುಂದರವಾಗಿ ಕಾಣಿಸಿಕೊಂಡಿದ್ದರು ಸುಹಾನ.
ಇದೀಗ ಸುಹಾನ ಅವರ ಈ ಸುಂದರವಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸುಹಾನ ಅವರನ್ನು ನೋಡಿದ ನೆಟ್ಟಿಗರು, ಅವರ ಬಗ್ಗೆ ಕಮೆಂಟ್ಸ್ ಬರೆಯುತ್ತಿದ್ದಾರೆ. ಸುಹಾನ ಬಹಳ ಸುಂದರವಾಗಿ ಕಾಣುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಇನ್ನು ಸುಹಾನ ಖಾನ್ ಅವರು ಜೋಯಾ ಅಕ್ತರ್ ಅವರ ದಿ ಆರ್ಚಿಸ್ ಸಿನಿಕಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇವರ ಬಗ್ಗೆ ಕೇಳಿ ಬರುತ್ತಿರುವ ಮತ್ತೊಂದು ವಿಚಾರ ಏನೆಂದರೆ, ಇವರು ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಅವರೊಡನೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.