ಪಾರ್ಟಿ ಒಂದಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್! ಬ್ಯೂಟಿ ಸೆರೆಹಿಡಿಯಲು ಓಡೋಡಿ ಬಂದ ಕ್ಯಾಮರಾ ಮ್ಯಾನ್, ವಿಡಿಯೋ ಫುಲ್ ಸೌಂಡ್!!

ಬಾಲಿವುಡ್ ಬಾದ್ಷ ಶಾರುಖ್ ಖಾನ್ ಮಗಳು ಇತ್ತೀಚಿಗೆ ಹೆಚ್ಚು ಸುದ್ದಿಯಲ್ಲಿ ಇದ್ದಾರೆ. ಸುಹಾನಾ ಖಾನ್ ಕೂಡ ಇತ್ತೀಚಿಗೆ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಶಾರುಖ್ ಖಾನ್ ಅವರ ಮಗ ಸಿನಿಮಾ ರಂಗದಿಂದ ದೂರ ಇದ್ದಾರೆ ನಟನೆಯ ಬದಲು ನಿರ್ಮಾಣ ನಿರ್ದೇಶನದ ಕಡೆ ಆಸಕ್ತಿ ಇದೆ ಎಂದು ಹೇಳಿಕೊಂಡಿದ್ದಾರೆ ಆದರೆ ಶಾರುಖ್ ಖಾನ್ ಅವರ ಮಗಳು ಸುಹಾನ ಖಾನ್ ಈಗಾಗಲೇ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಹೌದು 22 ವರ್ಷದ ಸುಹಾನ ಖಾನ್ ಆರ್ಚಿಸ್ ಎನ್ನುವ ಸಿನಿಮಾದಲ್ಲಿ ಅಭಿನಯಿಸಿದ್ದು ಇದರಲ್ಲಿ ಸ್ಟಾರ್ ನಟ ನಟಿಯರ ಮಕ್ಕಳ ದಂಡೆ ಇದೆ. ಬೋನಿ ಕಪೂರ್ ಹಾಗೂ ಶ್ರೀದೇವಿ ಅವರ ಮಗಳು ಕೃಷಿ ಕಪೂರ್ ಶಾರುಖ್ ಖಾನ್ ಮಗಳು ಅದೇ ರೀತಿ ಅಮಿತಾ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದ, ವೇದಾಂಗ ರೈನಾ, ಯುವರಾಜ್ ಮೊದಲದ ಯುವ ನಟರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆರ್ಚಿಸ್ ಇಂಡೋ ಅಂಗ್ಲನ್ ಸಮ್ಮಿಶ್ರಮಣವಾಗಿದೆ.

ಇನ್ನು ಈ ಚಿತ್ರವನ್ನು ನಿರ್ದೇಶನ ಮಾಡಿರುವವರು ಜೋಯಾ. ಸ್ಟಾರ್ ಕಲಾವಿದರು ಮಕ್ಕಳನ್ನು ಹಾಕಿಕೊಂಡು ಆರ್ಚಿಸ್ ಸಿನಿಮಾ ಮಾಡಿದ್ದಾರೆ ಇದರಲ್ಲಿ ಸಾಕಷ್ಟು ಟೀನೆಜರ್ಸ್ ಇದ್ದು ಹೆಸರು ವಿಭಿನ್ನ ಕಥೆಯನ್ನು ಹೊಂದಿದೆ ಜೊತೆಗೆ ನಮ್ಮ ಬಾಲ್ಯವನ್ನು ನೆನಪಿಸುವಂತಹ ಸಿನಿಮಾ ಇದು.

ಆರ್ಚಿಸ್ ಸಿನಿಮಾ ಜನವರಿ ತಿಂಗಳಲ್ಲಿ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದ ಮೂಲಕ ಹಲವು ಉದಯ ಮುಖ ನಟರು ಇನ್ನಷ್ಟು ಚಾನ್ಸ್ ಪಡೆದುಕೊಳ್ಳುವ ಸಾಧ್ಯತೆ ಇದೆ. ಇತ್ತೀಚಿಗೆ ಮುಂಬೈ ಮಹಾನಗರದಲ್ಲಿ ಅರ್ಜಿ ಸಿನಿಮಾ ಚಿತ್ರೀಕರಣ ಪೂರ್ಣಗೊಂಡ ಖುಷಿಗಾಗಿ ಪಾರ್ಟಿ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಆರ್ಚಿಸ್ ಸಿನಿಮಾ ತಂಡದ ಪ್ರತಿಯೊಬ್ಬ ಕಲಾವಿದರು ತಂತ್ರಜ್ಞರು ಪಾಲ್ಗೊಂಡಿದ್ದರು. ಮುಂಬೈ ಮಹಾನಕರಿಯಲಿ ಏರ್ಪಡಿಸಲಾಗಿದ್ದ ಈ ಪಾರ್ಟಿಯಲ್ಲಿ ಸುಹಾನ ಖಾನ್ ಹೆಚ್ಚು ಗಮನ ಸೆಳೆದಿದ್ದಾರೆ.
suhana khan hot bikini Online Shopping

ಹೌದು ಕೆಂಪು ಬಣ್ಣದ ಬಾಡಿ ಕಾನ್ ಧರಿಸಿದ ಸುಹಾನಾ ಖಾನ್ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸುಹಾನ ಖಾನ್ ಅವರ ಫೋಟೋಗಳು ವೈರಲ್ ಆಗಿವೆ. ಇನ್ನು ಸುಹಾನ ಖಾನ್ ಅವರ ಡ್ರೆಸ್ ಬಗ್ಗೆ ಸಾಕಷ್ಟು ಟ್ರೊಲ್ ಗಳು ಕೂಡ ಆಗಿವೆ. ಗೋರಿಖಾನ್ ಹಾಗೂ ಶಾರುಖ್ ಖಾನ್ ಸುಹಾನ ಖಾನ್ ಅವರಿಗೆ ಸರಿಯಾಗಿ ಡ್ರೆಸ್ ಸೆನ್ಸ್ ಕೂಡ ಕಲಿಸಿಲ್ಲ ಅಂತ ಬಾಯಿಗೆ ಬಂದ ಹಾಗೆ ಕೆಲವರು ಕಮೆಂಟ್ ಮಾಡಿದ್ದಾರೆ.

ಆದರೆ ಬಾಲಿವುಡ್ ನಲ್ಲಿ ಪಾರ್ಟಿ ಅಂದರೆ ವಿಶೇಷವಾಗಿ ಹಾಗೂ ವಿಭಿನ್ನವಾಗಿ ಡ್ರೆಸ್ ಮಾಡೋದು ಸಹಜ. ಹಾಗೆ ನೋಡಿದರೆ ಸುಹಾನ ಖಾನ್ ಕೆಂಪು ಬಣ್ಣದ ಬಟ್ಟೆಯಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. ಏನು ಆರ್ಚೀಸ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ ಸುಹಾನ ಖಾನ್ ಅವರಿಗೆ ಈಗಾಗಲೇ ಇನ್ನಷ್ಟು ಸಿನಿಮಾ ಆಫರ್ ಗಳು ಕೂಡ ಬರುತ್ತವೆಯಂತೆ. ಸುಹಾನ ಖಾನ್ ಅವರಿಗೆ ಸಿನಿಮಾ ಅಭಿನಯದ ಟ್ರೇನಿಂಗ್ ಗೌರಿ ಖಾನ್ ಅವರಿಂದಲೇ ಸಿಕ್ಕಿದೆ.

ಸುಹಾನ ಅವರು ಟ್ರೈನಿಂಗ್ ತೆಗೆದುಕೊಳ್ಳುವಾಗ ಅದರ ಉಸ್ತುವಾರಿಯನ್ನು ಗೌರಿ ಖಾನ್ ಅವರೇ ಸ್ವತಃ ನೋಡಿಕೊಳ್ಳುತ್ತಿದ್ದರಂತೆ. ಬಾಲಿವುಡ್ ನಲ್ಲಿ ಸ್ಟಾರ್ ನಟರ ಮಕ್ಕಳು ಸಿನಿಮಾಕ್ಕೆ ಬರುವುದು ವಿಶೇಷವೇನು ಅಲ್ಲ. ಇತರ ಸಿನಿಮಾ ಇಂಡಸ್ಟ್ರಿಗೆ ಹೋಲಿಸಿದರೆ ಬಾಲಿವುಡ್ ನಲ್ಲಿ ನೆಪೋಟಿಸಂ ಜಾಸ್ತಿ ಎನ್ನಬಹುದು. ಹಾಗಾಗಿ ಬಾಲಿವುಡ್ ನಲ್ಲಿ ಕೆಲವು ಸಿನಿಮಾಗಳು ಹಿಟ್ ಆಗದೇ ಇದ್ದರೂ ಕೂಡ ಸ್ಟಾರ್ ನಟರ ಮಕ್ಕಳ ಬೇಡಿಕೆ ಕಡಿಮೆ ಆಗುವುದಿಲ್ಲ. ಇದೀಗ ಸುಹಾನಾ ಖಾನ್ ಮೊದಲ ಸಿನಿಮಾದಲ್ಲಿಯೇ ಜನರ ಮೆಚ್ಚುಗೆ ಕಳಿಸಿದ್ದಾರೆ ಹಾಗಾಗಿ ಇವರು ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಉತ್ತಮ ನೆಲೆ ಕಂಡುಕೊಳ್ಳುವುದರಲ್ಲಿ ಸಂಶಯವಿಲ್ಲ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ.

You might also like

Comments are closed.