ಸುಧಾರಾಣಿ

ಮದುವೆಯಾಗಿ ಬರಿ ಕಷ್ಟಗಳಲ್ಲೇ ಕೈ ತೊಳೆಯುತ್ತಿದ್ದ ಸುಧಾರಾಣಿ ಬಾಳಲ್ಲಿ,ಸುಖ ನೆಮ್ಮದಿ ನೀಡಿದ ಆ ವ್ಯಕ್ತಿ ಯಾರು ಗೊತ್ತಾ…

CINEMA/ಸಿನಿಮಾ Entertainment/ಮನರಂಜನೆ

ಸುಧಾರಾಣಿ ಅವರು 14 ಆಗಸ್ಟ್ 1973 ರಂದು ಜನಿಸಿದರು. ಅವರ ಪರದೆಯ ಹೆಸರಿನಿಂದ ಸುಧಾ ರಾಣಿ, ಭಾರತೀಯ ನಟಿ, ಧ್ವನಿ ಕಲಾವಿದ ಮತ್ತು ಮಾಜಿ ರೂಪದರ್ಶಿ. ಅವರು ಪ್ರಾಥಮಿಕವಾಗಿ ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ, ಆದರೂ ಅವರು ಕೆಲವು ತಮಿಳು, ತೆಲುಗು, ತುಳು ಮತ್ತು ಮಲಯಾಳಂ ಚಿತ್ರಮಂದಿರಗಳಲ್ಲಿ ಕಾಣಿಸಿಕೊಂಡರು.

ರಾಜ್‍ಕುಮಾರ್ ರವರು ಸುಧಾರಾಣಿಯವರ ಪ್ರತಿಭೆಯನ್ನು ಗುರುತಿಸಿ ಆನಂದ್ ಚಿತ್ರದ ನಾಯಕಿಯಾಗಿ ಆಯ್ಕೆ ಮಾಡಿದರು. ಆಸೆಗೊಬ್ಬ ಮೀಸೆಗೊಬ್ಬ, ಅಣ್ಣ ತಂಗಿ, ಮಿಡಿದ ಶ್ರುತಿ ಮುಂತಾದ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ಇವರು ತಮಿಳು ಭಾಷೆಯನ್ನು ತುಂಬಾ ಸರಾಗವಾಗಿ ಮಾತನಾಡುತ್ತಾರೆ. ರಮೇಶ್ ಅರವಿಂದ್‌ರವರ ಜೊತೆ ಪಂಚಮ ವೇದ, ಶ್ರೀಗ‍ಂಧ, ಅರಗಿಣಿ ಮತ್ತು ಅನುರಾಗ ಸಂಗಮ ಸೇರಿದಂತೆ ಎಂಟು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಸುಧಾರಾಣಿ ಅವರು ಸಿನಿಮಾ ಕ್ಷೇತ್ರದಲ್ಲಿ ಉತ್ತಂಗದಲ್ಲಿದ್ದರು. ಈ ಸಮಯದಲ್ಲಿ ಸುಧಾರಾಣಿ ಅವರು ನಟನೆಗೆ ಗುಡ್ ಬಾಯ್ ಹೇಳಿ ಮದುವೆಯಾದರು. ನಂತರ ಪತಿ ಡಾಕ್ಟರ್ ಸಂಜಯ್ ಅವರ ಜೊತೆ ಅಮೇರಿಕಾಗೆ ಹೋಗಿ ಸೆಟಲ್ ಆದರು. ಆದರೆ ಸುಧಾರಾಣಿ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕಾದ ಡಾಕ್ಟರ್ ಸಂಜಯ್ ಪ್ರಾಣ ಬೆದರಿಕೆಯನ್ನು ಮುಂದೆ ಇಡುತ್ತಾರೆ. ಸುಖದಲ್ಲೀ ಹಾಗೂ ಒಳ್ಳೆಯ ಕೆಲಸದಲ್ಲಿ ಇದ್ದ ಸುಧಾರಾಣಿ ಅವರು ಡಾಕ್ಟರ್ ಸಂಜಯ್ ಅವರ ಜೊತೆ ಮದುವೆಯಿಂದ ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಾರೆ. ಎಷ್ಟೋ ದಿನಗಳ ಕಾಲ ಬೇರೆಯವರ ಮನೆಯಲ್ಲಿ ಊಟ ಮಾಡಿ ಜೀವನ ನಡೆಸುತ್ತಿರುತ್ತಾರೆ.

sudharani, 'ರಾಗಿ ಮುದ್ದೆ ಪಾರ್ಟಿ' ಮಾಡಿದ ಸುಧಾರಾಣಿ, ಶ್ರುತಿ ಮತ್ತು ಮಾಳವಿಕಾ ಅವಿನಾಶ್ - kannada-actresses-sudharani-shruthi-and-malavika-avinash-enjoys-ragi-mudde-party - Vijaya Karnataka

ಇನ್ನೂ ಡಾಕ್ಟರ್ ಸಂಜಯ್ ಅವರು ಇಷ್ಟೊಂದು ಹಿಂಸೆ ಕೊಟ್ಟರು ಯಾವುದನ್ನು ಲೆಕ್ಕಿಸದೆ ಎಲ್ಲವನ್ನು ದೈರ್ಯದಿಂದ ಎದುರಿಸಿದ ಸುಧಾರಾಣಿ ಅವರ ಆತ್ಮ ಸ್ಥೈರ್ಯವನ್ನು ಮೆಚ್ಚಲೇ ಬೇಕು. ಕೊನೆಗೆ ಡಾಕ್ಟರ್ ಸಂಜಯ್ ಅವರು ಕೊಟ್ಟ ಹಿಂಸೆಯನ್ನು ಸಹಿಸದ ಸುಧಾರಾಣಿ ಅವರು ಈತನ ಸಹವಾಸವೇ ಬೇಡ ಎಂದು ಕೊನೆಗೊಂದು ದಿನ ವಿಚ್ಚೇದನವನ್ನು ಕೊಡುತ್ತಾರೆ.

ನಂತರ ಭಾರತಕ್ಕೆ ಬಂದು ಹೊಸ ಜೀವನವನ್ನು ಆರಂಭಿಸುತ್ತಾರೆ. ಹೀಗೆ ಮುಂದಿನ ದಿನಗಳಲ್ಲಿ ತಮ್ಮ ಕುಟುಂಬಕ್ಕೆ ಹತ್ತಿರವಾಗಿದ್ದ ಹಾಗೂ ಆಪ್ತರಾಗಿದ್ದ ತಮ್ಮ ಕಷ್ಟದ ದಿನಗಳಲ್ಲಿ ಮಾನಸಿಕ ಸ್ಥೈರ್ಯವನ್ನು ತುಂಬಿದ ಗೋವರ್ಧನ್ ಎಂಬುವವರನ್ನು ಸುಧಾರಾಣಿ ಅವರು ಮದುವೆ ಆದರು. ಈ ದಂಪತಿಗಳಿಗೆ ನಿಧಿ ಎಂಬ ಮುದ್ದಾದ ಮಗಳಿದ್ದಾರೆ. ಮಗಳು ಕೂಡ ಅಮ್ಮನಂತೆ ಸಿನಿಮಾ ರಂಗಕ್ಕೆ ಎಂಟ್ರಿಕೊಡುವ ಸಿದ್ದತೆಯಲ್ಲಿದ್ದಾರೆ.

PHOTOS: ಗಂಡ-ಮಗಳೊಂದಿಗೆ ಗ್ರೀಕ್​ನಲ್ಲಿ ಕಾಲ ಕಳೆಯುತ್ತಿದ್ದಾರೆ ಸುಧಾರಾಣಿ..!

ಇನ್ನೂ ಸುಧಾರಾಣಿ ಅವರು ನಾನು ಮೊದಲನೆಯ ಗಂಡನಿಂದ ವಂಚಿತಳಾಗಿದ್ದೆ. ಅವರಿಗೆ ವಿಚ್ಚೇದನ ನೀಡಿ ಭಾರತಕ್ಕೆ ಬಂದ ನಂತರ ನನ್ನ ಕೈ ಹಿಡಿದದ್ದು, ಆತ್ಮಸ್ಥೈರ್ಯವನ್ನು ತುಂಬಿದವರು ಗೋವರ್ಧನ್ ಅವರು. ಈಗಲೂ ಕೂಡ ಸುಧಾರಾಣಿ ಅವರಿಗೆ ಅವಕಾಶಗಳ ಮೇಲೆ ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದು ಸಿನಿಮಾ ರಂಗದಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ಇನ್ನೂ ಪೋಷಕ ಪಾತ್ರದಲ್ಲಿ ಮಿಂಚುತ್ತಿರುವ ಸುಧಾರಾಣಿ ಅವರನ್ನು ನೋಡಿ ಪ್ರೇಕ್ಷಕರು ಮೆಚ್ಚುಗೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಏನೇ ಆಗಲಿ ಮೊದಲ ಗಂಡನಿಂದ ಮೋಸ ಹೋಗಿ ಮತ್ತೆ ತನಗೆ ಸಪೋರ್ಟ್ ಮಾಡಿದ ವ್ಯಕ್ತಿಯನ್ನು ಮದುವೆಯಾಗಿ ಅವರ ಜೊತೆ ಸುಖ ಜೀವನ ನಡೆಸುತ್ತಿದ್ದಾರೆ.


ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.