
ಸಾಹಿತಿ ಅದೇ ರೀತಿ ಇನ್ಫೋಸಿಸ್ ಫೌಂಡೇಶನ್ ನ ಮುಖ್ಯಸ್ಥೆ ಸುಧಾಮೂರ್ತಿ ತನ್ನ ಸರಳ ವ್ಯಕ್ತಿತ್ವದಿಂದಲೇ ಜನಮೆಚ್ಚುಗೆ ಗಳಿಸಿದವರು. ತನ್ನ ಉದ್ಯಮದ ಜೊತೆ ಸಾಹಿತ್ಯ , ಕಲೆ, ಸಮಾಜ ಸೇವೆಯಲ್ಲಿ ಸದಾ ಮುಂದಿರುವ ಸುಧಾ ಮೂರ್ತಿ ಹೆಚ್ಚಿನವರಿಗೆ ಮಾದರಿ.
ಕನ್ನಡ ಹಾಗೂ ಇಂಗ್ಳೀಷ್ ಬರಹಗಾರ್ತಿ ಆಗಿರುವ ಸುಧಾ ಮೂರ್ತಿ, ವೃತ್ತಿಪರ ಕಂಪ್ಯೂಟರ್ ವಿಜ್ಞಾನಿ ಹಾಗೂ ಎಂಜಿನಿಯರ್. ಪ್ರಸ್ತುತ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಸುಧಾ ಮೂರ್ತಿ, ಬಿಲ್ ಗೇಟ್ಸ್ ಪ್ರತಿಷ್ಥಾನದ ಸಾರ್ವಜನಿಕ ಉಪಕ್ರಮಗಳ ಸದಸ್ಯರೂ ಹೌದು.
ಸಾವಿರಾರು ಮಂದಿಗೆ ಕೆಲಸ ಕೊಟ್ಟಿರುವ ಸುಧಾ ಮೂರ್ತಿ ಎಲ್ಲಿಗೂ ಅಹಂಕಾರದಿಂದ ವರ್ತಿಸುವುದಿಲ್ಲ. ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುವುದರ ಜೊತೆ ಸರಳ ಜೀವನವನ್ನೇ ನಡೆಸುತ್ತಾ ಬಂದವರು. ನಮ್ಮ ಸಂಸ್ಕೃತಿ ಹಾಗೂ ಇಲ್ಲಿನ ವಿಶೇಷತೆಯನ್ನು ಎತ್ತಿ ಹಿಡಿಯುವ ಇವರು ನಮ್ಮ ದೇಶದ ಹೆಮ್ಮೆಯ ಮಹಿಳೆ. ಹೃದಯ ವೈಶಾಲ್ಯ ಹೊಂದಿದ ಅವರು ಅದು ಯಾರೇ ಕಷ್ಟ ಅಂತ ಬಮ್ದರೆ ಅವರಿಗೆ ನೆರವಿಗೆ ನಿಲ್ಲುತ್ತಾರೆ. ಅದು ಆರೋಗ್ಯ ಸಮಸ್ಯೆ ಆಗಿರಲಿ ಅಥವಾ ಆರ್ಥಿಕ ಸಮಸ್ಯೆ ಇರಲಿ ಸಹಾಯ ಹಸ್ತ ಚಾಚುತ್ತಾರೆ.
ಇಂತಹ ಮಾತೃ ಹೃದಯಿ ಸುಧಾ ಮೂರ್ತಿ, ಕೇವಲ ಇಲ್ಲಿ ಮಾತ್ರ ಅಲ್ಲ ವಿದೇಶದಲ್ಲಿಯೂ ತುಂಬಾನೇ ಫೇಮಸ್. ಅವರನ್ನು ಈಗಿನ ಮದರ್ ಥೆರೆಸಾ ಎಂದೇ ಕರೆಯುತ್ತಾರೆ. ಇಂತಹ ಅಮ್ಮನವರ ಒಂದು ವಿಡಿಯೋ ಇದೀಗ ವೈರಲ್ ಆಗ್ತಿದೆ. ಅದು ಅವರು ತನ್ನ ತಾಯಿಯೊಂದಿಗೆ ತಮ್ಮ ಪ್ರೀತಿಯ ನಾಯಿ ಗೋಪಿಯ ಹುಟ್ಟು ಹಬ್ಬ ಆಚರಿಸಿರುವ ವಿಡಿಯೋ. ಆ ವಿಡಿಯೋದಲ್ಲಿ ಸುಧಾ ಮೂರ್ತಿ ಹಾಗೂ ಅವರ ತಾಯಿ ಸೋಫಾದಲ್ಲಿ ಮಲಗಿರುವ ನಾಯಿ ಗೋಪಿಗೆ ಆರತಿ ಬೆಳಗುವುದರ ಮೂಲಕ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.
ಮೂರ್ತಿ ಅವರ ಅಮ್ಮ ’ ಆರತಿ ಬೆಳಗಿರೆ ಪಾರ್ವತಿಗೆ’ ಎಂದು ಹಾಡುವಾಗ, ಸುಧಾ ಮೂರ್ತಿ, ಅದು ಪಾರ್ವತಿ ಅಲ್ಲ ಗೋಪಿ ಅಂತಾರೆ. ಗೋಪಣ್ಣ ಹ್ಯಾಪಿ ಬರ್ತ್ ಡೇ ಎಂದು ಹೇಳುತ್ತಾ, ಅದರ ಹಣೆಗೆ ಕುಂಕುಮ ಹಚ್ಚುತ್ತಾರೆ. ಅದು ಖುಷಿಯಿಂದ ತಲೆ ಅಲ್ಲಾಡಿಸುವಾಗ, ಹಾ ಖುಷ್ ಹೋಗಯಾ ಎಂದು ಹೇಳಿ ಆನಂದಿಸುತ್ತಾರೆ. ವಿಠಲನ ಹಾಡು ಹಾಡುತ್ತಾ, ಅಂದವಂತನಾಗು, ಚಂದವಂತನಾಗು ಎಂದು ಹಾಡುತ್ತಾರೆ.
ಕೊನೆಗೆ ಗೋಪಿಗೆ 3 ವರ್ಷ ಆಯ್ತು ಅಂತ ಹೇಳುತ್ತಾ, ಗೋಪಿಯ ಮೈ ಸವರಿ, ಅದರ ಮೈ ಮೇಲೆ ಬೀಳುತ್ತಾ ಮುದ್ದು ಮಾಡಿದ್ದಾರೆ. ಇದು ತಮ್ಮ ಸಾಕು ನಾಯಿ ಮೇಲೆ ಸುಧಾ ಮೂರ್ತಿಗೆ ಅದೆಷ್ಟು ಪ್ರೀತಿ ಇದೆ ಅನ್ನುವುದನ್ನು ತೋರಿಸಿದೆ. ಈಗಲೂ ಸುಧಾ ಮೂರ್ತಿ ಅವರದ್ದು ಮಗುವಿನಂತಹ ಮನಸ್ಸು ಅನ್ನುವುದಕ್ಕೆ ಇದೊಂದು ಸಾಕ್ಷಿಯಾಗಿದ್ದು, ವಿಡಿಯೋ ಭಾರೀ ವೈರಲ್ ಆಗಿದೆ.
Comments are closed.