ಗಳಿಸುವುದಲ್ಲ..ಗಳಿಸಿದ್ದನ್ನು ಹಂಚಿ ತಿನ್ನುವುದು ನಿಜವಾದ ಸಾಧನೆಯೆಂದು ದೇಶಕ್ಕೆ ಸಾರಿದ ಹೆಮ್ಮೆಯ ಕನ್ನಡತಿ ಡಾ. ಸುಧಾಮೂರ್ತಿ ಅಮ್ಮನವರಿಗೆ ಜನ್ಮದಿನದ ಶುಭಾಶಯಗಳು. 🙏💐

ನಮಸ್ತೆ ಪ್ರೀತಿಯ ವೀಕ್ಷಕರೆ ನಾಡು ಕಂಡ ಹೆಮ್ಮೆಯ ಶ್ರೀಮತಿ ಸುಧಾ ಮೂರ್ತಿ… ಈ ಹೆಸರಿನಲ್ಲಿಯೇ ಅದೇನೋ ಒಂದು ಆಕರ್ಷಣೆ ಇದೆ. ಕನ್ನಡ ಮಣ್ಣಿನ ಕುವರಿ, ಅಸಾಮಾನ್ಯ ಸಾಧಕಿ ಇವರು. ಇದರ ಜೊತೆಗೆ ಕನ್ನಡ ಮತ್ತು ಇಂಗ್ಲಿಷ್‌ನ ಖ್ಯಾತ ಬರಹಗಾರ್ತಿ, ಸಮಾಜಸೇವಕಿಯೂ ಆಗಿರುವ ಸುಧಾ ಮೂರ್ತಿಯವರು ಜನಿಸಿದ್ದು 21ನೇ ಆಗಸ್ಟ್‌ 1950ರಂದು. ಅವರು ಜನಸಾಮಾನ್ಯನ ಏಳಿಗೆಗಾಗಿ ಹಲವು ಸಂಘ ಸಂಸ್ಥೆಗಳೊಂದಿಗೆ ದುಡಿದವರು.

ಪ್ರತಿಷ್ಠಾನದ ಮೂಲಕ, ಸಮಾಜ ಸೇವೆಯೊಂದಿಗೆ, ಜನ ಸಾಮಾನ್ಯರ ಸಮಸ್ಯೆಗಳಿಗೆ ಮಿಡಿದ ಹೆಮ್ಮೆಯ ಕನ್ನಡತಿ. ಇಷ್ಟು ಹೇಳಿದರೆ ಸಾಕು ನಮ್ಮ ಹೆಮ್ಮೆಯ ಕನ್ನಡತಿ ಸುಧಾ ಮೂರ್ತಿಯವರ ವ್ಯಕ್ತಿತ್ವ ಕಣ್ಣಮುಂದೆ ಬರುತ್ತದೆ. ಸರಳತೆಯ ಸಾಕಾರ ಮೂರ್ತಿ ಸುಧಾಮ್ಮನವರ ಜನ್ಮದಿನ ಇಂದು. ಈ ಸಿಹಿ ಘಳಿಗೆಯಲ್ಲಿ ಅವರು ಬಂದ ಹಾದಿಯಲ್ಲೊಂದು ಇಣುಕು ನೋಟ.

ಸುಧಾಮೂರ್ತಿಯವರು ಧಾರವಾಡ ಜಿಲ್ಲೆಯ ಶಿವಗಾವ್ ಗ್ರಾಮದ ಕುಲಕರ್ಣಿ ಮನೆತನದಲ್ಲಿ ಆಗಸ್ಟ್ 18ರಂದು ಜನಿಸಿದರು. ಸುಧಾ ಮೂರ್ತಿಯವರ ತಂದೆ, ರಾಮಚಂದ್ರ ಕುಲಕರ್ಣಿಯವರು ಹುಬ್ಬಳ್ಳಿಯ ಕೆ. ಎಂ ಕಾಲೇಜಿನ ಸ್ತ್ರೀ ರೋಗ ತಜ್ಞರು, ಪ್ರಧ್ಯಾಪಕರು. ತಾಯಿ ವಿಮಲಾ ಕುಲಕರ್ಣಿಯವರು ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದ್ದರು. ಈ ದಂಪತಿಗಳಿಗೆ 4 ಜನ ಒಡಹುಟ್ಟಿದವರು.

ಡಾ. ಸುಧಾಮೂರ್ತಿ Archives – Vijayavani

ಇನ್ಸ್ಟಿಟ್ಯೂಟ್ ನಲ್ಲಿ ಎಮ್. ಇ ( ಕಂಪ್ಯೂಟರ್ ಸೈನ್ಸ್ ) ಪದವಿಗಳಿಸಿದರು. ಚಿನ್ನದ ಪದಕ ಗಳಿಸಿದ ಏಕೈಕ ಮಹಿಳಾ ವಿದ್ಯಾರ್ಥಿನಿ. ಸುಧಾ ಮೂರ್ತಿ ಅವರ ಪ್ರಾಥಮಿಕ ಮಧ್ಯಾಮಿಕ ಮತ್ತು ಹೈಸ್ಕೂಲ್ ವಿದ್ಯಾಭ್ಯಾಸವೆಲ್ಲಾ ಅವರ ಹುಟ್ಟುರಾದ ಹಾವೇರಿ ಜಿಲ್ಲೆಯ ಶಿವಾಗಾವ್ ನಲ್ಲಿ ಮಾಡಿದರು. 1966ರಲ್ಲಿ ಹುಬ್ಬಳ್ಳಿ ಯಲ್ಲಿ ನ್ಯೂ ಎಜುಕೇಷನ್ ಸೊಸೈಟಿ ಯ ಗರ್ಲ್ಸ್ ಇಂಗ್ಲಿಷ್ ಸ್ಕೋಲ್ ನಿಂದ ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕವನ್ನು ಪಡೆದುಕೊಂಡು ಉತ್ತಿರ್ಣರಾದರು.

ಇನ್ನೂ ಸುಧಾ ಮೂರ್ತಿ ಅಮ್ಮನವರು ಅಭಿರುದ್ದಿ ಪಡಿಸದ ಕ್ಷೇತ್ರವಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಸಮಾಜ ಸುಧಾರಣೆಗಾಗಿ ಇವರು ಸದಾ ಮಿಡಿಯುತ್ತಿದ್ದರು. ಸರಕಾರಿ ಹಾಗೂ ಸರಕಾರಿ ಅನುದಾನಿತ ಶಾಲೆಗಳಿಗೆ ಕಂಪ್ಯೂಟರ್ ಶಿಕ್ಷಣ ಮತ್ತು ಗ್ರಂಥಾಲಯ ಸೌಲಭ್ಯ ಒದಗಿಸುವುದು ಅವರ ಗುರಿ. ತಮ್ಮ ಬಿಡುವಿಲ್ಲದ ಸಮಾಜಕಾರ್ಯದ ನಡುವೆಯೂ ಅವರು ಕಂಪ್ಯೂಟರ್ ವಿಜ್ಞಾನವನ್ನೂ ಕಲಿತಿದ್ದಾರೆ. ಇವರು ಅನೇಕ ಜನಪ್ರಿಯ ಕಥೆ ಕಾದಂಬರಿಗಳನ್ನು ಬರೆಯುವ ಜನಪ್ರಿಯ ಬರಹಗಾರ್ತಿಯೂ ಹೌದು. ಇವರು “ಗೇಟ್ಸ್ ಪೌಂಡೇಶನ್” ನ ಆರೋಗ್ಯ ಸುಧಾರಣೆ ಕ್ರಮಗಳ ಭಗವಾಗಿಯೂ ಸಮಾಜ ಸೇವೆ ಸಲ್ಲಿಸುತ್ತಿದ್ದಾರೆ.

ನಾರಾಯಣ ಮೂರ್ತಿ ಸಾಧನೆಯಲ್ಲಿ ಜೊತೆಯಾಗಿ, ಅವರ ಬೆನ್ನೆಲುಬಾಗಿ ನಿಂತಿರುವ ಸರಳ ವ್ಯಕ್ತಿತ್ವದ ವ್ಯಕ್ತಿ ಸುಧಾಮೂರ್ತಿ ಇನ್ಫೋಸಿಸ್ ಎಂಬ ಗಿಡ ಇಂದು ಹೆಮ್ಮರವಾಗಿ ಬೆಳೆಯಲು ಕಾರಣವಾಗಿದೆ. ಸುಧಾ ಮೂರ್ತಿ ಅಮ್ಮನವರು ಸಮಾಜ ಸೇವೆಯ ಬಗ್ಗೆ ಯೋಚಿಸುವ ಇವರು ಪ್ರತಿ ವರ್ಷ ಇನ್ಫೋಸಿಸ್ ಪೌಂಡೇಶನ್ ಮೂಲಕ 400 ಕೋಟಿ ರೂಪಾಯಿಗಳನ್ನು ಸಮಾಜ ಸೇವೆಗೆಂದೇ ಮಿಸಲಿಟ್ಟಿರುತ್ತಾರೆ.

25 sudha murthy thoughts collections in kannada – Artofit

ಭಾರತಕ್ಕೆ ಅಂಟಿಕೊಂಡಿದ್ದ ಕೆಟ್ಟ ದೇವದಾಸಿ ಪದ್ದತಿಯನ್ನು ನಿರ್ಮೂಲನೆ ಮಾಡಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ರಾಯಚೂರಿನಲ್ಲಿ ಹೆಚ್ಚಾಗಿ ಇದ್ದ ಈ ಪಿಡುಗನ್ನು ನಿರ್ಮೂಲನೆ ಮಾಡಿ ಸುಮಾರು ಇಪ್ಪತ್ತು ಸಾವಿರ ಹೆಣ್ಣುಮಕ್ಕಳನ್ನೂ ಅದರಿಂದ ಹೊರ ತಂದು ಅವರಿಗೆ ಕೌದಿ ಹೋಲಿಯುದನ್ನು ಹೇಳಿಕೊಟ್ಟು ಸ್ವಾವಲಂಬಿಯಾಗಿ ಬದುಕಲು ಹೇಳಿಕೊಟ್ಟಿದ್ದಾರೆ. ಇದರ ಕುರಿತು ಅವರು 3000 Stitiches ಎಂಬ ಪುಸ್ತಕವನ್ನೂ ಬರೆದಿದ್ದಾರೆ.

ಇಲೆಕ್ಟ್ರಾನಿಕ್ ಹಾಗೂ ಎಲೆಕ್ಟ್ರಿಕಲ್ ವಿಭಾಗದಲ್ಲಿ ಎಂಜಿನಿಯರಿಂಗ್ ಮಾಡಿರುವ ಸುಧಾ ಮೂರ್ತಿಯವರಿಗೆ ಸಮಾಜ ಸೇವೆಯ ಕಡೆಗೆ ಭಾರಿ ಒಲವು. ಕಾಲೇಜಿನಲ್ಲಿ ಓದುತ್ತಿದ್ದಾಗ ಸೌಚಾಲಯಕ್ಕಾಗಿ ಅವರು ಅನುಭವಿಸಿದ ಕಷ್ಟ ಬೇರೆ ಹೆಣ್ಣುಮಕ್ಕಳಿಗೆ ಬರಬಾರದೆಂದು ಗುಲ್ಬರ್ಗದಲ್ಲಿ ಸುಮಾರು 15,000 ಹೆಚ್ಚು ಸೌಚಾಲಯವನ್ನು ನಿರ್ಮಿಸಿದ್ದರೆ. ಇವರ ಈ ಸಮಾಜ ಸೇವೆ ಇನ್ನಷ್ಟು ಹೆಚ್ಚಿಸಲಿ.

ಹೆಮ್ಮೆಯ ಸುಧಾ ಮೂರ್ತಿ ಅಮ್ಮನವರಿಗೆ ನಿಮ್ಮ ಶುಭಾಶಯಗಳನ್ನೂ ತಿಳಿಸಿ ಹಾಗೂ ಅವರ ಸಮಾಜ ಸೇವೆ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.

You might also like

Comments are closed.