Sudha-Murthy

ವರ್ಷವಾದರೂ ಒಂದೇ ಒಂದು ಹೊಸ ಸೀರೆ ಖರೀದಿ ಮಾಡಿಲ್ಲ ಎಂದ್ರು ಸುಧಾ ಮೂರ್ತಿ ಇಲ್ಲಿದೆ ಕಾರಣ.

Entertainment/ಮನರಂಜನೆ

Sudha Murthy Has Not Bought A Single New Saree At The Age Of 21: ದೇಶದ ದಿಗ್ಗಜ ಕಂಪನಿಗಳಲ್ಲೊಂದಾದ ಇನ್ಫೋಸಿಸ್(Infosys) ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಭಾನುವಾರ ಸೋಶಿಯಲ್ ಮೀಡಿಯಾದಲ್ಲಿ ಆಭರೀ ಟ್ರೆಂಡ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ(Social Media) ಅವರ ಫೋಟೋ ಒಂದು ಭಾರಿ ವೈರಲ್ ಆಗಿದ್ದು, ಇದರಲ್ಲಿ ಅವರು ತರಕಾರಿ ಮಾರುತ್ತಿರವ ದೃಶ್ಯವಿದೆ. ಇದರೊಂದಿಗೆ ಕೋಟ್ಯಾಧಿಪತಿಯಾಗಿದ್ದರೂ ಇಷ್ಟು ಸರಳ ಬದುಕು ನಡೆಸುವುದು ಸುಲಭದ ಕೆಲಸವಲ್ಲ, ಆದ್ರೆ ಸುಧಾ ಮೂರ್ತಿಯವರ ಜೀವನ ಶೈಲಿಯೇ ಅಂತಹುದು ಎಂದು ಬರೆಯಲಾಗಿದೆ.

ಜೊತೆಗೆ ಇವರು ವರ್ಷಕ್ಕೊಂದು ಬಾರಿ ಈ ಕೆಲಸ ಮಾಡುತ್ತಾರೆ ಎಂಬ ಸಂದೇಶವೂ ಕಳುಹಿಸಲಾಗಿದೆ.ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇವರ ಬಗ್ಗೆ ಹಲವು ವಿಚಾರ ವೈರಲ್ ಆಗುತ್ತಿದೆ. ಗೂಗಲ್ ರಿವರ್ಸ್ ಇಮೇಜ್ ಸರ್ಚ್‌ನಲ್ಲಿ ಹುಡುಕಾಡಿದಾಗ ಈ ಫೋಟೋ 2016ರದ್ದೆದು ತಿಳಿದು ಬರುತ್ತದೆ. ಪರೋಪಕಾರಿ ಮನಸ್ಸುಳ್ಳ ಅವರು ಪ್ರತಿವರ್ಷ ಬೆಂಗಳೂರಿನ ಜಯನಗರದ ತಮ್ಮ ನಿವಾಸದ ಬಳಿ ಇರುವ ರಾಘವೇಂದ್ರ ಸ್ವಾಮಿ ಮಂದಿರದ ಬಳಿ ನಡೆಯುವ ರಾಘವೇಂದ್ರ ಆರಾಧನಾ ಉತ್ಸವದಲ್ಇ ತಪ್ಪದೇ ಕರ ಸೇವೆ ಮಾಡುತ್ತಾರೆ.

Rohan Murty wedding: Rohan Murty, Aparna Krishnan tie the knot in an  intimate ceremony; Bombay Jayashri performs at reception

ಬೆಳಗ್ಗೆ ನಾಲ್ಕು ಗಂಟೆಗೆ ತಮ್ಮ ಸಹಯೋಗಿ ಜೊತೆ ದೇವಸ್ಥಾನದ ಭೋಜನಾಲಯಕ್ಕೆ ಆಗಮಿಸಿ, ಅಲ್ಲಿನ ಹಾಗೂ ಅಕ್ಕ ಪಕ್ಕದಲ್ಲಿರುವ ಕೋಣೆಗಳನ್ನು ಸ್ವಚ್ಛಗೊಳಿಸುತ್ತಾರೆ. ಇಷ್ಟೇ ಅಲ್ಲದೇ ಅಲ್ಲಿನ ಅಡುಗೆ ಪಾತ್ರೆಗಳನ್ನು ತೊಳೆಯುವುದು, ಶೆಲ್ಫ್‌ಗಳ ಸ್ವಚ್ಛತೆ, ತರಕಾರಿ ಸ್ಟಾಕ್ ಪಡೆದು ಅವುಗಳನ್ನು ಕತ್ತರಿಸುವುದು ಹೀಗೆ ತಮ್ಮಿಂದಾಗುವ ಸೇವೆ ಮಾಡುತ್ತಾರೆ.

2013ರಲ್ಲಿ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಸುಧಾ ಮೂರ್ತಿ ಹಣ ಕೊಡುವುದು ಸುಲಭ, ಆದರೆ ನಾವೇ ನಮ್ಮ ಕೈಯ್ಯಾರೆ ಇಂತಹ ಸೇವೆ ಮಾಡುವುದು ಕಷ್ಟವೆನಿಸುತ್ತದೆ. ಇನ್ನು ದೇವಸ್ಥಾನದ ಆಯೋಜಕರು ಹೇಳಿರುವ ಅನ್ವಯ ಸುಧಾ ಮೂರ್ತಿ ಪ್ರತಿ ವರ್ಷ ಮೂರು ದಿನ ಸ್ಟೋರ್‌ ರೂಂನ ಮ್ಯಾನೇಜರ್‌ನಂತೆ ಕಾರ್ಯ ನಿರ್ವಹಿಸುತ್ತಾರೆಂಬುವುದು ತಿಳಿದು ಬಂದಿದೆ. ಅದೆರೀತಿ ಅವರು ತುಂಬಾ ಸರಳವಾಗಿ ಯಾಕಿದ್ದರೆ ಎಂಬ ಬಗ್ಗೆ ಹೇಳಿದ್ದಾರೆ.

ಸೀರೆ ಖರೀದಿ ಮಾಡಿಲ್ಲ

ಸುಧಾ ಮೂರ್ತಿ ಅವರು ಸುಮಾರು ಇಪ್ಪತ್ತೊಂದು ವರ್ಷದಿಂದ ಒಂದೆ ಒಂದು ಹೊಸ ಸೀರೆ ಖರೀದಿ ಯಾಕೆ ಮಾಡಿಲ್ಲ ಎಂಬ ಸತ್ಯ ತಿಳಿಸಿದ್ದಾರೆ. ಎಲ್ಲರೂ ಕಾಶಿ ಹೋಗಿ ಅಲ್ಲಿ ತಮ್ಮ ಪಾಪ ಕರ್ಮ ಬಿಡಲು ಬಟ್ಟೆ ಬಿಡುತ್ತಾರೆ. ಅದೇ ರೀತಿ ನಾನಿನ್ನು ಸರಳ ಜೀವನ ಮಾಡುವೆ ಎಂದು ಕಾಶಿಯಲ್ಲಿ ಸುಧಾ ಮೂರ್ತಿ ಅವರು ಶಪತ ಮಾಡಿದ್ದ ಕಾರಣದಿಂದ ಇದುವರೆಗೂ ಹೊಸ ಬಟ್ಟೆ ಖರೀದಿ ಮಾಡಿಲ್ಲ ವಂತೆ ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...