sudeep-in-politics

ರಾಜಕೀಯ ಎಂಟ್ರಿ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು ಗೊತ್ತಾ?.. ನೋಡಿ ವಿಡಿಯೋ

Entertainment/ಮನರಂಜನೆ

ಸಿನಿಮಾರಂಗದಲ್ಲಿ ಕೆಲವು ವರ್ಷಗಳ ಕಾಲ ಮಿಂಚಿದ ಮೇಲೆ ಸಹಜವಾಗಿ ಕೆಲವು ಸ್ಟಾರ್ ನಟ ನಟಿಯರು ರಾಜಕೀಯ ಪ್ರವೇಶ ಮಾಡುತ್ತಾರೆ. ಇನ್ನು ಕೆಲವರು ಸಿನಿಮಾರಂಗದಲ್ಲಿ ಗೆದ್ದಿದ್ದರು ಸಹ ರಾಜಕೀಯದಲ್ಲಿ ಸೋತು ಸುಮ್ಮನಾಗುತ್ತಾರೆ. ಆದರೆ ಕೆಲವರು ಸಿನಿಮಾರಂಗದ ಜೊತೆಗೆ ರಾಜಕೀಯ ಕ್ಷೇತ್ರದಲ್ಲಿ ಸಹ ಯಶಸ್ಸು ಕಾಣುತ್ತಾರೆ.

ಇನ್ನು ಸಿನಿಮಾರಂಗದ ದೊಡ್ಡ ದೊಡ್ಡ ನಟರಾದ ಜಗ್ಗೇಶ್, ನಟಿ ರಮ್ಯಾ ಹೀಗೆ ಹಲವರು ಮಂದಿ ಸಿನಿಮಾರಂಗದಿಂದ ರಾಜಕೀಯ ಪ್ರವೇಶ ಮಾಡಿದ್ದಾರೆ. ಇನ್ನು ಇದೀಗ ಇದೆ ಸಾಲಿನಲ್ಲಿ ಮತ್ತೊಂದು ಹೆಸರು ಕೇಳಿಬರುತ್ತಿದೆ. ಹೌದು ಕಳೆದ ಕೆಲವು ದಿನಗಳಿಂದ ನಟ ಕಿಚ್ಚ ಸುದೀಪ್ ಅವರು ರಾಜಕೀಯ ಪ್ರವೇಶದ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ.

ನಟ ಕಿಚ್ಚ ಸುದೀಪ್ ಅವರನ್ನು ರಾಜಕೀಯಕ್ಕೆ ಕರೆ ತರುವ ಪ್ರಯತ್ನ ಸಾಕಷ್ಟು ಪಕ್ಷಗಳು ಮಾಡುತ್ತಿದೆ. ಆದರೆ ಕಿಚ್ಚ ಸುದೀಪ್ ಅವರು ಯಾವ ಪಕ್ಷ ಸೇರಲ್ಲಿದ್ದಾರೆ ಎನ್ನುವ ಸಾಕಷ್ಟು ಪ್ರಶ್ನೆಗಳು ಎಲ್ಲರಲ್ಲೂ ಮೂಡಿತ್ತು. ಆದರೆ ಇದೀಗ ಈ ಎಲ್ಲಾ ಪ್ರಶ್ನೆಗಳಿಗೆ ಸ್ವತಃ ನಟ ಕಿಚ್ಚ ಸುದೀಪ್ ಅವರೇ ಉತ್ತರ ನೀಡಿದ್ದಾರೆ.

ಹಾಗಾದರೆ ನಟ ಕಿಚ್ಚ ಸುದೀಪ್ ಅವರು ರಾಜಕೀಯ ಪಕ್ಷ ಪ್ರವೇಶ ಮಾಡುತ್ತಿದ್ದಾರಾ? ಯಾವ ಪಕ್ಷಕ್ಕೆ ಸೇರುತ್ತಿದ್ದಾರೆ? ಈ ಬಗ್ಗೆ ಕಿಚ್ಚ ಸುದೀಪ್ ಅವರು ಹೇಳಿದ್ದಾದರೂ ಏನು? ಈ ರೀತಿಯ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತೇವೆ ಈ ಪುಟವನ್ನು ಸಂಪೂರ್ಣವಾಗಿ ಓದಿ….

ನಾನು ಒಬ್ಬ ಕಲಾವಿದ, ಹಾಗೆ ಇವರೆಲ್ಲ ನನ್ನ ಸ್ನೇಹಿತರು. ಹಾಗೆಂದು ಯಾವುದೇ ರಾಜಕೀಯ ಚರ್ಚೆಗಳು ನಡೆದಿಲ್ಲ ಎಂದು ನಾನು ಹೇಳುವುದಿಲ್ಲ. ನನ್ನನ್ನು ರಾಜಕೀಯಕ್ಕೆ ಬರುವಂತೆ ಆಹ್ವಾನಿಸುವುದರಲ್ಲಿ ಯಾವುದೇ ತಪ್ಪಿಲ್ಲ. ನನ್ನನ್ನು ಸಾಕಷ್ಟು ರಾಜಕೀಯ ನಾಯಕರು ತಮ್ಮ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದಾರೆ.

ನಾನು ಸಾಕಷ್ಟು ರಾಜಕೀಯ ಪಕ್ಷದ ನಾಯಕರ ಜೊತೆಗೆ ಒಳ್ಳೆಯ ಸಂಬಂಧ ಹೊಂದಿದ್ದೇನೆ. ಅದು ಡಿಕೆಶಿ ಆಗಿರಬಹುದು, ಅಥವಾ ಬೊಮ್ಮಾಯಿ, ಅಥವಾ ಸಿದ್ದರಾಮಯ್ಯ ಆಗಿರಬಹುದು. ನಾನು ಎಲ್ಲಾ ಪಕ್ಷದ ನಾಯಕರ ಜೊತೆಗೆ ಉತ್ತಮ ಸ್ನೇಹ ಹೊಂದಿದ್ದೇನೆ. ನಾನು ರಾಜಕೀಯ ಪ್ರವೇಶದ ಬಗ್ಗೆ ಇನ್ನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಇನ್ನು ಸಹ ಚರ್ಚೆಗಳು ನಡೆಯುತ್ತಿದ್ದು, ನಾನು ನಿರ್ಧರಿಸಿದಾಗ ಈ ಬಗ್ಗೆ ತಿಳಿಸುತ್ತೇನೆ ಎಂದಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವ ಬದಲು ಪಕ್ಷಗಳ ನಾಯಕರನ್ನು ಬೆಂಬಲಿಸುವಲ್ಲಿ ನನನ್ನು ಆಯ್ಕೆ ಮಾಡಬಹುದು ಎನುವ ಸುಳಿವನ್ನು ಕಿಚ್ಚ ಸುದೀಪ್ ಅವರು ನೀಡಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.