ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ ಇದೀಗ ವಿಕ್ರಾಂತ್ ರೋಣದ ಮೂಲಕ ಇದೇ ತಿಂಗಳು 28 ನೇ ತಾರೀಕು ಭರ್ಜರಿಯಾಗಿ ವಿಶ್ವದಾದ್ಯಂತ ಕಾಲಿಡುತ್ತಿದೆ. ಹೌದು ಎಲ್ಲರಿಗೂ ಗೊತ್ತಿರುವಂತೆ ಕನ್ನಡದ ಕಿಚ್ಚ ಸುದೀಪ್ ಅವರು ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ, ಬೇರೆ ಬೇರೆಯ ಭಾಷೆಗಳಲ್ಲೂ ಕೂಡ ಹೆಚ್ಚಾಗಿ ಗಮನ ಸೆಳೆಯುತ್ತಾರೆ. ಕೆಲ ಸಿನಿರಂಗದಲ್ಲೂ ಕಿಚ್ಚ ಅಭಿನಯ ಮಾಡಿ ಸೈ ಎನಿಸಿಕೊಂಡ ನಟ. ಹಾಗೆ ಯಾವುದೇ ವಿಚಾರ ಇದ್ದರೂ ಯಾರಿಗೂ ಕೂಡ ಅಂಜದೆ ಕನ್ನಡದ ವಿಷಯಕ್ಕೆ ಬಂದಾಗ ಖಡಕ್ಕಾಗಿಯೇ ಪ್ರತಿಕ್ರಿಯೆ ನೀಡುತ್ತಾರೆ ಕಿಚ್ಚ ಸುದೀಪ್. ಇತ್ತೀಚಿಗಷ್ಟೇ ಹಿಂದಿ ರಾಷ್ಟ್ರಭಾಷೆ ಅಲ್ಲ ಎನ್ನುವ ವಿಚಾರವಾಗಿ ಟ್ವಿಟರ್ ನಲ್ಲಿ ನಡೆದ ವಾಗ್ವಾದ ನೀವು ಕೂಡ ನೋಡಿದ್ದೀರಿ, ಕಿಚ್ಚ ಸುದೀಪ್ ಅವರ ಆ ಒಂದು ಟ್ವಿಟ್ಗೆ ಇಡೀ ದೇಶವೇ ಭೇಷ್ ಎಂದಿತ್ತು.
ಹಾಗೆ ಅಜಯ್ ದೇವ್ಗನ್ ಗೆ ಅವರದ್ದೇ ಆದ ಶೈಲಿಯಲ್ಲಿ ಕಿಚ್ಚ ಸುದೀಪ್ ಮಾಡಿದ್ದ ಪ್ರತಿಕ್ರಿಯೆ ಕನ್ನಡಿಗರು ಹೆಮ್ಮೆ ಪಡುವಂತೆ ಇತ್ತು. ಕನ್ನಡ ಭಾಷೆಯನ್ನು ಸುದೀಪ್ ಅವರು ತುಂಬಾ ಪ್ರೀತಿಸುತ್ತಾರೆ. ಕನ್ನಡ ಭಾಷೆ ಬಗ್ಗೆ ಆಗಲಿ, ಅಥವಾ ಕನ್ನಡ ನಾಡಿನ ಬಗ್ಗೆ ಆಗಲಿ ಯಾರೇ ಏನೇ ಅಂದರೂ ಕಿಚ್ಚ ಸುದೀಪ್ ಅವರು ಸುಮ್ಮನೆ ಇರುವುದಿಲ್ಲ ಮುಂದಿರುತ್ತಾರೆ ಎಂದು ಹೇಳಬಹುದು.
ಸುದೀಪ್ ಅವರ ಅಭಿನಯದಲ್ಲಿ ಮೂಡಿ ಬರುತ್ತಿರುವ ವಿಕ್ರಾಂತ್ ರೋಣ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಸಹ ಇದೆ. ಇದೀಗ ಆ ಸಿನಿಮಾ ಪ್ರಚಾರದಲ್ಲಿ ಸುದೀಪ ಅವರು ತುಂಬಾ ಬಿಜಿಯಾಗಿದ್ದಾರೆ. ದೆಹಲಿಗೆ ತೆರಳಿದ ಕಿಚ್ಚ ಸುದೀಪ್ ಸಿನಿಮಾ ಅಲ್ಲಿಗೆ ಹೋಗಿದ್ದು ತಮ್ಮ ಸಿನಿಮಾ ಪ್ರಚಾರಕ್ಕೆ ಎಂದು ಹೇಳಲಾಗುತ್ತಿದೆ. ಹಾಗೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಮೀಟ್ ಮಾಡಿದರು.
ಹಾಗೆ ಎನ್ ಎಫ್ಟಿ ಕೂಡ ವಿಕ್ರಾಂತ್ ರೋಣ ಸಿನಿಮಾದಲ್ಲಿ ಬಳಕೆಯಾಗಿದೆ. ಅದರ ಕುರಿತು ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆಗ ಎ ಏನ್ ಎಫ್ಟಿ ಸಂಬಂಧಪಟ್ಟ ಒಬ್ಬ ವ್ಯಕ್ತಿ ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಮತ್ತು ಕನ್ನಡ ಸಿನಿಮಾ ಬಗ್ಗೆ ಮಾತನಾಡುವಾಗ ಕನ್ನಡ್ ಎಂದು ಬಳಕೆ ಮಾಡುತ್ತಾರೆ. ಆಗ ಕಿಚ್ಚ ಸುದೀಪ್ ಅವರು ಖಡಕ್ಕಾಗಿಯೇ ಕನ್ನಡ ಎಂದು ತಿಳಿ ಹೇಳುತ್ತಾರೆ. ನೀವು ಕೂಡ ಆ ವಿಡಿಯೋ ಈಗಾಗಲೇ ನೋಡಿರುತ್ತೀರಿ. ಆ ವಿಡೀಯೋ ಬಗ್ಗೆ ಕಿಚ್ಚ್ ಸುದೀಪ್ ಖಡಕ್ ಆಗಿ ಹೇಳಿದ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ತಿಳಿಸಿ. ಅಸಲಿಗೆ ಕನ್ನಡ್ ಎಂದ ಆ ವ್ಯಕ್ತಿ ಯಾರು ಗೊತ್ತಾ..? ಆತ ಬೇರೆ ಯಾರು ಅಲ್ಲ, ಎನ್ ಎಫ್ಟಿಯನ್ನ ಪ್ರತಿನಿಧಿಸುವ ವ್ಯಕ್ತಿಯಂತೆ. ಈಗ ಸುದೀಪ್ ಅವರು ಕನ್ನಡ ಎಂದು ಹೇಳಿಕೊಟ್ಟ ಶೈಲಿಗೆ ಎಲ್ಲರು ಫಿದಾ ಆಗಿದ್ದಾರೆ ಎಂದು ಹೇಳಬಹುದು..