Pavithra-Lokesh

ಹೆಂಡತಿ ಪವಿತ್ರ ಲೋಕೇಶ್ ಬಗ್ಗೆ ಕೊನೆಯದಾಗಿ ಶಾಕಿಂಗ್ ಹೇಳಿಕೆ ಕೊಟ್ಟ ಸುಚೇಂದ್ರ ಪ್ರಸಾದ್..!

CINEMA/ಸಿನಿಮಾ

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಾಗಿರುವ ವಿಷಯ ಏನು ಅಂದರೆ ಅದೂ ಪವಿತ್ರ ಲೋಕೇಶ್ ಅವರ ಎರಡನೆಯ ಮದುವೆಯ ವಿಚಾರ ಎಂದು ಹೇಳಬಹುದು. ಹೌದು ಕನ್ನಡದ ಖ್ಯಾತ ನಟಿ ಪವಿತ್ರ ಲೋಕೇಶ್ ಅವರು ಟಾಲಿವುಡ್ ನಿರ್ಮಾಪಕ ಮತ್ತು ನಿರ್ದೇಶಕ ನರೇಶ್ ಬಾಬು ಅವರನ್ನ ಮದುವೆಯಾಗಿದ್ದಾರೆ ಅನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಾಗಿದ್ದು ಇದರ ಕುರಿತಂತೆ ಯಾವುದೇ ಸ್ಪಷ್ಟನೆ ಇನ್ನೂ ಕೂಡ ಸಿಕ್ಕಿಲ್ಲ ಎಂದು ಹೇಳಬಹುದು. ಹೌದು ನಟಿ ಪವಿತ್ರ ಲೋಕೇಶ್ ಅವರು ಕನ್ನಡದ ಇನ್ನೊಬ್ಬ ಖ್ಯಾತ ನಟ ಸುಚೇಂದ್ರ ಪ್ರಸಾದ್ ಅವರನ್ನ ಮದುವೆಯಾಗಿದ್ದರು ಮತ್ತು ಇವರಿಬ್ಬರು ಕೆಲವು ಸಮಯಗಳಿಂದ ದೂರವಾಗಿದ್ದರು ಎಂದು ವರದಿಗಳಲ್ಲಿ ಹೇಳಲಾಗುತ್ತಿದೆ.

ಇನ್ನು ಇದರ ನಡುವೆ ನಟಿ ಪವಿತ್ರ ಲೋಕೇಶ್ ಅವರು ನರೇಶ್ ಬಾಬು ಮದುವೆಯಾದ ವಿಷಯ ಸಕತ್ ವೈರಲ್ ಆಗುತ್ತಿದೆ. ಇನ್ನು ಇದರ ನಡುವೆ ಪವಿತ್ರ ಲೋಕೇಶ್ ಅವರ ಗಂಡ ಸುಚೇಂದ್ರ ಪ್ರಸಾದ್ ಅವರು ಹೆಂಡತಿ ಪವಿತ್ರ ಲೋಕೇಶ್ ಅವರ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟಿದ್ದು ಸದ್ಯ ಅವರ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ಹೇಳಬಹುದು. ಹಾಗಾದರೆ ನಟಿ ಪವಿತ್ರ ಲೋಕೇಶ್ ಅವರ ಬಗ್ಗೆ ಗಂಡ ಸುಚೇಂದ್ರ ಪ್ರಸಾದ್ ಅವರು ಹೇಳಿದ್ದೇನು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಹೌದು ನರೇಶ್ ಮೂರನೇ ಪತ್ನಿ ರಮ್ಯಾ ಅವರು ಈ ವಿಷಯದ ಬಗ್ಗೆ ಹೇಳಿರುವ ಬೆನ್ನಲ್ಲೇ ಈಗ ಸುಚೇಂದ್ರ ಪ್ರಸಾದ್ ಕೂಡ ಕಿಡಿಕಾರಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಅತ್ತ ಪವಿತ್ರ ಲೊಕೇಶ್ 3ನೇ ಮದುವೆ ..ಇತ್ತ ಸಿಹಿಸುದ್ದಿ ಹಂಚಿಕೊಂಡ ನಟ ಸುಚೇಂದ್ರ ಪ್ರಸಾದ್ ನೋಡಿ - Varta Manjari

ನಟಿ ಪವಿತ್ರ ಲೋಕೇಶ್ ಅವರ ಮದುವೆಯ ವಿಷಯ ಎಷ್ಟೇ ದೊಡ್ಡ ಸುದ್ದಿಯಾದರು ನಟ ಸುಚೇಂದ್ರ ಪ್ರಸಾದ್ ಎಲ್ಲಿಯೂ ಕೂಡ ಇದರ ಬಗ್ಗೆ ಮಾತನಾಡಿರಲಿಲ್ಲ, ಆದರೆ ಈಗ ಖಾಸಗಿ ಪ್ರತಿನಿಧಿಯೊಬ್ಬರ ಜೊತೆ ಮಾತನಾಡಿದ್ದು ಇದರ ಕುರಿತು ಕಿಡಿಕಾರಿದ್ದಾರೆ. ಮಾಧ್ಯಮದವರ ಜೊತೆ ಮಾತನಾಡಿದ ಸುಚೇಂದ್ರ ಪ್ರಸಾದ್ ಅವರು, ನಿಜಕ್ಕೂ ಇದು ಬಹಳ ಬೇಸರದ ಸಂಗತಿ ಮತ್ತು ಇದರ ಬಗ್ಗೆ ಅವರ ಜೊತೆ ಮಾತನಾಡಿದ್ದೇನೆ, ಆದರೆ ಅವರು ಆ ರೀತಿ ಎಂದು ಇಲ್ಲ ಎಂದು ನನ್ನಜೊತೆ ವಾದ ಮಾಡಿದ್ದಾರೆ ಎಂದು ಸುಚೇಂದ್ರ ಪ್ರಸಾದ್ ಅವರು ಹೇಳಿದ್ದಾರೆ.

What Really Happened Between Pavitra Lokesh And Suchendra Prasad : Pavitra Lokesh - ಸುಚೇಂದ್ರ ಪ್ರಸಾದ್​ ದಾಂಪತ್ಯದಲ್ಲಿ ಬಿರುಕು ಮೂಡಿದ್ಯಾಕೆ? ಆ ಒಂದು ತಪ್ಪು ಇಷ್ಟಕ್ಕೆಲ್ಲಾ ಕಾರಣನಾ?– News18 Kannada

ಯಾರಿಗೋ ಅನ್ಯಾಯ ಆಗುತ್ತಿರುವುದನ್ನ ನನ್ನಿಂದ ನೋಡಲು ಸಾಧ್ಯವಾಗುತ್ತಿಲ್ಲ, ನನ್ನ ಕರುಳು ಹಿಂಡುತ್ತಿದೆ, ಅಸಹಾಯಕ ಸ್ಥಿತಿಗೆ ತಲುಪಿದೆ ಎಂದು ಮರುಗಿದೆ ಎಂದು ಹೇಳಿದ್ದಾರೆ ಸುಚೇಂದ್ರ ಪ್ರಸಾದ್. ರಮ್ಯಾ ಅವರ ಕಷ್ಟ ನನಗೆ ಅರ್ಥ ಆಗುತ್ತದೆ ಮತ್ತು ನಾನು ಕೂಡ ಏನು ಮಾಡಲಾಗದ ಸ್ಥಿತಿಯಲ್ಲಿ ಇದ್ದೇನೆ ಮತ್ತು ನನ್ನ ಮಕ್ಕಳಿಗೂ ಅರ್ಥ ಮಾಡಿಸಿದ್ದೇನೆ. ಆತನದು ಲಂಪಟ ಮತ್ತು ಈಕೆಯದ್ದು ಲಪಟಾಯಿಸುವ ಬುದ್ದಿ ಎಂದು ಹೇಳಿದ್ದಾರೆ ಸುಚೇಂದ್ರ ಪ್ರಸಾದ್. ಇದು ಹೆಚ್ಚು ದಿನ ಇರುವುದಿಲ್ಲ. ನಾನು ಅವರ ಕೈನಲ್ಲಿ ನರಳಿದ್ದೇನೆ ಮತ್ತು ಈಗಲೇ ಭವಿಷ್ಯ ನಡಿಯುತ್ತೇನೆ ಇದು ಕೇವಲ 6 ತಿಂಗಳಿದು ಎಂದಿದ್ದಾರೆ ಸುಚೇಂದ್ರ ಪ್ರಸಾದ್. ಸದ್ಯ ಸುಚೇಂದ್ರ ಪ್ರಸಾದ್ ಅವರ ಈ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ಸುಚೇಂದ್ರ ಪ್ರಸಾದ್ ಅವರ ಮಾತಿನ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.




ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...