karnataka-govt

ರೇಷನ್ ಕಾರ್ಡ್ ಇರುವ ಕುಟುಂಬಗಳಿಗೆ ಹೊಸಮನೆ ಕಟ್ಟಲು ಸರ್ಕಾರದಿಂದ 4 ಲಕ್ಷದವರೆಗೆ ಸಹಾಯಧನ ಇದರ ಸಂಪೂರ್ಣ ಮಾಹಿತಿ ಇಲ್ಲಿದೆ

Free Govt Schemes/ಸರ್ಕಾರಿ ಉಚಿತ ಯೋಜನೆಗಳು RATION CARD/ರೇಷನ್ ಕಾರ್ಡ್ ಮಾಹಿತಿ

Government subsidy up to 4 lakhs for new house construction for ration card holder families: ರಾಜ್ಯದ ವಸತಿರಹಿತ ಬಿಪಿಎಲ್ ಕುಟುಂಬದವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದ್ದು ವಿವಿಧ ವಸತಿ ಯೋಜನೆಗಳ ಸಬ್ಸಿಡಿಯನ್ನು ಎರಡು ಪಟ್ಟು ಹೆಚ್ಚಳ ಮಾಡುವ ಚಿಂತನೆ ನಡೆಸಿದೆ ಪರಿಶಿಷ್ಟರು ಸಾಮಾನ್ಯ ವರ್ಗದವರು ಸೇರಿದಂತೆ ಎಲ್ಲರಿಗೂ ಗ್ರಾಮೀಣ ಪ್ರದೇಶದಲ್ಲಿ ಮತ್ತು ನಗರ ಪ್ರದೇಶದಲ್ಲಿ ನಾಲ್ಕು ಲಕ್ಷ ರೂಪಾಯಿ ಸಹಾಯಧನ ನೀಡಲು ಚಿಂತನೆ ನಡೆದಿದೆ.

ಮನೆ ನಿರ್ಮಾಣಕ್ಕೆ ಕನಿಷ್ಠ 5 ಲಕ್ಷ ರೂಪಾಯಿ ಅಗತ್ಯವಿದೆ ಸರ್ಕಾರದ ಸಬ್ಸಿಡಿ ಸಾಲುತ್ತಿಲ್ಲ ಈ ಹಿನ್ನೆಲೆಯಲ್ಲಿ ಬಡವರು ಮನೆ ನಿರ್ಮಿಸಿಕೊಳ್ಳಲು ಆಗುತ್ತಿಲ್ಲ ಹೀಗಾಗಿ ವಸತಿ ಯೋಜನೆಗಳ ಸಬ್ಸಿಡಿ ಮೊತ್ತದ ಹೆಚ್ಚಳಕ್ಕೆ ಸರ್ಕಾರ ಕ್ರಮ ಕೈಗೊಂಡಿರುವುದಾಗಿ ವಸತಿ ಸಚಿವ ವಿ ಸೋಮಣ್ಣ ಹೇಳಿದ್ದಾರೆ ನಗರ ಪ್ರದೇಶದ ಬಿಪಿಎಲ್ ಕುಟುಂಬಗಳಿಗೆ ಮಂಜೂರಾದ ಮನೆಗಳಿಗೆ ಸಾಮಾನ್ಯ ಕುಟುಂಬಗಳಿಗೆ 2.20 ಲಕ್ಷ ರೂಪಾಯಿ ಪರಿಶಿಷ್ಟ ವರ್ಗದವರಿಗೆ 3.50 ಲಕ್ಷ ಸಬ್ಸಿಡಿ ದೊರೆಯಲಿದೆ. ಕೇಂದ್ರ ಸರ್ಕಾರ ಎಲ್ಲಾ ವರ್ಗದ ಫಲಾನುಭವಿಗಳಿಗೆ ಏಕರೂಪದ ಸಬ್ಸೇಡಿ ನೀಡುತ್ತಿದ್ದು ರಾಜ್ಯದಲ್ಲಿಯೂ ಅದೇ ರೀತಿಯ ನಿಯಮ ಪಾಲಿಸಲಾಗುವುದು ಎಂದು ಹೇಳುತ್ತಿದೆ.

ಅದೇ ರೀತಿ ಗ್ರಾಮೀಣ ವರ್ಗದ ಬಿಪಿಎಲ್ ಕುಟುಂಬಗಳಿಗೆ ವಸತಿ ಯೋಜನೆ ಅಡಿಯಲ್ಲಿ ಮಂಜೂರಾದ ಮನೆಗಳಿಗೆ ಕೇಂದ್ರ ಸರ್ಕಾರ 72,000 ಹಾಗೂ ರಾಜ್ಯ ಸರ್ಕಾರ 48000 ರೂಪಾಯಿ ಸಹಾಯಧನವನ್ನು ನೀಡುತ್ತಿದೆ ಈ ಮೊತ್ತವನ್ನು ಎಲ್ಲಾ ವರ್ಗದ ಫಲಾನುಭವಿಗಳಿಗೆ ಸಾಮಾನ್ಯವಾಗಿ ಮೂರು ಲಕ್ಷದವರೆಗೆ ಏರಿಕೆ ಮಾಡಲು ನಿರ್ಧರಿಸಿದ್ದು ಸರ್ಕಾರವೇ ಹೆಚ್ಚುವರಿ ಮೊತ್ತವನ್ನು ಭರಿಸುತ್ತದೆ ಎಂದು ಹೇಳಲಾಗಿದೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...