ವಿಡಿಯೋ ಕಾಲ್ ನಲ್ಲಿ ಯುವತಿಯ ಸೌಂದರ್ಯಕ್ಕೆ ಸೋತು ಲಕ್ಷ ಲಕ್ಷ ಹಣ ಕಳುಹಿಸಿದ ಶಿಕ್ಷಕ! ಈ ಮಾಯಾಂಗನೆ ಶಿಕ್ಷಕನಿಗೆ ಇಟ್ಟ ಪಂಗನಾಮ ಎಷ್ಟು ಲಕ್ಷ ಗೊತ್ತಾ? ನೋಡಿ ಸ್ವಾಮಿ ಎಚ್ಚರ!!

ಇತ್ತೀಚಿಗೆ ಸಾಮಾನ್ಯವಾಗಿ ಮೊಬೈಲ್ ಬಳಸದೆ ಇರುವ ಜನರು ಯಾರು ಇಲ್ಲ ಅದರಲ್ಲೂ ಎಲ್ಲರೂ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ಸೋಶಿಯಲ್ ಮೀಡಿಯಾ ಅಂದ್ರೆ ಅದರಲ್ಲಿ ಒಳ್ಳೆಯದು ಇದೆ ಕೆಟ್ಟದು ಇದೆ ಯಾರು ಯಾವಾಗ ಯಾವುದನ್ನ ಹೇಗೆ ಬೇಕು ಹಾಗೆ ಬಳಸಿಕೊಳ್ಳುತ್ತಾರೆ ಇಲ್ಲಿ ಸುಂದರವಾದ ಯುವತಿಯರು ತಮ್ಮ ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡು ಫೋನ್ ಮೂಲಕವೇ ಶಿಕ್ಷಕನೊಬ್ಬನನ್ನು ಯರ್ರಾ ಬಿರ್ರಿ ಯೇಮಾರಿಸಿದ್ದಾರೆ. ಬಡ ಶಿಕ್ಷಕ, ಬೆಡಗಿಯ ಮುಖ ನೋಡಿ ಮೋಸ ಹೋಗಿದ್ದಾರೆ ಈ ಘಟನೆ ನಡೆದಿರುವುದು ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ.

ಹೌದು ಈ ಘಟನೆಯನ್ನು ಪ್ರತಿಯೊಬ್ಬರು ಓದಿ ತಿಳಿದುಕೊಳ್ಳಲೇ ಬೇಕು ಸೋಶಿಯಲ್ ಮೀಡಿಯಾದಲ್ಲಿ ಅಪರಿಚಿತರ ಜೊತೆ ಚಾಟ್ ಮಾಡುವ ಮೊದಲು ಒಮ್ಮೆ ಯೋಚಿಸಿ. ಇಲ್ಲವಾದರೆ ಇಂತಹ ಹುಡುಗಿಯರು ನಿಮ್ಮ ಪಾಲಿಗೆ ದುಸ್ವಪ್ನ ಆಗೋದಂತು ಸತ್ಯ. ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಯುವತಿ ಒಬ್ಬಳು ಬಳ್ಳಾರಿ ಜಿಲ್ಲೆಯ ಶಿಕ್ಷಕರನ್ನ ಮದುವೆ ಆಗ್ತೀನಿ ಅಂತ ಹೇಳಿ ನಂಬಿಸಿದ್ದಾಳೆ ಹೀಗೆ ಮೋಸ ಹೋದ ಶಿಕ್ಷಕ ದೇವೇಂದ್ರಪ್ಪ.

ದೇವೇಂದ್ರಪ್ಪ ಅವರಿಗೆ ಮದುವೆ ಆಗಿದೆ ಆದರೆ ಹೆಂಡತಿಯಿಂದ ದೂರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಇದ್ದ ದೇವೇಂದ್ರಪ್ಪ ಹುಡುಕಿ ಒಬ್ಬಳ ಮುದ್ದಾದ ಮುಖ ನೋಡಿ ಮರುಳಾಗಿದ್ದಾರೆ. ಎರಡನೇ ಮದುವೆ ಆಗಲು ಮ್ಯಾಟ್ರಿಮೋನಿಯಲ್ಲಿ ಪ್ರೊಫೈಲ್ ಹಾಕಿದ್ದರು ಆಗ ಕೇರಳ ಮೂಲದ ಯುವತಿಯೊಬ್ಬಳು ನನಗೆ ಒಪ್ಪಿಗೆ ಇದೆ ಎಂದು ಫೋಟೋ ಹಾಗೂ ಪ್ರೊಫೈಲ್ ಕಳುಹಿಸಿದ್ದಳು.

ಮ್ಯಾಟ್ರಿಮೋನಿಯಲ್ಲಿ ಇವರಿಬ್ಬರ ಸ್ನೇಹ ಆಗಿ ನಂತರ ಇನ್ಟಾಗ್ರಾಮ್, ಫೇಸ್ ಬುಕ್ ವಾಟ್ಸಪ್ ಎಲ್ಲಾ ಕಡೆ ಚಾಟ್ ಮಾಡಿದ್ದಾರೆ. ಆ ಹುಡುಗಿ ತಾನು ಎಂಬಿಬಿಎಸ್ ಮಾಡುತ್ತಿರುವುದಾಗಿ ಹೇಳಿದ್ದಾಳೆ. ಆಕೆಯ ಹೆಸರು ಹರಿತ. ಕೇರಳ ಮೂಲದವರು. ಎಂಬಿಬಿಎಸ್ ಓದುತ್ತಿರುವುದಾಗಿ ಹೇಳಿರುವ ಹರಿತಾ ಆಗಾಗ ಏನೇನೋ ಕಾರಣ ಹೇಳಿ ದುಡ್ದನ್ನು ಕೇಳುತ್ತಿದ್ದಳು. ತನ್ನನ್ನು ಮದುವೆಯಾಗುವ ಹುಡುಗಿ ಅಲ್ವಾ ಎನ್ನುವ ಕಾರಣಕ್ಕೆ ದೇವೆಂದ್ರಪ್ಪ ಕೂಡ ಆಕೆ ಕೇಳಿದಾಗೆಲ್ಲ ಹಣ ಕೊಟ್ಟಿದ್ದಾನೆ. ಲಕ್ಷಾಂತರ ರೂಪಾಯಿಗಳನ್ನು ಆಕೆಯ ಮೇಲೆ ಸುರಿದ್ದಾನೆ.

ಕಳೆದ ನಾಲ್ಕು ವರ್ಷಗಳಿಂದ ಹರಿತಾ ಶಿಕ್ಷಕನ ಸಂಪರ್ಕದಲ್ಲಿಯೇ ಇದ್ದಳು. ಒಮ್ಮೆ ಭೇಟಿ ಆಗು ಅಂದ್ರೆ ಏನೇನೋ ಕಾರಣ ನೀಡಿ ತಪ್ಪಿಸಿದ್ದಾಳೆ. ಒಮ್ಮೆ ಅವಳನ್ನು ನೋಡಲು ಕೇರಳದವರೆಗೂ ಹೋಗಿ ಭೇಟಿಯಾಗಲು ಆಗದೇ ಹಿಂತಿರುಗಿದ್ದರು ದೇವೇಂದ್ರಪ್ಪ. ತರಾವರಿ ಫೊಟೋಗಳನ್ನು ಉ-ದ್ರೇ-ಕ-ಕಾ-ರಿ ಮೆಸೆಜ್ ಗಳನ್ನು ಕಳುಹಿಸುತ್ತಿದ್ದ ಹರಿತಾ ಯಾವುದೇ ಕಾರಣಕ್ಕೂ ದೇವೆಂದ್ರಪ್ಪ ಕೈತಪ್ಪಿ ಹೋಗದಂತೆ ಚಾಲಾಕಿತನದಿಂದ ಮ್ಯಾನೇಜ್ ಮಾಡಿದ್ದಾಳೆ. ಜೊತೆಗೆ ಇನ್ನೂ ಮೂವರು ಸ್ನೇಹಿತೆಯರನ್ನೂ ಕೂಡ ಫೋನ್ ನಲ್ಲಿ ದೇವೆಂದ್ರಪ್ಪ ಜೊತೆ ಮಾತನಾಡಿಸಿದ್ದಾಳೆ.

ಬರೋಬ್ಬರಿ ನಾಲ್ಕು ವರ್ಷಗಳ ನಂತರ ಹಣ ಕೆಲಸ ಎಲ್ಲವನ್ನೂ ಕಳೆದುಕೊಂಡ ಮೇಲೆ ದೇವೆಂದ್ರಪ್ಪನಿಗೆ ಆಕೆ ತನ್ನ ಪ್ರೇಯಸಿ ಅಲ್ಲ, ಹಣ ಪೀಕಿಸುವ ವಂಚಕಿ ಎಂಬುದು ಅರಿವಾಗಿದೆ. ಬಳ್ಳಾರಿ ಸೈಬರ್ ಕ್ರೈಮ್ ಗೆ ದೂರು ನೀಡಿದ್ದಾರೆ. ಸದ್ಯ ಪೋಲಿಸರು ದೇವೇಂದ್ರಪ್ಪನ ಟೆಲಿಪೋನ್ ಗೆಳತಿಗಾಗಿ ಹುಡುಕಾಟ ನಡೆಸಿದ್ದಾರೆ.

You might also like

Comments are closed.