ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ಷಣಕ್ಕೊಂದು ವಿಡಿಯೋ ವೈರಲ್ ಆಗುವುದನ್ನು ನೀವು ನೋಡಬಹುದು, ಆದರೆ ಕೆಲವೊಂದಿಷ್ಟು ವಿಡಿಯೋಗಳು ನೋಡುವುದಕ್ಕೆ ಬಹಳ ಮನಮೋಹಕವಾಗಿರುತ್ತವೆ. ಅಷ್ಟೇ ಅಲ್ಲದೇ ಈ ವಿಡಿಯೋಗಳನ್ನು ನೋಡಿದರೆ ನಿಜಕ್ಕೂ ಕೂಡ ನಮಗೆ ಆಶ್ಚರ್ಯ ಆಗುತ್ತದೆ. ಇಷ್ಟೊಂದು ಪ್ರತಿಭೆ ಇಷ್ಟೊಂದು ಎನರ್ಜಿ ಈ ಮಕ್ಕಳಿಗೆ ಎಲ್ಲಿಂದ ಬರುತ್ತದೆ ಎಂಬ ಅನುಮಾನವೂ ಕೂಡ ಉಂಟಾಗುತ್ತದೆ. ಈಗ ಅಂತಹದ್ದೆ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಎರಡು ತಿಂಗಳಿಂದ ಹಿಂದೆಯಷ್ಟೇ ಬಿಡುಗಡೆಯಾಗಿದ್ದ ತೆಲುಗಿನ ಬಹು ನಿರೀಕ್ಷಿತ ಸಿನಿಮಾ ಪುಷ್ಪ ಸಿನಿಮಾದಲ್ಲಿ ನಾಯಕ ನಟ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ನ್ಯಾಷನಲ್ ಕ್ರಶ್ ಅಂತಾನೆ ಹೆಸರುವಾಸಿಯಾಗಿದ್ದಂತಹ ಕನ್ನಡತಿ ರಶ್ಮಿಕಾ ಮಂದ್ದಣ್ಣ ಅವರು ಅಭಿನಯಿಸಿದ್ದರು. ಈ ಸಿನಿಮಾ ನಿರೀಕ್ಷೆಗೂ ಮೀರಿದಂತಹ ಮಟ್ಟದಲ್ಲಿ ಯಶಸ್ಸನ್ನು ಪಡೆಯಿತು, ಹಾಗೇಯೆ ಈ ಸಿನಿಮಾದಲ್ಲಿ ಹೂಂ ಅಂಟಾವ ಮಾವ ಎಂಬ ಹಾಡು ದೊಡ್ಡಮಟ್ಟದಲ್ಲಿ ಹಿಟ್ ಆಯಿತು.
ಈ ಹಾಡಿನ ಕ್ರೇಜ್ ಎಷ್ಟರ ಮಟ್ಟಿಗೆ ಇತ್ತು ಅಂದರೆ ಕಿರುತೆರೆ ಕಲಾವಿದರಿಂದ ಹಿಡಿದು ಬಾಲಿವುಡ್ ಟಾಲಿವುಡ್ ಕಾಲಿವುಡ್ ಸ್ಯಾಂಡಲ್ವುಡ್ ಹೀಗೆ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ನಟ-ನಟಿಯರು ಕೂಡ ಹೆಜ್ಜೆ ಹಾಕಿದ್ದನ್ನು ನಾವು ನೋಡಿದ್ದೆವು. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ರಿಲ್ಸ್ ಗಳ ಮುಖಾಂತರ ಈ ಹಾಡಿಗೆ ಹೆಜ್ಜೆ ಹಾಕಿದರು, ಆದರೆ ಇದೆಲ್ಲದಕ್ಕಿಂತ ಕೂಡ ಭಿನ್ನವಾಗಿ ಇದೀಗ ಮತ್ತೊಂದು ಡ್ಯಾನ್ಸ್ ವೈರಲ್ ಆಗಿದೆ.
ಪಶ್ಚಿಮ ಬಂಗಾಳಕ್ಕೆ ಸೇರಿದಂತಹ ಹುಡುಗಿಯೊಬ್ಬಳು ಹೂಂ ಅಂಟಾವ ಹೂಂಹೂಂ ಅಂಟಾವ ಎಂಬ ಹಾಡಿಗೆ ನೃತ್ಯ ಮಾಡಿರುವುದನ್ನು ನಾವು ನೋಡಬಹುದಾಗಿದೆ. ಸದ್ಯಕ್ಕೆ ಈ ವಿಡಿಯೋ ಇನ್ಸ್ಟಾಗ್ರಾಂ, ಫೇಸ್ಬುಕ್, ಯೂಟ್ಯೂಬ್ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈಕೆಯ ಹೆಸರು ಸಯಾಂತನಿ ಘೋಷ್ ಅಂತ, ಆದರೆ ಎಲ್ಲಾ ಕಡೆ ಈಕೆ ಪ್ರಸಿದ್ಧಿ ಪಡೆದಿರುವುದು ಲುನಾ ಎಂಬ ಹೆಸರಿನ ಮೂಲಕ.
ಈಕೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ, ಆದರೂ ಕೂಡ ಡ್ಯಾನ್ಸ್ ನಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಕಾರಣ ಯಾವುದೇ ಹೊಸ ಸಿನಿಮಾದ ಹಾಡುಗಳು ಬಿಡುಗಡೆಯಾದರೂ ಕೂಡ ಆ ಹಾಡಿಗೆ ತಕ್ಕಂತಹ ಸ್ಟೆಪ್ಸ್ ಹಾಕುವುದೆ ಈಕೆಯ ಹವ್ಯಾಸವಾಗಿದೆ. ಈಗಾಗಲೇ ಸಾಕಷ್ಟು ತೆಲುಗು ತಮಿಳು ಹಾಗೂ ಬಾಲಿವುಡ್ ಹಾಡುಗಳಿಗೆ ಈಕೆ ಡ್ಯಾನ್ಸ್ ಮಾಡಿರುವುದನ್ನು ನಾವು ನೋಡಬಹುದಾಗಿದೆ.
ಆದರೆ ಇದೆಲ್ಲಾ ಡ್ಯಾನ್ಸ್ ಗಳಿಗಿಂತಲೂ ಕೂಡ ತೆಲುಗು ಸಿನಿಮಾದ ಈ ಹಾಡಿಗೆ ಹಾಕಿರುವಂತಹ ಮಾತ್ರ ಸಕ್ಕತ್ತಾಗಿದೆ. ಇದನ್ನು ನೋಡಿದಂತಹ ನೆಟ್ಟಿಗರು ನಿಜಕ್ಕೂ ಕೂಡ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ, ಅಷ್ಟೇ ಅಲ್ಲದೆ ಈ ಹುಡುಗಿಯ ಎನರ್ಜಿಯನ್ನು ನಾವು ಮೆಚ್ಚಿಕೊಳ್ಳಲೇಬೇಕು ಎಂದು ಕಮೆಂಟ್ ಅನ್ನು ಕೂಡ ಹಾಕಿದ್ದಾರೆ. ರಬ್ಬರ್ ನಂತೆ ಆಕೆ ಮೈ ಮಣಿಸಿರುವುದು ಎಲ್ಲರ ಮೆಚ್ಚುಗೆ ಗಳಿಸಿದೆ.
ಸೋಶಿಯಲ್ ಮಿಡೀಯಾದ ಮುಖಾಂತರ ಯಾರು ಯಾವಾಗ ಎಲ್ಲಿ ಬೇಕಾದರೂ ಕೂಡ ಫೇಮಸ್ ಆಗಬಹುದು ಎಂಬುದಕ್ಕೆ ಈ ಹುಡುಗಿಯೂ ಕೂಡ ಇದೀಗ ಉದಾಹರಣೆ ಆಗಿದ್ದಾಳೆ. ನೀವು ಕೂಡ ಒಮ್ಮೆ ಈಕೆ ಹಾಕಿರುವಂತಹ ಸ್ಟೆಪ್ಸ್ ನೋಡಿ ನಿಜಕ್ಕೂ ಕೂಡ ಬಾಯಿ ಮೇಲೆ ಬೆರಳು ಇಡುತ್ತೀರಾ, ಅಷ್ಟು ಎನರ್ಜಟಿಕ್ ಆಗಿ ಮತ್ತು ಅದ್ಭುತವಾಗಿ ನೃತ್ಯ ಮಾಡಿದ್ದಾಳೆ ಈಕೆ.
ಆ ವಿಡಿಯೊ ಕೆಳಗಿದೆ ನೋಡಿ…
Ra Ra Rakkamma Song Dance by Luna pic.twitter.com/zr5fYmsq26
— S.K PATIL (@SKPATIL2022) November 10, 2022