ಬಿರಾದಾರ

ಸ್ವಂತ ಸೂರಿಲ್ಲದೆ ಬದುಕುತ್ತಿರುವ ಈ ಹಿರಿಯ ನಟನ ಬದುಕಿನಲ್ಲಿ ಆಗಿದ್ದೇನು? ಚಿತ್ರರಂಗ ಇವರನ್ನ ಮರೆತುಬಿಡ್ತಾ

CINEMA/ಸಿನಿಮಾ

ನವರಸಗಳಲ್ಲಿ ಒಂದಾದ ಹಾಸ್ಯ ರಸವು ರಸಗಳಲ್ಲಿ ಪ್ರಮುಖ ಸ್ಥಾನ ಪಡೆಯುವುದರ ಜೊತೆಗೆ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಜನರನ್ನು ಹೆಚ್ಚು ರಂಜಿಸುತ್ತದೆ. ಸುಖಾಸುಮ್ಮನೆ ನಗುವುದು ಅದೆಷ್ಟು ಕಷ್ಟವೋ ಹಾಗೆ ನಗಿಸುವುದು ಕೂಡ ಅಷ್ಟೇ ಕಷ್ಟದ ಕೆಲಸ. ಭಾರತೀಯ ಚಿತ್ರ ರಂಗದಲ್ಲಿ ಹಾಸ್ಯ ಪ್ರಧಾನ ಪಾತ್ರ ವಹಿಸಿದೆ ಎಂದರೆ ತಪ್ಪಾಗಲಾರದು.ನಮ್ಮೆಲ್ಲರನ್ನು ನಗುವಿನ ಕಡಲಲ್ಲಿ ತೇಲಿಸುವ ಹಾಸ್ಯ ನಟರ ಜೀವನ ನಿಜಕ್ಕೂ ಶೋಚನೀಯ ಸ್ಥಿತಿಯಲ್ಲಿ ಇರುವುದು ದುಃಖಕರ ಸಂಗತಿ ಅಂತಹ ಹಾಸ್ಯ ನಟರ ಒಬ್ಬರ ಜೀವನದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಕನ್ನಡ ಚಿತ್ರರಂಗದ ಹಾಸ್ಯ ನಟ ಪೋಷಕ ನಟ ಎಂದು ಪ್ರಸಿದ್ದಿ ಪಡೆದಿರುವ ನಟರ ಸಾಲಿನಲ್ಲಿ ಬಿರಾದಾರ ಅವರು ಒಬ್ಬರು. ನೋಡೋಕೆ ಇವರು ಮುಂದಲೆ ಬೋಳು ಕೆದರಿದ ಕೂದಲು ಸಣಕಲು ದೇಹ ಕೀರಲು ದ್ವನಿ ಇದು ಅವರ ಮೇಲ್ನೋಟದ ಚಹರೆ. ಏನ್ ಸಾರ್ ಚೆನ್ನಾಗಿ ಇದ್ದೀರಾ ಎನ್ನುವ ಮಾತಿಂದ ಪರಿಚಯವಾಗಿ ಸ್ವತಃ ಅಮಿತಾ ಬಚ್ಚನ್ ಅವರಿಂದ ಹೆಗ್ಗಳಿಕೆ ಪಡೆದ ಮನುಷ್ಯ ಬಿರಾದಾರ.

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ತೇಂಪುರದಲ್ಲಿ ನಾಗಮ್ಮ ಮತ್ತು ಬಸವ ದಂಪತಿಗಳ ಪುತ್ರರಾಗಿ ಜೂನ್ 26 1952 ರಲ್ಲಿ ರೈತರ ಕುಟುಂಬದಲ್ಲಿ ಜನಿಸಿದ್ದು ಇವರ ಪೂರ್ತಿ ಹೆಸರು ವ್ಯೇಜನಾಥ್ ಬಿರಾದಾರ. ಅವರು ಮೂರನೇ ತರಗತಿ ಓದುತ್ತ ಇರುವಾಗ ಅವರ ತಂದೆಯ ಅಕಾಲಿಕ ಮರಣದಿಂದಾಗಿ ಓದುವುದನ್ನು ಬಿಟ್ಟು ಮನೆಯ ಸಂಪೂರ್ಣ ಜವಾಬ್ದಾರಿಯನ್ನು ತನ್ನ ಹೆಗಲಿಗೆ ಹಾಕಿಕೊಂಡು ಸಂಸಾರವನ್ನು ತೂಗಿದರು. ಚಿಕ್ಕ ಪ್ರಾಯದಲ್ಲೇ ನಟನೆ ಕೋಲಾಟ ಮತ್ತು ನಾಟಕದ ಆಸಕ್ತಿಯಿಂದ ನಾಟಕ ರಂಗಕ್ಕೆ ಪ್ರವೇಶ ಮಾಡಿದರು. ಬರ ಚಿತ್ರೀಕರಣಕ್ಕೆ ನಟ ಅನಂತ್ ನಾಗ್ ಅವರು ಬೀದರ ಜಿಲ್ಲೆ ಬೀಡುಬಿಟ್ಟಿದ್ದ ಸಂದರ್ಭದಲ್ಲಿ ಬಿರಾದಾರ ಅವರ ಪರಿಚಯವಾಗಿ ತಮ್ಮ ಚಿತ್ರದಲ್ಲಿ ಒಂದು ಪಾತ್ರ ನೀಡಿದರು.

ನಂತರ ಬೆಂಗಳೂರಿಗೆ ಬರಲು ಸಲಹೆಯನ್ನು ನೀಡಿದರು ಅವರ ಸಲಹೆಯಂತೆ ಬರೀ ಹೊಟ್ಟೆಯಲ್ಲಿ ಬೆಂಗಳೂರಿಗೆ ಪಾದಾರ್ಪಣೆ ಮಾಡಿ ತಮ್ಮ ದಿನ ಜೀವನ ಸಾಗಿಸಲು ಹಲವಾರು ಕಷ್ಟ ಪಟ್ಟಿದರು. ರಾಜ್ ಕುಮಾರ್ ಅವರನ್ನು ಭೇಟಿ ಆದ ನಂತರ ಹಲವಾರು ನಟರ ಭರವಸೆಯೊಂದಿಗೆ ಹೋಟೆಲ್ ಕೆಲ್ಸ ಮಾಡುತ ಜೀವನ ಸಾಗಿಸುತ್ತಾರೆ ಕೊನೆಗೂ ಅವರ ಕಷ್ಟಕ್ಕೆ ಪ್ರತಿಫಲ ಎಂಬಂತೆ ಶಂಖ ನಾದ ಸಿನಿಮಾ ಮೂಲಕ ಅವಕಾಶ ಸಿಗುತ್ತೆ ನಂತರ ಕಾಶೀನಾಥ ಅವರ ಅಜಗಂತರ ಚಿತ್ರದಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಡರು ಹೀಗೆ ಕಾಶೀನಾಥ ಅವರು ಹಲವಾರು ಸಿನಿಮಾದಲ್ಲಿ ನಟನೆ ಅವಕಾಶ ಮಾಡಿಕೊಟ್ಟರು ಕಾಶೀನಾಥ ಅವರು ಹಲವಾರು ಪ್ರತಿಭೆಯನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಟ ಎನ್ನುವುದು ಖುಷಿಯ ವಿಚಾರ.

ನಂತರ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದು ಕೊನೆಗೆ ತರ್ಲೇನನ್ಮಗ ಸಿನಿಮಾ ಬೀಕ್ಷುಕ ಪಾತ್ರವೂ ಜನರ ಮನದಲ್ಲಿ ಅಚ್ಚೊತ್ತಿದೆ.ಅವರ ರೂಪ ನೋಡಿ ಅವರಿಗೆ ಬಿಕ್ಷುಕ ಪಾತ್ರ, ಶೋಷಣೆ ಒಳಗಾದ ವ್ಯಕ್ತಿಯ ಪಾತ್ರ ಮತ್ತು ಬಡತನವನ್ನು ಬಿಂಬಿಸುವ ಪಾತ್ರ ನೀಡುತಲಿದ್ದರು ಬಿಕ್ಷುಕನ ಪಾತ್ರವನ್ನು ಯಾವುದೇ ಮುಲಾಜು ಇಲ್ಲದೆ ಮುಜುಗರ ಪಟ್ಟುಕೊಳ್ಳದೆ ಮಾಡಿದ್ದರು ಆ ಭಿಕ್ಷುಕನ ಪಾತ್ರವೇ ಅಕ್ಷಯ ಪಾತ್ರೆ ಎಂದು ಅಭಿನಯ ಮಾಡಿದ್ದೇನೆ ಎಂದು ಮಾದ್ಯಮ ಒಂದರಲ್ಲಿ ಹೇಳಿಕೊಂಡಿದ್ದಾರೆ.

ನಂತರ ದಿನಗಳಲ್ಲಿ ಓ ಮಲ್ಲಿಗೆ, ಮಠ, ಹುಲಿಯ, ಲವ್ ಟ್ರೈನಿಂಗ್ ಅಲ್ಲಿ ಅಭಿನಯಿಸಿದ್ದು ನಾಲ್ಕು ಲಂಭಾಣಿ ತುಳು ಮತ್ತು ಹಿಂದಿಯ ಹ್ಯಾಂಗ ಟು ಡೆತ್ ಹಿಂದಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಗಿರೀಶ್ ಕಾರ್ನಾಡ ಅವರ ಕನಸೆಂಬ ಕುದುರೆಯನೇರಿ ಚಿತ್ರಕ್ಕೆ ಸ್ಪೇನ್ ಮ್ಯಾಡ್ರಿಡ್ ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ ಹಾಗೂ ಕನ್ನಡ ರಾಜ್ಯೋತ್ಸವ ನೀಡಿ ಗೌರವಿಸಲಾಗಿದೆ. ಇತ್ತೀಚಿನ ಚಿತ್ರರಂಗದಲ್ಲಿ ಪರಭಾಷಾ ಕಲಾವಿದರಿಗೆ ಕನ್ನಡ ಚಿತ್ರರಂಗದಲ್ಲಿ ಅಧಿಕ ಬೇಡಿಕೆ ಇದ್ದು ನಮ್ಮ ಕನ್ನಡ ಕಲಾವಿದರಿಗೆ ಬೇಡಿಕೆ ಇಲ್ಲದಂತ ತಾಗಿದೆ ಇದರಿಂದ ಕಲಾವಿದರು ತಮ್ಮ ಜೀವನ ನಡೆಸಲು ಕಷ್ಟವಾಗಿದೆ ಇವರಲ್ಲೇದೇ ಬಹಳ ಕಲಾವಿದರಿಗೆ ಅವಕಾಶ ಕೊರತೆ ಇದೆ. ಬಿರಾದಾರ ಅವರ ವಾಸ್ತವಿಕ ಜೀವನ ಬಗ್ಗೆ ತಿಳಿಯೋಣಬನ್ನಿ.

ಮಂಜುನಾಥ ನಗರದ ಒಂದು ಪುಟ್ಟ ಬಾಡಿಗೆ ಮನೆಯಲ್ಲಿ ಪತ್ನಿ ನಿರ್ಮಲ ಮತ್ತು ಮೂರು ಮಕ್ಕಳೊಂದಿಗೆ ತಮ್ಮ ಸಂಸಾರ ನಡೆಸುತ್ತಾ ಇದ್ದಾರೆ ದಿನ ಸರಕಾರಿ ಬಸ್ನಲ್ಲಿ ಪ್ರಯಾಣ ಮಾಡುತ್ತ ಇದಾರೆ ಎಂಬುದು ಶೋಚನೀಯ ಸಂಗತಿ. ಮಕ್ಕಳು ಚಿಕ್ಕವರಿದ್ದು ಇನ್ನು ಕಲಿಯುತ್ತಿದ್ದಾರೆ ಇನ್ನು ಸಣ್ಣ ಬಜೆಟ್ ನಲ್ಲಿ ನಿರ್ಮಿಸುವ ಚಿತ್ರದಲ್ಲಿ ಬಿರಾದಾರ ಸಣ್ಣ ಪುಟ್ಟ ಪಾತ್ರ ಮಾಡಿ ತಮ್ಮ ಜೀವನ ಸಾಗಿಸುತ್ತಿದ್ದಾರೆ ಕೋರೋನ ಕಾಲದಲ್ಲಿ ಜೀವನ ನಡೆಸಲು ಕಷ್ಟವಾಗಿದ್ದು ಎಲ್ಲರಲ್ಲೂ ಸಹಾಯಹಸ್ತ ಚಾಚಿದರು. ನಿಜ ಹೇಳಬೇಕೆಂದರೆ ನಮ್ಮ ಕಲಾವಿದರಿಗೆ ಪಾತ್ರವನ್ನು ಕೊಟ್ರೆ ಪರಭಾಷಾ ಕಲಾವಿದರಿಗಿಂತ ಚೆನ್ನಾಗಿ ಮಾಡುತ್ತಾರೆ ಆದರೆ ಅದರ ಬಗ್ಗೆ ಯಾರೂ ಯೋಚಿಸುತ್ತ ಇಲ್ಲ ಹಾಗಾಗಿ ನಮ್ಮ ಕಲಾವಿದರ ಜೀವನ ತುಂಬಾ ಕಷ್ಟಕರ.

500 ಸಿನಿಮಾ ಅಭಿನಯಿಸಿದರು ಕೂಡ ಒಂದು ಸ್ವಂತ ಮನೆ ಇಲ್ಲ ಆಸ್ತಿ ಇಲ್ಲ ಇದೆಕ್ಕೆಲ್ಲ ಮುಖ್ಯ ಕಾರಣ ನಮ್ಮ ಕಲಾವಿದರಿಗೆ ದೊಡ್ಡ ಬಜೆಟ್ ಸಿನಿಮಾದಲ್ಲಿ ಅವಕಾಶ ಸಿಗದೇ ಚಿಕ್ಕ ಬಜೆಟ್ ಅಲ್ಲಿ ಮಾಡುವಂಥ ಸಿನಿಮಾದಲ್ಲಿ ಸಣ್ಣ ಪುಟ್ಟ ಪಾತ್ರ ಅವಕಾಶ ಸಿಕ್ಕಿ ಆ ಚಿತ್ರದಲ್ಲಿ ಕಡಿಮೆ ಸಂಭಾವನೆ ಕೊಡುತ್ತಾರೆ . ಆದ್ರೆ ಹಿಂದೆ ಇಂಥ ನಟರಿಗೆ ಅಂತಾನೆ ತಮ್ಮ ಚಿತ್ರದಲ್ಲಿ ಹಲವಾರು ದೃಶ್ಯವನ್ನು ಕಲ್ಪಿಸುತ್ತಾ ಇದ್ದರು ಅವರನ್ನು ಹುಡುಕಿ ಪಾತ್ರವನ್ನು ನೀಡಿ ಅಧಿಕ ಸಂಭಾವನೆ ನೀಡುತ್ತಾ ಇದ್ದರು ಆದರೆ ಇತ್ತೀಚಿನ ಸಿನಿಮಾದಲ್ಲಿ ಅಂಥ ಅವಕಾಶ ಸಿಗುತ ಇಲ್ಲ ಸಿಕ್ಕರೂ ಕೂಡ 2 ಸೆಕೆಂಡ್ ಇಲ್ಲ 2 ನಿಮಿಷ ಪಾತ್ರ ಕೊಟ್ರೆ ಹೆಚ್ಚು.

ಇಂದಿನ ಕಾಲದಲ್ಲಿ ಪರಭಾಷಾ ಕಲಾವಿದರನ್ನು ಕಾಡಿ ಬೇಡಿ ಕನ್ನಡ ಚಿತ್ರರಂಗಕ್ಕೆ ಕರೆತಂದು ಅವರ ಹತ್ರ ತೂಕದ ಒಳ್ಳೆಯ ಪಾತ್ರವನ್ನು ಮಾಡಿಸುತ್ತಾರೆ ಅದೇ ಪಾತ್ರವನ್ನು ನಮ್ಮ ಕಲಾವಿದರ ಹತ್ತಿರ ಮಾಡಿಸಿದರೆ ಅವರ ನಟನಾ ಕೌಶಲ್ಯ ನೋಡಬಹುದು ಜೊತೆಗೆ ಅವರ ಆರ್ಥಿಕ ಪರಿಸ್ಥಿತಿಯೂ ಕೂಡ ಸುಧಾರಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಸಾಧುಕೋಕಿಲ ಅವರು ಬಿಟ್ರೆ ಇನ್ಯಾವ ನಟರು ದೊಡ್ಡ ಸಿನಿಮಾಗಳಲ್ಲಿ ಕಾಣಸಿಗುವುದಿಲ್ಲ ಅವರ ಮಾತ್ರ ಇನ್ನು ಸಿನಿಮಾರಂಗದಲ್ಲಿ ಬೇಡಿಕೆ ಇರುವ ನಟ. ಇನ್ನಾದರು ಇಂತಹ ನಟರನು ಗುರುತಿಸಿ ಅವರ ನಟನೆಯ ತಾಕತ್ತನ್ನು ಗುರುತಿಸಿ ಅವರಿಗೆ ತಕ್ಕ ಪಾತ್ರವನ್ನು ನೀಡಿ ಅವರ ಜೀವನಕ್ಕೆ ದಾರಿ ಮಾಡಿಕೊಡಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.