
ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದ ಮುಖ್ಯ ಹಂತ ಅಂದರೆ ಅದು SSLC ಜೀವನ. ಹೌದು ಇಲ್ಲಿ ತನ್ನ ಅತ್ಯಂತ ಶ್ರಮ ನಿಷ್ಠೆ ವಹಿಸಿ ಆತ ಶ್ರಮಿಸಿದರೆ ಮುಂದಿನ ಜೀವನ ಕೂಡ ಬಹಳ ಉತ್ತಮವಾಗಿರುತ್ತದೆ. ತನ್ನ ಭವಿಷ್ಯದ ಭದ್ರ ಬುನಾದಿಗೆ SSLC ಪರಿಕ್ಷೆ ಯಲ್ಲಿ ತಗೆಯುವ ಅಂಕಗಳು ಬಹುಮುಖ್ಯವಾಗಿದ್ದು, ಹಿಂದೆಲ್ಲಾ SSLC EXAM ಎಂದರೆ ಸಾಕು ವಿದ್ಯಾರ್ಥಿಗಳು ಸಾಕಷ್ಟು ಭಯ ಪಡುತ್ತಿದ್ದರು ಹಾಗು ಕುಟುಂಬದವರು ಕೂಡ ಅಷ್ಟೇ ಜವಾಬ್ದಾರಿ ಯುತವಾಗಿ ನಡೆದುಕೊಂಡು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ನೆರವಾಗುತ್ತಿದ್ದರು.
ಸದ್ಯ ಈಗಿನ ಬದಲಾದ ಕಾಲಘಟ್ಟದಲ್ಲಿ ಶಿಕ್ಷಣ ವ್ಯವಸ್ಥೆ ಕೂಡ ಬದಲಾಗಿದೆ. ಮೊನ್ನೆ ಬಂದ SSLC ಪರೀಕ್ಷೆಯಲ್ಲಿ ಅತಿಹೆಚ್ಚು ರೆಕಾರ್ಡ್ ಬಂದಿದ್ದು ನೂರಕ್ಕೂ ಹೆಚ್ಚು ಜನ 625 ಕ್ಕೆ 625 ಅಂಕ ಪಡೆದಿದ್ದರು. ಹೌದು 2022 ರ ಸಾಲಿನ ಈ ಪರೀಕ್ಷೆ ದೊಡ್ಡ ದಾಖಲೆ ಬರೆದಿತ್ತು ಕರ್ನಾಟಕದಲ್ಲಿ, ಆದರೆ ಇದೀಗ SSLC ಪರೀಕ್ಷೆಯಲ್ಲಿ ಬಹುದೊಡ್ಡ ಬದಲಾವಣೆ ಮಾಡಲು ಶಿಕ್ಶಣ ಇಲಾಖೆ ಮುಂದಾಗಿದೆ.
ಈ ಬಾರಿ ಸುಲ್ಕ್ ಪರೀಕ್ಷೆ ಎನ್ನುವುದು ಕೊರೋನಾ ಪೂರ್ವ ರೀತಿಯಲ್ಲಿ ಹೇಗಿತ್ತೋ ಹಾಗೆಯೇ ನಡೆಯಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಯಾವುದೇ ರೀತಿಯ ಸುಲಭ ಪ್ರಶ್ನೆಗಳು ನಿಮಗೆ ಇರುವುದಿಲ್ಲ ಎಲ್ಲಾ ಪ್ರಶ್ನೆಗಳಿಗೂ ವಿಸ್ಕೃತವಾಗಿ ಸಂಕ್ಷಿಪ್ತವಾಗಿ ಉತ್ತರ ಬರೆಯಲೇಬೇಕು. ಈಗಾಗಲೇ ಸರ್ಕಾರ ಈ ಮಾರ್ಗಸೂಚಿ ಹೊರಡಿಸಿದೆ. ಈ ಬಾರಿ ನಡೆತಯುವ ಏಪ್ರಿಲ್ ನ ಪರೀಕ್ಷೆಯಲ್ಲಿ ಇದು ಜಾರಿಗೆ ಬರಲಿದೆ.
ಇನ್ನು ಈ ಬಾರಿ ಪ್ರಶ್ನೆ ಪತ್ರಿಕೆಯನ್ನು ಕೊರೋನಾ ಪೂರ್ವ ಅಂದರೆ 2019 ರಲ್ಲಿ ಹೇಗೆ ಪ್ರಶ್ನೆ ಪತ್ರಿಕೆ ಇದೆಯೋ ಅದೇ ರೀತಿಯಲ್ಲಿ ಪರಿಷ್ಕರಣೆ ಮಾಡಿ ಸಿದ್ದಪಡಿಸಲಾಗಿದೆ. ಇನ್ನು ಸದ್ಯ ಭಾರತದಲ್ಲಿ ಕೊರೋನಾ ಪರಿಸ್ಥಿತಿಯ ಯಾವುದೇ ಭಯ ಇಲ್ಲದ ಕಾರಣ ವಿದ್ಯಾರ್ಥಿಗಳಿಗೆ ಮುಕ್ತವಾಗಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗುವುದು.
ಹಾಗೆಯೆ ಮತ್ತೊಂದು ಸಂಗತಿ ಎಂದರೆ ಕಡ್ಡಾಯವಾಗಿ 75% ಹಾಜರಿಯನ್ನು ವಿದ್ಯಾರ್ಥಿಗಳು ಹೊಂದಲೇಬೇಕು ಎನ್ನಲಾಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ವರದಿ ನೀಡಿದೆ. ಅಷ್ಟೇ ಅಲ್ಲದೆ ಇನ್ನೊಂದು ವಾರದಲ್ಲಿ ಪರೀಕ್ಷಾ ನೋಂದಣಿಯ ಪ್ರಕ್ರಿಯೆ ಆರಂಭವಾಗಲಿದೆ. ಇದರಂತೆಯೇ ಮತ್ತೊಂದು ಮಹತ್ವದ ಉಚನೆ ಎಂದರೆ ಈ ಬಾರಿ ಪ್ರಶ್ನೆ ಪತ್ರಿಕೆಯಲ್ಲಿ ಯಾವುದೇ ಕಠಿಣತೆಯನ್ನು ಸುಲಭಗೊಳಿಸುವ ಪ್ರಯತ್ನ ಮಾಡಿಲ್ಲ.
Comments are closed.