“ಪಾರ್ಟಿಗಳ ಸಮಯದಲ್ಲಿ ಬಾತ್‌ರೂಮ್ ಗಳಲ್ಲಿ ಬಹಿರಂಗವಾಗೇ ಶಾರುಖ್ ಖಾನ್…” ಶಾರುಖ್ ಖಾನ್ ವಿರುದ್ಧ ಗಂಭೀರ ಆರೋಪ ಮಾಡಿದ ಬಾಲಿವುಡ್ ನಟಿ

CINEMA/ಸಿನಿಮಾ

ಕಳೆದ ವರ್ಷ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಭಾರೀ ಸುದ್ದಿಯಲ್ಲಿದ್ದದ್ದೂ ಹಾಗು ಅದಕ್ಕೆ ಕಾರಣವೇನು ಅನ್ನೋದೂ ನಿಮಗೆ ಗೊತ್ತೇ ಇದೆ. ಎನ್‌ಸಿಬಿ ಶಾರುಖ್ ಪುತ್ರ ಮತ್ತು ಇತರ 8 ಮಂದಿಯನ್ನು ಮುಂಬೈಯಿಂದ ಗೋವಾಕ್ಕೆ ಹೊರಟಿದ್ದ ಕ್ರೂಸ್ ನಲ್ಲಿ ಡ್ರ-ಗ್ಸ್ ಮತ್ತು ರೇವ್ ಪಾರ್ಟಿ ನಡೆಸಿದ್ದಕ್ಕಾಗಿ ಬಂಧಿಸಿತ್ತು. ಬಳಿಕ ಆರ್ಯನ್‌ ಖಾನ್‌ನ್ನ ನ್ಯಾಯಾಲಯ 15 ದಿನಗಳ ಕಸ್ಟಡಿಗೆ ಕಳಿಸಿತ್ತು. ಬರೋಬ್ಬರಿ 1 ತಿಂಗಳಷ್ಟು ಕಾಲ ಆತ ಜೈಲಿನಲ್ಲೇ ಇದ್ದು ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದ. ಈ ಪ್ರಕರಣದಲ್ಲಿ ಆರ್ಯನ್ ಖಾನ್ ಹೆಸರು ಹೊರಬಂದ ತಕ್ಷಣ, ಆತನ ಬೆಂಬಲಕ್ಕೆ ಬಾಲಿವುಡ್ ಸ್ಟಾರ್ ಗಳು ಹೇಳಿಕೆಗಳು ಬರಲಾರಂಭಿಸಿದ್ದವು.

ಬಾಲಿವುಡ್ ನಿಂದ ಮೊದಲ ಪ್ರತಿಕ್ರಿಯೆ ಬಂದಿದ್ದು ಸುನಿಲ್ ಶೆಟ್ಟಿಯಿಂದ

ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಯ್ತು ಹಳೆಯ ಇಂಟರ್‌ವ್ಯೂ

ಮೊದಲನೆಯದಾಗಿ, ಬಾಲಿವುಡ್ ನಟ ಸುನಿಲ್ ಶೆಟ್ಟಿ ತನಿಖೆ ನಡೆಯುತ್ತಿದೆ ವರದಿ ಬರುವವರೆಗೂ ಕಾಯಿರಿ ಮಗು ಉಸಿರಾಡಲಿ ಬಿಡಿ ಎಂದು ಹೇಳಿದ್ದರು. ಆದರೆ ಗಾಯಕ ಮಿಕಾ ಸಿಂಗ್ ಮಾತ್ರ ಒಂದು ಹೆಜ್ಜೆ ಮುಂದೆ ಹೋಗಿ, “ಇಡೀ ಕ್ರೂಸ್ ನಲ್ಲಿ ಆರ್ಯನ್ ಒಬ್ಬನೇ ಓಡಾಡ್ತಾ ಇದ್ನಾ?” ಎಂದು NCB ಯನ್ನ ಪ್ರಶ್ನಿಸಿದ್ದರು. ಆದಾಗ್ಯೂ, ಕೆಲವು ಬಾಲಿವುಡ್ ಸ್ಟಾರ್ ಗಳು ಆರ್ಯನ್ ನ್ನ ಸಮರ್ಥಿಸಿಕೊಳ್ಳುವ ಬದಲು ಆತ ಮಾಡಿದ್ದು ತಪ್ಪು ಎಂದು ಹೇಳಿದ್ದರು.

ವಾಸ್ತವವಾಗಿ, ಈ ವಿಷಯಕ್ಕೆ ಸಂಬಂಧಿಸಿದಂತೆ ಶೆರ್ಲಿನ್ ಚೋಪ್ರಾ ಇತ್ತೀಚೆಗೆ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಳೆಯ ಇಂಟರ್‌ವ್ಯೂ ಒಂದನ್ನ ಹಂಚಿಕೊಂಡಿದ್ದಾರೆ. ಈ ಸಂದರ್ಶನದಲ್ಲಿ, ಶೆರ್ಲಿನ್ ಚೋಪ್ರಾ ಬಾಲಿವುಡ್‌ನಲ್ಲಿ ನಡೆಯುವ ಡ್ರ-ಗ್ ಪಾರ್ಟಿಗಳನ್ನು ಬಹಿರಂಗಪಡಿಸಿದ್ದಾರೆ. ಬಾಲಿವುಡ್ ಮತ್ತು ಕ್ರಿಕೆಟಿಗರ ಪತ್ನಿಯರು ಶಾರುಖ್ ಖಾನ್ ಪಾರ್ಟಿಯಲ್ಲಿ ವೈಟ್ ಪೌಡರ್ (ಕೊಕೇನ್) ತೆಗೆದುಕೊಳ್ಳುತ್ತಾರೆ ಎಂದು ಶೆರ್ಲಿನ್ ಹೇಳಿಕೊಂಡಿದ್ದಾರೆ.

Sherlyn Chopra: ನೋಟದಿಂದಲೇ ಮತ್ತೇರಿಸುವ ನಟಿ ಶರ್ಲಿನ್​ರ ಬೋಲ್ಡ್​​ ಲುಕ್​..!

ಶಾರುಖ್ ಖಾನ್ ಪಾರ್ಟಿಗಳ ಪೋಲ್ ಖೋಲ್ ಮಾಡಿದ ಶರ್ಲಿನ್

ಒಮ್ಮೆ ಶಾರುಖ್ ಖಾನ್ ಅವರ ಕ್ರಿಕೆಟ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯವನ್ನು ನೋಡಲು ಕೋಲ್ಕತ್ತಾಗೆ ಹೋಗಿದ್ದೆ‌. ಈ ಪಂದ್ಯದ ನಂತರ ಶಾರುಖ್ ಖಾನ್ ಕೂಡ ಪಾರ್ಟಿ ಮಾಡಿದ್ದರು, ಈ ಪಾರ್ಟಿಯಲ್ಲಿ ಬಾಲಿವುಡ್ ಮತ್ತು ಕ್ರಿಕೆಟ್ ಸ್ಟಾರ್ ಗಳ ಪತ್ನಿಯರು ಕೂಡ ಭಾಗವಹಿಸಿದ್ದರು. ಪಾರ್ಟಿಯಲ್ಲಿ ಸಾಕಷ್ಟು ಡ್ಯಾನ್ಸ್ ಮೋಜು ಮಸ್ತಿ ನಡೆಯುತ್ತಿತ್ತು. ನಾನು ಕೂಡ ತುಂಬಾ ಡ್ಯಾನ್ಸ್ ಮಾಡಿದ್ದೇನೆ, ಆದರೆ ನೃತ್ಯ ಮಾಡಿ ಸುಸ್ತಾದಾಗ ನಾನು ವಾಶ್‌ರೂಮ್ ಗೆ ಹೋದೆ. ನಾನು ವಾಶ್ ರೂಮ್ ಬಾಗಿಲನ್ನು ತೆಗೆದು ಅಲ್ಲಿ ನೋಡಿದ ದೃಶ್ಯ ಕಂಡು ಒಂದು ಕ್ಷಣ ದಂಗಾಗಿಬಿಟ್ಟದ್ದೆ. ನಾನು ಎಲ್ಲೋ ಬರಬಾರದ ಜಾಗಕ್ಕೆ ಬಂದಂತೆ ಭಾಸವಾಗಿತ್ತು ಎಂದು ಶೆರ್ಲಿನ್ ಚೋಪ್ರಾ ತನ್ನ ಸಂದರ್ಶನದಲ್ಲಿ ಹೇಳಿದ್ದಾರೆ.

Sherlyn Chopra On Sajid Khan: "He Asks Women To Come To His Home For Discussion About Work And..."

“ವಾಷ್ ರೂಂನಲ್ಲಿ, ಬಾಲಿವುಡ್ ಸ್ಟಾರ್ ಗಳ ಪತ್ನಿಯರು ಕನ್ನಡಿಯ ಮುಂದೆ ನಿಂತು ವೈಟ್ ಪೌಡರ್ (ಕೊಕೇನ್) ತೆಗೆದುಕೊಳ್ಳುತ್ತಿದ್ದರು. ಇದನ್ನೆಲ್ಲ ನೋಡಿ ನಾನು ದಿಗ್ಭ್ರಮೆಗೊಂಡೆ. ನನ್ನನ್ನು ನೋಡಿದ ಅವರು ಒಂದು ಸ್ಮೈಲ್ ಕೊಟ್ಟರು, ಹಾಗಾಗಿ ನಾನು ಕೂಡ ಪ್ರತಿಯಾಗಿ ಅವರ ಕಡೆ ಸ್ಮೈಲ್ ಮಾಡಿದೆ. ಆ ಸಮಯದಲ್ಲಿ ಅವರು ಮಾಡ್ತಿದ್ದ ಎಲ್ಲಾ ಕ್ರಿಯೆಗಳನ್ನು ನಿರ್ಲಕ್ಷಿಸುವುದೇ ಸರಿಯೆಂದು ನಾನು ಭಾವಿಸಿದೆ. ಆ ಸಮಯದಲ್ಲಿ ಅವರೆಲ್ಲರೂ ತಮ್ಮದೇ ಆದ ಪ್ರಪಂಚದಲ್ಲಿದ್ದರು. ಅದರ ನಂತರ ಈಗ ನಾನು ಇಲ್ಲಿಂದ ಹೊರಡುವುದೇ ಸೂಕ್ತ ಅಂತನಿಸಿ, ನಾನು ಇಲ್ಲಿಂದ ಹೊರಡುತ್ತಿದ್ದೇನೆ ಎಂದು ಶಾರುಖ್ ಖಾನ್ ಮತ್ತು ಅವನ ಸ್ನೇಹಿತರಿಗೆ ಹೇಳಿದೆ. ಆ ದಿನದ ನಂತರ ನಾನು ಬಾಲಿವುಡ್ ನಲ್ಲಿ ಇಂತಹ ಪಾರ್ಟಿಗಳು ನಡೆಯುತ್ತಲೇ ಇರುತ್ತವೆ ಎಂದು ಅರ್ಥ ಮಾಡಿಕೊಂಡೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ >>>  ಚಿಕ್ಕ ಪುಟ್ಟ ಬಟ್ಟೆಗಳನ್ನು ಹಾಕಿಕೊಳ್ಳದೆ ಇರೋದಕ್ಕೆ ಆ ದಿನ ನಡೆದ ಕೆಟ್ಟ ಘಟನೆಯೇ ಕಾರಣ ಎಂದು ಕಣ್ಣೀರು ಹಾಕಿದ ನಟಿ ಸಾಯಿ ಪಲ್ಲವಿ

ಹಾಗೆ ನೋಡಿದರೆ, ಈ ಹಿಂದೆ ಹಲವು ಬಾರಿ ಬಾಲಿವುಡ್ ಮತ್ತು ಡ್ರ-ಗ್ಸ್ ಸಂಪರ್ಕವು ಬೆಳಕಿಗೆ ಬಂದಿತ್ತು, ಇದಕ್ಕೂ ಮೊದಲು ಇಂತಹ ಇತರ ಹಲವು ಪಾರ್ಟಿಗಳ ಸುದ್ದಿಯೂ ವರದಿಯಾಗಿದ್ದವು, ಇದರಲ್ಲಿ ಡ್ರ-ಗ್ಸ್ ಸೇವಿಸುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ತನಿಖೆಯಲ್ಲಿ ಡ್ರ-ಗ್ಸ್ ಆ್ಯಂಗಲ್ ಕೂಡ ಕಂಡುಬಂದಿತ್ತು. ಆ ಸಮಯದಲ್ಲಿ ಅನೇಕ ದೊಡ್ಡ ಬಾಲಿವುಡ್ ಸೆಲೆಬ್ರಿಟಿಗಳ ಹೆಸರುಗಳೂ ಈ ಪ್ರಕರಣದಲ್ಲಿ ಕೇಳಿಬಂದಿದ್ದವು.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...