ಕೆಲವರು ಸಿನಿಮಾರಂಗಕ್ಕೆ ಬಂದ ಕೊಂಚ ಸಮಯದಲ್ಲೇ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿಬಿಡುತ್ತಾರೆ. ಇದು ಅವರ ಅದೃಷ್ಟ ಎಂದೇ ಹೇಳಬಹುದು, ಅದೃಷ್ಟದ ಜೊತೆಗೆ ಅವರ ಪರಿಶ್ರಮ ಕೂಡ ಇದರಲ್ಲಿ ಇರುತ್ತದೆ ಎನ್ನುವುದನ್ನು ನಾವು ಮರೆಯಬಾರದು. ಇನ್ನು ಸಿನಿಮಾರಂಗದಲ್ಲಿ ತಮ್ಮ ಮೊದಲ ಸಿನಿಮಾದಿಂದಲೇ ಪ್ಯಾನ್ ಇಂಡಿಯಾ ನಟಿಯಾಗಿ ಗುರುತಿಸಿಕೊಂಡಿರುವ ನಟಿ ಶ್ರೀನಿಧಿ ಶೆಟ್ಟಿ. ನಟಿ ಶ್ರೀನಿಧಿ ಶೆಟ್ಟಿ ತಮ್ಮ ಮೊದಲ ಸಿನಿಮಾ ಕೆಜಿಎಫ್ ನ ಮೂಲಕ ಅದೆಷ್ಟೋ ಜನರ ಕನಸ್ಸಿನ ರಾಣಿಯಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಅದ್ಭುತ ಅಭಿನಯ ಹಾಗೂ ತಮ್ಮ ಗ್ಲಾಮರ್ ನ ಮೂಲಕ ಅದೆಷ್ಟೋ ಜನರ ಮನದರಸ್ಸಿಯಾಗಿದ್ದಾರೆ ನಟಿ ಶ್ರೀನಿಧಿ ಶೆಟ್ಟಿ.

ಮೂಲತಃ ಮಂಗಳೂರಿನವರಾದ ನಟಿ ಶ್ರೀನಿಧಿ ಶೆಟ್ಟಿ, ಹುಟ್ಟಿದ್ದು ಬೆಳೆದಿದ್ದು ಎಲ್ಲವೂ ಮಂಗಳೂರಿನಲ್ಲಿಯೇ, ನಂತರ ತಮ್ಮ ಕಾಲೇಜು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದರು. ಕಾಲೇಜಿನ ಸಮಯದಿಂದಲೆ ಮಾಡಲಿಂಗ್ ನಲ್ಲಿ ಆಸಕ್ತಿ ಇದ್ದು, ಮಾಡಲಿಂಗ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಮಿಸ್ ಕರ್ನಾಟಕ ಆಗಿ ಗುರುತಿಸಿಕೊಂಡ ನಟಿ ಶ್ರೀನಿಧಿ ನಂತರ ಮಿಸ್ ಸೂಪರ್ ನ್ಯಾಷನಲ್ ಆಗಿ ಗೆದ್ದು ಬಂದಿದ್ದಾರೆ. ಇನ್ನು ಹಲವಾರು ಮಾಡಲಿಂಗ್ ಸ್ಪರ್ಧೆಗಳಲ್ಲಿ ನಟಿ ಭಾಗವಹಿಸಿ ಗೆದ್ದು ಬಂದಿದ್ದಾರೆ. ಕನ್ನಡದ ಹುಡುಗಿ ಇಷ್ಟೆಲ್ಲಾ ಸಾಧನೆ ಮಾಡಿರುವುದು ನಿಜಕ್ಕೂ ನಮ್ಮ ಹೆಮ್ಮೆ ಎಂದರೆ ತಪ್ಪಾಗಲಾರದು.
ಕೆಜಿಎಫ್ ನಲ್ಲಿ ನಟಿ ಶ್ರೀನಿಧಿ ಶೆಟ್ಟಿ ಯಶ್ ಅವರಿಗೆ ನಾಯಕಿಯಾಗಿ ಅಭಿನಯಿಸಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದರು. ಕೆಜಿಎಫ್ ಹಾಗೂ ಕೆಜಿಎಫ್ 2 ನಂತರ ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿ ನಟಿ ಶ್ರೀನಿಧಿ ಶೆಟ್ಟಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕೆಜಿಎಫ್ ನ ರೀನಾ ಪಾತ್ರದ ಮೂಲಕ ನಟಿ ಅದೆಷ್ಟೋ ಮನಸ್ಸುಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಇದೀಗ ನಟಿ ತಮಿಳು ಸಿನಿಮಾರಂಗಕ್ಕೂ ಸಹ ಎಂಟ್ರಿ ಕೊಟ್ಟಿದ್ದು, ಚಿಯಾನ್ ವಿಕ್ರಮ್ ಗೆ ನಾಯಕಿಯಾಗಿ ಕೋಬ್ರಾ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಇನ್ನು ಸೋಷಿಯಲ್ ಮಿಡಿಯಾದಲ್ಲಿ ಸಕತ್ ಆಕ್ಟಿವ್ ಇರುವ ನಟಿ ಶ್ರೀನಿಧಿ ಶೆಟ್ಟಿ, ಆಗಾಗ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ. ಇನ್ನು ಇದೀಗ ನಟಿ ಫೋಟೋ ಶೂಟ್ ಮಾಡಿಸಿ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ನಟಿ ಶ್ರೀನಿಧಿ ಶೆಟ್ಟಿ ತುಂಬಾ ಮುದ್ದಾಗಿ ಕಾಣಿಸುತ್ತಿದ್ದು, ಫೋಟೋ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಫೋಟೋಗೆ ಲಕ್ಷಗಳಲ್ಲಿ ಲೈಕ್ಸ್ ಹಾಗೂ ಕಾಮೆಂಟ್ಸ್ ಬರುತ್ತಿದೆ.