ಮಾರುವೇಷದಲ್ಲಿ ಪೋಲಿಸ್ ಸ್ಟೇಷನ್‌ಗೆ ಬಂದು “ನಿಮ್ಮ ಸ್ಟೇಷನ್ ಏರಿಯಾದಲ್ಲೇ ನನ್ನ ಬೈಕ್ ಕಳುವಾಗಿದೆ ಸರ್ ಪ್ಲೀಸ್ ಹುಡುಕಿ ಕೊಡಿ” ಎಂದ SP,ಮುಂದಾಗಿದ್ದೇನು ನೋಡಿ

ಭಾಗಲ್ಪುರ್: ಬಿಹಾರದ ಭಾಗಲ್ಪುರ ಜಿಲ್ಲೆಯಿಂದ ಈ ಸುದ್ದಿ ವರದಿಯಾಗಿದೆ. ಸಾಮಾನ್ಯ ವ್ಯಕ್ತಿಯಂತೆ ಬಟ್ಟೆಯನ್ನು ಧರಿಸಿ ಪೋಲಿಸ್ ಸ್ಟೇಷನ್ ವಾತಾವರಣ ಸಾಮಾನ್ಯ ಜನರಿಗೆ ಹೇಗಿರುತ್ತೇಂತ ಪರೀಕ್ಷಿಸಲು ಬಂದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SP) ಅವರನ್ನು ಜೋಗಸರ ಪೊಲೀಸ್ ಠಾಣೆಯ ಎಸ್‌ಐ ಬಾಯಿಗೆ ಬಂದಂತೆ ಮಾತನಾಡಿದರು. ವಾಸ್ತವವಾಗಿ, SP ಮಾರುವೇಷದಲ್ಲಿ ಸಾಮಾನ್ಯ ವ್ಯಕ್ತಿಯಂತೆ ಬಂದು ತಮ್ಮ ಬೈಕ್ ಕಳ್ಳತನವಾಗಿರುವ ಬಗ್ಗೆ ಹೇಳಿದ್ದರು, ಆದರೆ ಜೋಗ್‌ಸರ್ ಟಿಓಪಿ ನಲ್ಲಿ ಪೋಸ್ಟಿಂಗ್ ಆಗಿದ್ದ ಎಸ್‌ಐ ಹಿತ್‌ನಾರಾಯಣ್ SP ಯನ್ನ ಗುರುತಿಸಲು ಸಾಧ್ಯವಾಗಲಿಲ್ಲ ಹಾಗು ಆತ ಸಾಮಾನ್ಯ ವ್ಯಕ್ತಿ ಎಂದು ಭಾವಿಸಿದ್ದರು. SP ಬಾಬು ರಾಮ್ ಅವರನ್ನು ಸಾಮಾನ್ಯ ಜನರಂತೆ ತಳ್ಳುವ ಮೂಲಕ ಎಸ್‌ಐ ಅಸಭ್ಯವಾಗಿ ವರ್ತಿಸಿದರು.

ಇತ್ತೀಚೆಗಷ್ಟೇ ವರ್ಗಾವಣೆಯಾದ ನಂತರ SP ಬಾಬು ರಾಮ್ ಅವರು ಪೊಲೀಸ್ ಠಾಣೆಗಳ ತಪಾಸಣೆಗೆಂದು ಕಳೆದ ಭಾನುವಾರ ಸಾಮಾನ್ಯ ಉಡುಪಿನಲ್ಲಿ ತೆರಳಿದ್ದರು. ತಪಾಸಣೆ ವೇಳೆ ಜೋಗಸರ ಪೊಲೀಸ್ ಠಾಣೆಗೆ SP ಬಾಬುರಾಮ್ ಆಗಮಿಸಿದ್ದರು. ಈ ವೇಳೆ ಠಾಣೆಯ ಮುಂಭಾಗದಲ್ಲಿಯೇ ನನ್ನ ಬೈಕ್ ಕಳ್ಳತನವಾಗಿದೆ ಎಂದು ಮಾರುವೇಷದಲ್ಲಿ ಬಂದಿದ್ದ SP ಠಾಣೆಯ SI ಗೆ ತಿಳಿಸಿದರು. ಇದಕ್ಕಾಗಿ ನಾನು ಕಂಪ್ಲೇಂಟ್ ಕೊಡಬೇಕಿದೆ ಎಂದರು. ಈ ಬಗ್ಗೆ ಅಲ್ಲಿದ್ದ ಪೋಲೀಸರು – ‘ಹೆಚ್ಚು ಹೀರೋ ಆಗಬೇಡ. ಯಾಕೆ ಸುಳ್ಳು ಹೇಳುತ್ತಿದ್ದೀಯ? ಬೈಕನ್ನು ಬೇರೆ ಕಡೆ ಎಲ್ಲೋ ಇಟ್ಟು ಬಂದು, ಸ್ಟೇಷನ್ ಹೊರಗೆ ಕಳುವಾಗಿದೆ ಅಂತ ಹೇಳ್ತಿದೀಯ?’ಎಂದು ಹೇಳಿದರು.

ಈ ವೇಳೆ ಪೊಲೀಸ್ ಠಾಣೆಯಲ್ಲಿ SI ಹಿತ್‌ನಾರಾಯಣ್ ಮತ್ತು ಕಾನ್‌ಸ್ಟೆಬಲ್ ಧರ್ಮೇಂದ್ರಕುಮಾರ್ ಹಾಜರಿದ್ದರು. ಆದರೆ SP ಪೊಲೀಸ್ ಠಾಣೆಗೆ ತಲುಪಿದ ಮಾಹಿತಿ, ಅಷ್ಟರಲ್ಲಿ ಅಜಯ್ ಅಜ್ನವಿಗೆ ಖುದ್ದು SP ಬಾಬುರಾಮ್ ರವರವೇ ಠಾಣೆಗೆ ಬಂದಿದ್ದಾರೆ ಎಂಬ ಮಾಹಿತಿ ಸಿಕ್ಕಿತು. ಅವರು ಪೊಲೀಸ್ ಠಾಣೆಗೆ ಓಡಿದರು. ಅಲ್ಲಿದ್ದ ಪೊಲೀಸರಿಗೆ ಅವರು, ಕಂಪ್ಲೇಂಟ್ ಬರೆಸೋಕೆ ಬಂದವರು ಬೇರೆ ಯಾರೂ ಅಲ್ಲ, ಖುದ್ದು ನಮ್ಮ SP ಸಾಹೇಬರು ಎಂದು ತಿಳಿಸಿದರು. ಇದನ್ನು ತಿಳಿದಾಗ ಠಾಣೆಯಲ್ಲಿದ್ದ ಎಲ್ಲ ಪೋಲಿಸರೂ ದಿಗ್ಭ್ರಾಂತರಾಗಿದ್ದರು. ಪೊಲೀಸ್ ಠಾಣೆಯ ಮೂಲಗಳ ಪ್ರಕಾರ, ಚಳಿಗಾಲದ ರಾತ್ರಿಯಲ್ಲೂ ಪೊಲೀಸರು ನಿಂತಲ್ಲೇ ಬೆವರುತ್ತಿದ್ದರಂತೆ.

SHO ಅಜಯ್ ಅಜ್ನವಿ ಸೋಮವಾರ ಎಲ್ಲಾ ಪೊಲೀಸರೊಂದಿಗೆ SP ಕಚೇರಿಗೆ ತಲುಪಿದರು. ಬಹಳ ಹೊತ್ತು ಹೊರಗೆ ನಿಂತ ನಂತರ ಎಲ್ಲರನ್ನೂ SP ಕರೆದರು. ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಜನರೊಂದಿಗೆ ಇಂತಹ ವರ್ತನೆ ಸರಿಯಲ್ಲ. ಈ ರೀತಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬಿಡುವುದಿಲ್ಲ ಎಂದು SP ಬಾಬುರಾಮ್ ಪೊಲೀಸರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ನಿನ್ನೆ ರಾತ್ರಿ ನಗರದ ಪೊಲೀಸ್ ಠಾಣೆಗಳಲ್ಲಿ ದಿಢೀರ್ ತಪಾಸಣೆ ನಡೆಸಿ ರಾತ್ರಿ ಕೆಲಸ ಮಾಡುವ ಪೋಲಿಸರ ಬಗ್ಗೆ ಮಾಹಿತಿ ಪಡೆದುಕೊಂಡರು. ಇದರಲ್ಲಿ ಇಶಾಚ್ಚಕ್, ಕೊತ್ವಾಲಿ, ತಾತಾರ್‌ಪುರ, ನಾಥನಗರ, ವಿಶ್ವವಿದ್ಯಾಲಯ, ಲಾಲ್ಮಾಟಿಯಾ ಮೊದಲಾದ ಪೊಲೀಸ್ ಠಾಣೆಗಳ ಕಾವಲುಗಾರರು ಮತ್ತು ಓಡಿ ಅಧಿಕಾರಿಗಳು ಕರ್ತವ್ಯಕ್ಕೆ ಸಿದ್ಧರಿರುವುದು ಕಂಡುಬಂದಿದೆ. ಅವರ ನಡವಳಿಕೆಯೂ ಸೌಜನ್ಯದಿಂದ ಕೂಡಿತ್ತು.

ಅವರು ಜನರ ಸಮಸ್ಯೆ ಆಲಿಸಿ ಪರಿಹಾರಕ್ಕೆ ಯತ್ನಿಸಿದರು. ಈ ಎಲ್ಲ ಅಧಿಕಾರಿಗಳು ಮತ್ತು ನೌಕರರನ್ನು ಪುರಸ್ಕರಿಸಲಾಗುತ್ತಿದೆ. ಇದೇ ವೇಳೆ ಜೋಗಸರ ಪೊಲೀಸ್ ಠಾಣೆಯ ಓಡಿ ಅಧಿಕಾರಿ ಹಾಗೂ ಗಸ್ತು ಕರ್ತವ್ಯಾಧಿಕಾರಿ ಬೈಕ್ ಕಳ್ಳತನದ ದೂರು ದಾಖಲಿಸಿಕೊಳ್ಳುವ ಬದಲು ಅಸಭ್ಯವಾಗಿ ವರ್ತಿಸಿದ್ದಾರೆ. ಈ ಇಬ್ಬರೂ ಪದಾಧಿಕಾರಿಗಳನ್ನು ಇಂದು ಕರೆಸಿ ಕೌನ್ಸೆಲಿಂಗ್ ಮಾಡಿ ಭವಿಷ್ಯದ ಬಗ್ಗೆ ಎಚ್ಚರಿಕೆ ನೀಡಲಾಯಿತು. ಸಾರ್ವಜನಿಕರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸುವಂತೆ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ.

You might also like

Comments are closed.