ಬೆಣ್ಣೆಯಂತೆ ಇರುವ ಖ್ಯಾತ ನಟಿ ಸೋನು ಗೌಡ ರವರ ನಿಜವಾದ ವಯಸ್ಸೆಷ್ಟು ಗೊತ್ತಾ? ಅಯ್ಯೋ ಇಷ್ಟು ಕಡಿಮೆನಾ ನೋಡಿ!!

CINEMA/ಸಿನಿಮಾ

ಕನ್ನಡದ ಖ್ಯಾತ ನಟಿಯರಲ್ಲಿ ಸೋನು ಗೌಡ ಕೂಡ ಒಬ್ಬರು. ಕಳೆದ ಹನ್ನೆರಡು ವರ್ಷಗಳಿಂದ ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಮಿಂಚುತ್ತಿರುವ ಸುರ ಸುಂದರ ಅಭಿನೇತ್ರಿ ಸೋನು ಗೌಡ. ಇವರ ನಿಜವಾದ ಹೆಸರು ಶ್ರುತಿ ರಾಮಕೃಷ್ಣ. ಬೆಂಗಳೂರಿನಲ್ಲಿ ಹುಟ್ಟಿರುವ ಸೋನು ಗೌಡ ಅವರು 2008 ರಿಂದ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಇವರು ಮೊತ್ತ ಮೊದಲು ಇಂತಿ ನಿನ್ನ ಪ್ರೀತಿಯ ಅನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. ನಂತರ ಅದೇ ವರ್ಷದಲ್ಲಿ ಪರಮೇಶ ಪಾನ್ವಾಲಾ ಅನ್ನುವ ಸಿನಿಮಾದಲ್ಲಿಯೂ ನಟಿಸಿದ್ದಾರೆ.

2009 ರಲ್ಲಿ ಗುಲಾಮ ಸಿನಿಮಾ ಮಾಡಿದ್ದರೆ, 2010 ರಲ್ಲಿ ಪೋಲಿಸ್ ಕ್ವಾರ್ಟರ್ಸ್ ಅನ್ನುವ ಕನ್ನಡ ಸಿನಿಮಾ, ಸಿವಪ್ಪ ಮಾಝಾಯಿ ಅನ್ನುವ ತಮಿಳು ಸಿನಿಮಾದಲ್ಲಿಯೂ ನಟಿಸಿದ್ದಾರೆ. ಹೀಗೆ ಗುಲಾಮ, ಪೊಲೀಸ್ ಕ್ವಾರ್ಟಸ್, ದೇವರೇ, ಗೋವಾ, ಕಿರಗೂರಿನ ಗಯ್ಯಾಳಿಗಳು, ಅಸ್ತಿತ್ವ, ಹ್ಯಾಪಿ, ನ್ಯೂ ಇಯರ್, ಮಾರಿಕೊಂಡವರು, ಗುಳ್ಟು, ಕಾನೂರಾಯಣ, ಒಂಥರಾ ಬಣ್ಣಗಳು, ಫಾರ್ಚುನರ್, ಚಂಬಲ್, ಐ ಲವ್ ಯೂ, ಯುವರತ್ನ ಚಿತ್ರದಲ್ಲಿಗಳಲ್ಲಿ ಅಭಿನಯಿಸಿರುವ ಇವರು ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲಿ ಮಿಂಚಿದ್ದಾರೆ. ಸೋನು ಗೌಡ ಅವರ ತಂದೆ ರಾಮಕೃಷ್ಣ, ಇವರು ಕನ್ನಡ ಚಿತ್ರರಂಗದಲ್ಲಿ ಕೇಶ ವಿನ್ಯಾಸ ಮಾಡುತ್ತಾರೆ.

ಹೀಗಾಗಿ ತಂದೆಯ ಮುಖಾಂತರವೇ ಸೋಬು ಗೌಡ ಅವರು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಇನ್ನು ಸೋನು ಗೌಡ ಅವರು ಹುಟ್ಟಿದ್ದು, ಮಾರ್ಚ್ 23 ರ 1990 ರಲ್ಲಿ. ಇದೀಗ ಇವರಿಗೆ 31 ವರ್ಷ ವಯಸ್ಸಾಗಿದೆ. ಆದರೆ ಈಗಲೂ ತನ್ನ ಸೌಂದರ್ಯವನ್ನು ಚೆನ್ನಾಗಿಯೇ ಕಾಪಾಡಿಕೊಂಡು ಬಂದಿದ್ದಾರೆ. ಸೋನು ಗೌಡ ಅವರು 2010 ರ ನವೆಂಬರ್ 1 ರಂದು ಮನೋಜ್ ಕುಮಾರ್ ಅನ್ನುವವರ ಜೊತೆ ಮದುವೆ ಆಗಿದ್ದಾರೆ. ಇವರಿಗೆ ನೇಹಾ ಗೌಡ ಅನ್ನುವ ತಂಗಿ ಇದ್ದಾರೆ. ಇವರು ಕೂಡ ಒಬ್ಬ ಖ್ಯಾತ ನಟಿ, ಕನ್ನಡದ ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲಿ ಗೊಂಬೆ ಪಾತ್ರ ಮಾಡಿ ಜನಮನ್ನಣೆ ಗಳಿಸಿದ್ದಾರೆ.

ಅದೇ ರೀತಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಿದ್ದ ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ರಾಜಾ ರಾಣಿ ಕಿರೀಟ ಮುಡಿಗೇರಿಸಿಕೊಂಡಿದ್ದರು. ಹೀಗೆ ಅಕ್ಕ ತಂಗಿ ಇಬ್ಬರೂ ನಟನಾ ಕ್ಷೇತ್ರದಲ್ಲಿ ಹೆಸರು ಮಾಡಿದವರೇ. ಸೋನು ಅವರು ಸಿನಿಮಾ ರಂಗದಲ್ಲಿ ಮಿಂಚಿದರೆ ನೇಹಾ ಅವರು ಕಿರುತೆರೆಯಲ್ಲಿ ಹೆಸರು ಮಾಡಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ನಮಗೆ ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.




ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಮುಗಿಯುವ ಹಾಗೇ ಕಾಣುತ್ತಿಲ್ಲ ಫ್ಯಾನ್ಸ್ ವಾರ್! ಇನ್ನು ಮುಂದೆ ರಾಜ್ ಕುಟುಂಬಕ್ಕೆ ಸಪೋರ್ಟ್ ಮಾಡಲ್ಲ ಎನ್ನುತ್ತಿರುವ ಡಿ ಬಾಸ್ ಅಭಿಮಾನಿಗಳು! ವಿಡಿಯೊ ವೈರಲ್…