ಸಾಮಾಜಿಕ ಜಾಲತಾಣದ ಮೂಲಕವೇ ಹೆಚ್ಚು ಚಿರಪರಿಚಿತ ಆಗಿರುವ ಹಾಗೇ ಟಿಕ್ ಟಾಕ್ ಮಾಡುತ್ತಾ, ವಿಡಿಯೋಗಳ ಮೂಲಕ ಸದ್ದು ಮಾಡಿದ್ದ ಕಲಾವಿದೆ ಸೋನು ಶ್ರೀನಿವಾಸ ಗೌಡ ಇದೀಗ ಬಿಗ್ ಬಾಸ್ ಓಟಿಟಿ ಸೀಜನ್ ಒಂದಕ್ಕೆ ಎಂಟ್ರಿ ಪಡೆದುಕೊಂಡು ಸಕತ್ತಾಗಿ ಆಟವನ್ನು ಆಡುತ್ತಿದ್ದಾರೆ. ಈ ಸೋನು ಶ್ರೀನಿವಾಸ ಗೌಡ ಅವರು ಆರಂಭದಲ್ಲಿ ಬಿಗ್ಬಾಸ್ ಮನೆಯಲ್ಲಿ ಹೆಚ್ಚು ವಿರೋದಕ್ಕೆ ಒಳಗಾದವರು. ಬಿಗ್ ಬಾಸ್ ಮನೆ ಆಯ್ಕೆ ವಿಚಾರವಾಗಿ ವೀಕ್ಷಕರು ಕೂಡ ಇವರ ಆಯ್ಕೆಯನ್ನ ಖಂಡಿಸಿ ಬೇಸರ ವ್ಯಕ್ತಪಡಿಸಿದ್ದು ನೋಡಿದ್ದೀರಿ. ಇದೀಗ ಇದೇ ಸೋನು ಶ್ರೀನಿವಾಸ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ವೀಕ್ಷಕರ ಮನವನ್ನು ಗೆದ್ದಿದ್ದಾರೆ ಇವರ ಆಟವನ್ನು ಬಿಗ್ ಬಾಸ್ ಮನೆಯಲ್ಲಿ ನೋಡುವುದಕ್ಕೆ ಓಟಿಟಿ ಮೂಲಕ ಹೆಚ್ಚು ವೀಕ್ಷಕರು ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಬಾರಿ ಟಾಪ್ 4 ರ ಸ್ಪರ್ಧಿಯಾಗಿ ಸೋನು ಇರುತ್ತಾರೆ ಎನ್ನುವ ಮಾತುಗಳು ಒಂದು ಕಡೆ ಕೇಳಿ ಬರುತ್ತಿವೆ. ಇದು ಒಂದು ಕಡೆ ಆದರೆ, ಇವರ ನಿಜ ಜೀವನದ ಆಧಾರಿತ ಸಿನಿಮಾ ಕೂಡ ತೆರೆಗೆ ಬರುತ್ತದೆ ಎಂದು ಒಬ್ಬ ನಿರ್ಮಾಪಕರ ಕಡೆಯಿಂದ ಮಾಹಿತಿ ಹೊರ ಬಿದ್ದಿದೆ. ಸೋನು ಶ್ರೀನಿವಾಸ ಗೌಡ ಈ ನಿಜ ಜೀವನದಲ್ಲಿ ಸಾಕಷ್ಟು ವಿಚಾರಕ್ಕೆ ಸುದ್ದಿ ಆಗಿರುವ ಟಿಕ್ ಟಾಕರ್. ಅವರ ಜೀವನದಲ್ಲಿ ಕೆಲವು ವಿಚಾರಗಳಿಗೆ ಕೆಟ್ಟ ರೀತಿ ಬಿಂಬಿತವಾಗಿದ್ದಾರೆ. ಇದೆಲ್ಲವನ್ನು ಇಟ್ಟುಕೊಂಡು ಅವರ ನಿಜ ಜೀವನದ ಆಧಾರಿತ ಲೈಫ್ ಸ್ಟೈಲ್ ಹೀಗಿರುತ್ತದೆ ಎಂದು ತೆರೆಯ ಮೇಲೆ ತರಲು ಒಬ್ಬ ನಿರ್ಮಾಪಕರು ಈಗಾಗಲೇ ಚಿಂತನೆ ನಡೆಸಿದ್ದು ಈ ಸಿನಿಮಾದಲ್ಲಿ ಸೋನು ಶ್ರೀನಿವಾಸ ಗೌಡ ಅವರೇ ನಾಯಕಿ ಆಗಿರುತ್ತಾರ ಅಥವಾ ಬೇರೆ ಯಾರಾದ್ರೂ ನಟಿ ಆಗಿರುತ್ತಾರ ಎಂದು ಕಾದು ನೋಡಬೇಕು.

ಸೋನು ಶ್ರೀನಿವಾಸ ಗೌಡ ಅವರ ನಿಜ ಜೀವನದ ಸಿನಿಮಾ ತೆರೆಯ ಮೇಲೆ ಬರುತ್ತಿರುವ ಸುದ್ದಿ ಕೇಳಿ ಇದೇನು ಗುರು ಹೀಗೂ ಜೀವನದಲ್ಲಿ ಆಗುತ್ತಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಎಲ್ಲರೂ ಪ್ರೀತಿ ಮಾಡುವಂತೆ ಸೋನು ಸಹ ಅವರದ್ದೆ ಜಾತಿ ಹುಡುಗನನ್ನು ಪ್ರೀತಿ ಮಾಡಿದ್ದು, ಮದುವೆಯಾಗುತ್ತಾನೆ ಎಂದು ನಂಬಿ ವಿಡಿಯೋ ಕಾಲ್ ಮೂಲಕ ಖಾಸಗಿತನದ ವಿಚಾರ ಬಯಲು ಮಾಡಿರುವ ಆತನ ಎಲ್ಲಾ ವಿಚಾರ ಈ ಸೋನು ಶ್ರೀನಿವಾಸ ಹೇಳಿದ್ದಾರೆ. ತಾನು ಹೇಗೆ ಮೋಸಕ್ಕೆ ಒಳಗಾದೆ ಎಂದು ವಿಚಾರ ಬಿಚ್ಚಿಟ್ಟಿದ್ದಾರೆ. ಇದೀಗ ಇವರ ಬಗ್ಗೆ ಸಿನಿಮಾ ಬರುತ್ತಿರುವ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದಾಗಿ ಕಮೆಂಟ್ ಮಾಡಿ, ಸೋನು ಶ್ರೀನಿವಾಸ ಗೌಡ ಬಿಗ್ ಬಾಸ್ ಮನೆಯಲ್ಲಿ ಹೇಗೆ ಆಟವಾಡುತ್ತಿದ್ದಾಳೆ ಎಂದು ಕಮೆಂಟ್ ಮೂಲಕ ನಿಮ್ಮ ಅಭಿಪ್ರಾಯವನ್ನು ಕೂಡ ಹೇಳಿ, ಧನ್ಯವಾದಗಳು..