SONU-IN-GOA

ಗೋವಾದಲ್ಲಿ ಮಜಾ ಮಾಡಿದ ಸೋನು ಗೌಡ! ವಿಡಿಯೋ ಸಿಕ್ಕಾಪಟ್ಟೆ ವೈರಲ್ ನೋಡಿ!!

Entertainment/ಮನರಂಜನೆ Today News / ಕನ್ನಡ ಸುದ್ದಿಗಳು

ವೂಟ್ ಸೆಲೆಕ್ಟ್ ನಲ್ಲಿ ಪ್ರಸಾರವಾಗಿದ್ದ ಬಿಗ್ ಬಾಸ್ ಓಟಿಟಿ ವರ್ಷನ್ ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದವರಲ್ಲಿ ಸೋನು ಶ್ರೀನಿವಾಸ ಗೌಡ ಕೂಡ ಒಬ್ಬರು. ಸೋಶಿಯಲ್ ಮೀಡಿಯಾ (Social Media star) ಸ್ಟಾರ್ ಆಗಿರುವ ಸೋನು ಶ್ರೀನಿವಾಸ ಗೌಡ ಬಿಗ್ ಬಾಸ್ ಮನೆಯಲ್ಲಿಯೂ ಕೂಡ ಸಾಕಷ್ಟು ದಿನಗಳ ವರೆಗೆ ಇದ್ದು ಮನರಂಜನೆ ನೀಡಿದ್ದಾರೆ.

ಸೋನು ಶ್ರೀನಿವಾಸ್ ಗೌಡ ಅಂದ್ರೆ ಕರ್ನಾಟಕ (Karnataka) ದಲ್ಲಿ ಗೊತ್ತಿಲ್ಲದೆ ಇರುವವರು ಯಾರು ಇಲ್ಲ. ಈ ಹಿಂದೆ ಟಿಕ್ ಟಾಕ್ ಮಾಡಿಕೊಂಡು ಇದ್ದ ಶ್ರೀನಿವಾಸ ಗೌಡ instagram ನಲ್ಲಿ ರೀಲ್ ಗಳನ್ನು ಮಾಡುವುದರ ಮೂಲಕ ಹೆಚ್ಚು ಫೇಮಸ್ ಆದ್ರು. ಅದರಲ್ಲೂ ಬಿಗ್ ಬಾಸ್ ಮನೆಗೆ ಹೋಗಿ ಬಂದ ನಂತರ ಸೋನು ಶ್ರೀನಿವಾಸ ಗೌಡ ಕೂಡ ಒಬ್ಬ ಸೆಲೆಬ್ರಿಟಿಯಂತೆ ಆಗಿ ಬಿಟ್ಟಿದ್ದಾರೆ. Instagram ನಲ್ಲಿ ಸಾಕಷ್ಟು ಫಾಲೋವರ್ಸ್ ಹೊಂದಿದ್ದಾರೆ ಸೋನು ಶ್ರೀನಿವಾಸ್ ಗೌಡ.

ಸೋನು ಶ್ರೀನಿವಾಸ್ ಗೌಡ ನೆಗೆಟಿವ್ ವಿಚಾರಗಳಿಗಾಗಿ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡವರು ಈಗಾಗಲೇ ಅವರ ಖಾಸಗಿ ವಿಡಿಯೋ ಒಂದು ವೈರಲ್ ಆಗಿತ್ತು. ಇದರಿಂದಾಗಿ ಸೋನು ಶ್ರೀನಿವಾಸ ಗೌಡ ಸಾಕಷ್ಟ್ ಟ್ರೋಲ್ ಗಳಿಗೂ ಕೂಡ ಗುರಿ ಆಗಿದ್ದರು. ಸೋನು ಶ್ರೀನಿವಾಸ್ ಗೌಡ ಅವರು ಪಾಸಿಟಿವ್ ಕಮೆಂಟ್ಗಳಿಗಿಂತ ನೆಗೆಟಿವ್ ಆಗಿ ಫೇಮಸ್ ಆಗಿದ್ದೇ ಜಾಸ್ತಿ.

ಅವರ ವೈಯಕ್ತಿಕ ಫೋಟೋ ಹಾಗೂ ವಿಡಿಯೋ ಲೀಕ್ ಆದಮೇಲೆ ಕರ್ನಾಟಕಕ್ಕೆ ಪರಿಚಿತರಾದರು ಆದರೆ ಸೋನು ಈ ವಿಷಯಗಳಿಗೆ ತಲೆಬಿಸಿ ಮಾಡಿಕೊಳ್ಳುವವರಲ್ಲ. ಹಾಗಾಗಿ ಈಗಲೂ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ವಿಡಿಯೋ ಹಾಗೂ ಫೋಟೋಗಳನ್ನು ಸೋನು ಶ್ರೀನಿವಾಸ್ ಗೌಡ ಅಪ್ಲೋಡ್ ಮಾಡುತ್ತಾರೆ. ಈಗ ಸೋನು ಶ್ರೀನಿವಾಸ್ ಗೌಡ ಅವರ ಇನ್ನೊಂದು ವಿಡಿಯೋ ಆಗಿದೆ.

ಹೌದು ಸೋನು ಶ್ರೀನಿವಾಸ ಗೌಡ ಅವರ ಮತ್ತೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಆದರೆ ಇದು ಅವರ ಖಾಸಗಿ ವಿಡಿಯೋ ಏನು ಅಲ್ಲ. ತಮ್ಮದೇ ಆದ ಒಂದು ಯೌಟ್ಯೂಬ್ ಚಾನೆಲ್ ಅನ್ನು ಶ್ರೀನಿವಾಸ್ ಗೌಡ ಆರಂಭಿಸಿದ್ದು ಅದರಲ್ಲಿ ತಾವು ಎಲ್ಲಿಗೆ ಟ್ರಿಪ್ ಹೋದರು ಅಲ್ಲಿನ ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡುತ್ತಾರೆ.

ಇತ್ತೀಚಿಗೆ ತನ್ನ ಸ್ನೇಹಿತರ ಜೊತೆಗೆ ಹೊಸ ವರ್ಷವನ್ನು ಎಂಜಾಯ್ ಮಾಡಲು ಗೋವಾ ಟ್ರಿಪ್ ಹೋಗಿದ್ದರು ಸೋನು ಶ್ರೀನಿವಾಸ ಗೌಡ. ಅಲ್ಲಿನ ಅಗೂಡ ಫೋರ್ಟ್, ಬೀಚ್ ಮೊದಲದ ಭಾಗಗಳಿಗೆ ಪ್ರಯಾಣ ಬೆಳೆಸಿದ ಸೋನು ಹಾಗೂ ಅವರ ತಂಡ ಒಂದಿಷ್ಟು ವಿಡಿಯೋ ಮಾಡಿ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಸ್ನೇಹಿತರ ಜೊತೆಗೆ ಸಾಕಷ್ಟು ಸಮಯವನ್ನು ಕಳೆದಿರುವ ಸೋನು ಶ್ರೀನಿವಾಸ್ ಗೌಡ ಬೆಂಗಳೂರಿಗೆ ವಾಪಸ್ ಆಗಿದ್ದು.

ತಮ್ಮ ಗೋವಾ ಟ್ರಿಪ್ ನ 5 ದಿನದ ವಿಶೇಷ ಸಂದರ್ಭಗಳನ್ನು ಸೆರೆ ಹಿಡಿದು ವಿಡಿಯೋ ಮಾಡಿ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.ಸೋನು ಶ್ರೀನಿವಾಸ್ ಗೌಡ ಅವರಿಗೆ ಈಗಾಗಲೇ 36,000ಕ್ಕೂ ಹೆಚ್ಚು ಅಧಿಕ ಸಬ್ ಸ್ಕ್ರೈಬರ್ಸ್ ಇದ್ದು, ಈ ವಿಡಿಯೋಗಳು ಸಾಕಷ್ಟು ವೀಕ್ಷಣೆಯನ್ನು ಕೂಡ ಪಡೆದುಕೊಂಡಿದೆ.

ಸೋನು ಶ್ರೀನಿವಾಸ್ ಗೌಡ ಇತರ ಕಂಪನಿಗಳ ಜೊತೆಗೆ ಕೊಲಾಬ್ರೇಟ್ ಮಾಡಿಕೊಂಡು ಪ್ರಮೋಷನ್ ವಿಡಿಯೋಗಳನ್ನು ಕೂಡ ಮಾಡುತ್ತಾರೆ ಹಾಗಾಗಿ ಸೋಶಿಯಲ್ ಮೀಡಿಯಾದ ಮೂಲಕವೇ ಸೋನು ತಿಂಗಳಿಗೆ ಕೈ ತುಂಬಾ ಹಣ ಗಳಿಸುತ್ತಾರೆ. ಸೋನು ಶ್ರೀನಿವಾಸ್ ಗೌಡ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮಾಡುವುದರ ಮೂಲಕ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...