ಸಾರಿ ಕೇಳಿದ್ರೆ ಸರಿ.. ‘ಬಿಗ್ ಬಾಸ್’ ವಿರುದ್ಧವೇ ರೊಚ್ಚಿಗೆದ್ದ ಸೋನು ಶ್ರೀನಿವಾಸ್ ಗೌಡ!

’ಮೈಕ್ ಸರಿಯಾಗಿ ಧರಿಸಿ’’ ಅಂದಿದ್ದಕ್ಕೆ ಸೋನು ಶ್ರೀನಿವಾಸ್ ಗೌಡ ರೊಚ್ಚಿಗೆದ್ದಿದ್ದಾರೆ. ‘’ನನ್ನ ಹೆಸರು ಹೇಳದೇ ಹೋದರೆ ನಿಮಗೆ ನೆಮ್ಮದಿ ಇಲ್ವಾ?’’ ಅಂತ ‘ಬಿಗ್ ಬಾಸ್’ ವಿರುದ್ಧವೇ ಸೋನು

‘ಬಿಗ್ ಬಾಸ್ ಕನ್ನಡ ಓಟಿಟಿ 1’ ಕಾರ್ಯಕ್ರಮ ಆರಂಭವಾಗಿ ಮೂರು ವಾರಗಳು ಕಳೆದಿವೆ. ಈ ಬಾರಿ ‘ಬಿಗ್ ಬಾಸ್’ ಮನೆಯೊಳಗಿದ್ದು ‘ಬಿಗ್ ಬಾಸ್’‌ಗೆ ಪ್ರಶ್ನೆ ಮಾಡುವ ಸ್ಪರ್ಧಿಗಳು ಇದ್ದಾರೆ. ಮೊನ್ನೆ ಮೊನ್ನೆಯಷ್ಟೇ ಜಯಶ್ರೀ ಆರಾಧ್ಯ ‘ಬಿಗ್ ಬಾಸ್’ ಮೇಲೆ ತಪ್ಪು ಹೊರಿಸಿದ್ದರು. ಈಗ ನೋಡಿದ್ರೆ ಸೋನು ಶ್ರೀನಿವಾಸ್ ಗೌಡ ‘ಬಿಗ್ ಬಾಸ್’ಗೆ ಆವಾಝ್ ಹಾಕಿದ್ದಾರೆ‘’ಮೈಕ್ ಸರಿಯಾಗಿ ಧರಿಸಿ’’ ಅಂದಿದ್ದಕ್ಕೆ ಸೋನು ಶ್ರೀನಿವಾಸ್ ಗೌಡ ರೊಚ್ಚಿಗೆದ್ದಿದ್ದಾರೆ. ‘’ನನ್ನ ಹೆಸರು ಹೇಳದೇ ಹೋದರೆ ನಿಮಗೆ ನೆಮ್ಮದಿ ಇಲ್ವಾ?’’ ಅಂತ ‘ಬಿಗ್ ಬಾಸ್’ ವಿರುದ್ಧವೇ ಸೋನು ಶ್ರೀನಿವಾಸ್ ಗೌಡ ಗುಟುರು ಹಾಕಿದ್ದಾರೆ.

ಅಸಲಿಗೆ ನಡೆದಿದ್ದೇನು?
ಆರ್ಯವರ್ಧನ್ ಗುರೂಜಿ ಬಳಿ ಸೋನು ಶ್ರೀನಿವಾಸ್ ಗೌಡ ಗಾರ್ಡನ್ ಏರಿಯಾದ ಸೋಫಾ ಮೇಲೆ ಕೂತು ಮಾತನಾಡುತ್ತಿದ್ದರು. ಆಗ ಇದ್ದಕ್ಕಿದ್ದಂತೆ ‘’ಸೋನು.. ನಿಮ್ಮ ಮೈಕ್‌ ಅನ್ನು ಸರಿಯಾಗಿ ಧರಿಸಿಕೊಳ್ಳಿ’’ ಎಂದು ‘ಬಿಗ್ ಬಾಸ್’ ಘೋಷಿಸಿದರು. ಇದನ್ನ ಕೇಳಿ ಸೋನು ಶ್ರೀನಿವಾಸ್ ಗೌಡ ಗರಂ ಆದರು.

Sonu Srinivas Gowda: 'ಸುದೀಪ್​ ಇರುವ ವೇದಿಕೆಗೆ ಇದು ಗೌರವ ಅಲ್ಲ': ಸೋನು ಶ್ರೀನಿವಾಸ್​ ಗೌಡ ಆಯ್ಕೆ ಆಗಿದ್ದಕ್ಕೆ ನೆಟ್ಟಿಗರು ಗರಂ | Sonu Srinivas Gowda: Bigg Boss Kannada OTT audience and Kiccha ...

ಸೋನು ಕೆಂಡಾಮಂಡಲ
‘’ಯಾಕೆ ಬಿಗ್ ಬಾಸ್ ನನ್ನ ಮೇಲೆ ಕಣ್ಣು.? ಮೈಕ್ ಇಲ್ಲೇ ಇದ್ಯಲ್ಲ.. ಅಯ್ಯೋ ರಾಮ.. ಸೋನು ಸೋನು ಅಂತ ಹತ್ತು ಸಲಿ ಹೇಳಲಿಲ್ಲ ಅಂದ್ರೆ ನಿಮಗೆ ನೆಮ್ಮದಿನೇ ಇಲ್ಲ ಬಿಡಿ. ಇಲ್ಲೇ ಇದ್ದರೂ, ಮೈಕ್ ಕರೆಕ್ಟ್ ಆಗಿದ್ದರೂ ಸೋನು ಸೋನು ಅಂತೀರಾ. ನನ್ನನ್ನ ತಪ್ಪಾಗಿ ತಿಳಿದುಕೊಳ್ತಾರೆ ಅಷ್ಟೇ ಇಲ್ಲಿ ಎಲ್ಲರೂ. ಸ್ವಲ್ಪ ನೋಡಿಕೊಂಡು ಹೇಳಿ ‘ಬಿಗ್ ಬಾಸ್’. ಯಾರಿಗೋ ಹೇಳೋಕೆ ಹೋಗಿ ನನಗೆ ಹೇಳ್ತೀರಾ ಅಂದುಕೊಳ್ತೀನಿ. ತಪ್ಪು ಮಾಡಿದ್ರೆ ನಾನು ಒಪ್ಪಿಕೊಳ್ತೀನಿ. ತಪ್ಪು ಮಾಡಿಲ್ಲ ಅಂದ್ರೆ ಯಾಕೆ ಸೋನು ಸೋನು ಅಂತ ಹೇಳ್ತಿರ್ತೀರಾ.? ಇಲ್ಲೇ ಇದೆ ತಾನೆ..? ಒಳ್ಳೆ.. ‘ಬಿಗ್ ಬಾಸ್’ ನೀವು ನನಗೆ ಸಾರಿ ಕೇಳೋವರೆಗೂ ನನ್ನ ಕೋಪ ಕಮ್ಮಿ ಆಗಲ್ಲ. ಹೇಳ್ತಿದ್ದೀನಿ ಕೇಳಿ…’’ ಎಂದು ಕೋಪದಿಂದ ಹೇಳಿದರು ಸೋನು ಶ್ರೀನಿವಾಸ್ ಗೌಡ

ಈ ವಾರ ಯಾರೆಲ್ಲಾ ನಾಮಿನೇಟ್ ಆಗಿದ್ದಾರೆ?
‘ಬಿಗ್ ಬಾಸ್’ ಮನೆಯಲ್ಲಿ ಮೂರನೇ ವಾರ ಉದಯ್ ಸೂರ್ಯ, ರೂಪೇಶ್ ಶೆಟ್ಟಿ, ಅಕ್ಷತಾ, ಆರ್ಯವರ್ಧನ್ ಗುರೂಜಿ, ಚೈತ್ರಾ ಹಳ್ಳಿಕೇರಿ, ಜಯಶ್ರೀ ಆರಾಧ್ಯ ಮತ್ತು ಸೋಮಣ್ಣ ಮಾಚಿಮಾಡ ನಾಮಿನೇಟ್ ಆಗಿದ್ದಾರೆ. ಈ ಏಳು ಮಂದಿ ಪೈಕಿ ಈ ವಾರ ‘ಬಿಗ್ ಬಾಸ್’ ಮನೆಯಿಂದ ಔಟ್ ಆಗೋರು ಯಾರು?

ವಾರದ ಕಥೆ ಕಿಚ್ಚನ ಜೊತೆ
ಶನಿವಾರ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಯಾರಿಗೆಲ್ಲಾ ಕ್ಲಾಸ್ ತೆಗೆದುಕೊಳ್ತಾರೆ ಎಂಬುದನ್ನು ಕಾದುನೋಡಬೇಕಿದೆ.

You might also like

Comments are closed.