ಸೋನು-ಗೌಡ

ಸೋನು ಗೌಡ ಮೊದಲ ವಾರವೇ ಬಿಗ್ ಬಾಸ್ ಮನೆಯಿಂದ ಔಟ್..?

CINEMA/ಸಿನಿಮಾ

ಈ ಬಾರಿ ಬಿಗ್ ಬಾಸ್ ಒಟಿಟಿಯಲ್ಲಿ ಪ್ರಾರಂಭವಾಗಿದ್ದು, ವಿಶೇಷವಾಗಿದೆ. ಬಿಗ್ ಬಾಸ್ ಸೀಸನ್ 9 ಶುರುವಾಗಿ ಇನ್ನೂ ವಾರ ಕಳೆದಿಲ್ಲ. ಅದಾಗಲೇ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಆರಂಭವಾಗಿದೆ. ಇದು ಪ್ರೇಕ್ಷಕರ ಜೊತೆಗೆ ಸ್ಪರ್ಧಿಗಳಿಗೂ ಶಾಕ್ ಕೊಟ್ಟಿದೆ. ಇನ್ನು ಬಿಗ್ ಬಾಸ್ ಮನೆಗೆ ಸೋನು ಶ್ರೀನಿವಾಸ್ ಗೌಡ ಎಂಟ್ರಿ ಕೊಟ್ಟ ವಿಚಾರ ತಿಳಿಯುತ್ತಿದ್ದಂತೆಯೇ ಪ್ರೇಕ್ಷಕರು ವಿರೋಧ ವ್ಯಕ್ತ ಪಡಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನಗು, ಖುಷಿ, ಅಳು, ದುಃಖ, ಆಟ, ಮನರಂಜನೆ, ಕಿತ್ತಾಟ ಎಲ್ಲವೂ ಇರುತ್ತದೆ.

42 ದಿನಗಳ ಪ್ರಸಾರವಾಗುವ ಒಟಿಟಿ ಬಿಗ್ ಬಾಸ್ ಶೋನಲ್ಲಿ ಒಟ್ಟಿ 16 ಸ್ಫರ್ಧಿಗಳು ಭಾಗವಹಿಸಿದ್ದಾರೆ. ಆದರೆ ಶೋ ಆರಂಭವಅಗದ ಎರಡೇ ದಿನಕ್ಕೆ ನಾಮಿನೇಶನ್ ಪ್ರಕ್ರಿಯೆ ಆರಂಭವಾಗಿದೆ. ಬರೋಬ್ಬರಿ 7 ಮಂದಿ ನಾಮಿನೇಟ್ ಆಗಿದ್ದಾರೆ. ಅವರಲ್ಲಿ, ಸೋನು ಶ್ರೀನಿವಾಸ್ ಗೌಡ, ಸ್ಪೂರ್ತಿ ಗೌಡ, ಆರ್ಯವರ್ಧನ್ ಗುರೂಜಿ, ಜಯಶ್ರೀ ಆರಾಧ್ಯ, ನಂದಿನಿ ಜಶ್ವಂತ್, ಕಿರಣ್ ಯೋಗೇಶ್ವರ್ ಹಾಗೂ ಅಕ್ಷತಾ ಕುಕಿ ನಾಮಿನೇಟ್ ಆಗಿದ್ದಾರೆ.
Sonu Srinivasa gowda : ಸೋನು ಗೌಡ ಮೊದಲ ವಾರವೇ ಬಿಗ್ ಬಾಸ್ ಮನೆಯಿಂದ ಔಟ್..?
ಈವರೆಲ್ಲಿ ಈ ವಾರದ ಕೊನೆಯಲ್ಲಿ ಯಾರು ಮನೆಯಿಂದ ಹೊರ ಹೋಗುತ್ತಾರೆ ಎಂದು ಕಾದು ನೋಡಬೇಕಿದೆಮನೆಯಲ್ಲಿ ಈಗಾಗಲೇ ಜಗಳ, ಮನಸ್ತಾಪಗಳು ಶುರುವಾಗಿದ್ದು, ಗುಸು ಗುಸು-ಪಿಸು ಪಿಸು ನಡೆಯುತ್ತಿದೆ. ಇನ್ನು ಲಿಪ್‌ ಲಾಕಿಂಗ್ ವೀಡಿಯೋದಿಂದಲೇ ಫೇಮಸ್‌ ಆಗಿರುವ ಸೋನು ಶ್ರೀನಿವಾಸ್‌ ಗೌಡ ನಾಮಿನೇಟ್‌ ಆಗಿದ್ದು, ಪ್ರೇಕ್ಷಕರಿಗೂ ಸೋನು ಬಿಗ್‌ ಬಾಸ್‌ ಮನೆಯಲ್ಲಿ ಇರುವುದು ಇಷ್ಟವಿಲ್ಲ. ಈಗ ನಾಮಿನೇಟ್‌ ಆಗಿರುವುದಕ್ಕೆ ಖುಷಿ ಪಟ್ಟಿದ್ದು, ಬಹುಷಃ ಈ ವಾರದ ಕೊನೆಯಲ್ಲಿ ಸೋನು ಮನೆಯಿಂದ ಹೊರ ಬರಬಹುದು ಎಂದು ಊಹಿಸಲಾಗಿದೆ.


ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.