ಕನ್ನಡ ಕಿರುತೆರೆ ಲೋಕದಲ್ಲಿ ಧಾರಾವಾಹಿಯನ್ನು ಜನ ಎಷ್ಟು ಇಷ್ಟಪಡುತ್ತಾರೋ ಅಷ್ಟೇ ರಿಯಾಲಿಟಿ ಶೋಗಳನ್ನು ಕೂಡ ಇಷ್ಟಪಡುತ್ತಾರೆ. ವಾರಾಂತ್ಯದಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳಿಗಾಗಿ ಕಾದು ಕುಳಿತಿರುತ್ತಾರೆ. ಹೌದು ಕನ್ನಡದಲ್ಲಿ ಒಂದನ್ನೊಂದು ಮೀರಿಸುವಂತಹ ರಿಯಾಲಿಟಿ ಶೋಗಳು ಪ್ರಸಾರವಾಗುತ್ತದೆ. ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕಾಮಿಡಿ ಕಿಲಾಡಿಗಳು, ನಮ್ಮಮ್ಮ ಸೂಪರ್ ಸ್ಟಾರ್ ಮೊದಲಾದ ರಿಯಾಲಿಟಿ ಶೋಗಳು ಜನರಿಗೆ ಹೆಚ್ಚು ಮನರಂಜನೆಯನ್ನು ನೀಡುತ್ತವೆ.
ಹಾಗಾಗಿ ವೀಕೆಂಡ್ ಆದರೆ ಸಾಕು ತಮ್ಮ ಇಷ್ಟದ ರಿಯಾಲಿಟಿ ಶೋ ನೋಡುವುದಕ್ಕೆ ಜನ ಟಿವಿ ಮುಂದೆ ಕುಳಿತುಬಿಡುತ್ತಾರೆ. ಇನ್ನು ರಿಯಾಲಿಟಿ ಶೋಗಳು ಕೇವಲ ಜನರಿಗೆ ಮನರಂಜನೆ ಕೊಡುವುದು ಮಾತ್ರವಲ್ಲ ಸಾಕಷ್ಟು ಪ್ರತಿಭೆಗಳಿಗೆ ತಮ್ಮ ಪ್ರತಿಭೆಯನ್ನು ತೋರಿಸುವುದಕ್ಕೆ ವೇದಿಕೆಯಾಗಿವೆ.
ಇಂದು ಅದೆಷ್ಟೋ ಗಾಯಕರು ಸರಿಗಮಪ ದಂತಹ ರಿಯಾಲಿಟಿ ಶೋ ನಿಂದ ಹುಟ್ಟಿಕೊಂಡಿದ್ದಾರೆ. ಕಾಮಿಡಿ ಶೋಗಳಿಂದ ಹಾಸ್ಯ ಕಲಾವಿದರು ಗುರುತಿಸಿಕೊಂಡಿದ್ದಾರೆ. ಸರಿಗಮಪ ವೇದಿಕೆಯಲ್ಲಿ ಹಲವು ಪುಟಾಣಿ ಮಕ್ಕಳು ಕೂಡ ಸುಶ್ರಾವ್ಯವಾಗಿ ಹಾಡುತ್ತಾ ಜನರನ್ನ ರಂಜಿಸುತ್ತಾರೆ. ಹೌದು, ಜೀ ವಾಹಿನಿಯಲ್ಲಿ 15 ಲಿಟಲ್ ಚಾಂಪ್ಸ್ ಕಂತುಗಳು ಪ್ರಸಾರವಾಗಿವೆ.
ಈ ಬಾರಿಯ ಸರಿಗಮಪ ವೇದಿಕೆಯಲ್ಲಿ ಬಂದಿರುವ ಪುಟಾಣಿಗಳು ಸಾಕಷ್ಟು ಟ್ಯಾಲೆಂಟ್ ಹೊಂದಿದ್ದಾರೆ ಹಾಡುವುದು ಮಾತ್ರವಲ್ಲ ಅದರ ಜೊತೆಗೆ ಅವರಲ್ಲಿ ಇನ್ನಷ್ಟು ಪ್ರತಿಭೆಗಳು ಅಡಗಿವೆ. ಸದ್ಯ ಹೀಗೆ ಎಲ್ಲರ ಗಮನ ಸೆಳೆಯುತ್ತಿರುವ ಪುಟಾಣಿ ಅಂದ್ರೆ ದಿಯಾ ಹೆಗ್ಡೆ. ಇತ್ತೀಚಿಗೆ ದಿಯಾ ಹೆಗಡೆ ಹಾಡುತ್ತಾ ನಿರ್ಣಾಯಕರನ್ನು ಕೂಡ ಹೆಚ್ಚು ಗಮನ ಸೆಳೆಯುತ್ತಿದ್ದಾಳೆ.
ನಾ ಮುದುಕಿ ಆದರೇನಾತಿ ಎನ್ನುವ ಜನಪದ ಹಾಡುವುದನ್ನು ಅತ್ಯದ್ಭುತವಾಗಿ ಹಾಡಿದಳು. ಹಾಡುವಾಗ ಆಕೆಯ ಹಾವ ಭಾವ ನೃತ್ಯ ಎಲ್ಲವೂ ಜನರ ಗಮನ ಸೆಳೆದಿತ್ತು. ಇನ್ನು ಮಾತನಾಡುವುದರಲ್ಲೂ ಆಕೆ ಪಟಾಕಿ. ವೇದಿಕೆ ಮೇಲೆ ಜನರನ್ನ ಸಾಕಷ್ಟು ರಂಜಿಸಿರುವ ದಿಯಾ ಹೆಗಡೆ ಪುಟಾಣಿ ವಂಶೀಕಾಳಂತೆಯೇ ಮತ್ತೊಬ್ಬ ನಿರೂಪಕಿ ಎನಿಸಿಕೊಳ್ಳಲು ಬಹುದು. ಇನ್ನು ಒಂದು ವಾರಕ್ಕೆ ದಿಯಾ ಹೆಗ್ಡೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ?
ಇಷ್ಟು ಚಿಕ್ಕ ಪೋರಿಯಲ್ಲಿ ಎಷ್ಟಪ್ಪ ಪ್ರತಿಭೆ ಇದೆ ಎಂದು ಜಡ್ಜ್ ಗಳು ಉದ್ಗಾರ ತೆಗೆಯುವ ಮಟ್ಟಕ್ಕೆ ಎಲ್ಲರನ್ನೂ ಗಮನ ಸೆಳೆದಿದ್ದಾಳೆ ದಿಯಾ ಹೆಗ್ಡೆ. ದಿಯಾ ಇಂದಾಗಿ ಕಳೆದ ವಾರ ಟಿ ಆರ್ ಪಿ ಕೂಡ ಸಿಕ್ಕಾಪಟ್ಟೆ ಹೆಚ್ಚಾಗಿತ್ತು. ಅದೇ ರೀತಿ ಅವರ ಸಂಭಾವನೆ ಕೂಡ ಹೆಚ್ಚಾಗಿದೆ ಎನ್ನುವ ಮಾಹಿತಿ ಇದೆ. ಹೌದು ದಿಯಾ ಹೆಗ್ಡೆ ಅವರಿಗೆ ವಾರಕ್ಕೆ 20 ಸಾವಿರ ಸಂಭಾವನೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ದಿಯಾ ಹೆಗ್ಡೆ ಇದೇ ರೀತಿ ಜನರನ್ನ ರಂಜಿಸ್ತಾ ಇದ್ರೆ ಅವರು ಕನ್ನಡದ ಮನೆ ಮಗಳು ಎನಿಸುವುದರಲ್ಲಿ ನೋ ಡೌಟ್. ಸ್ನೇಹಿತರೆ ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.