ಜನ ಮರುಳೋ ಜಾತ್ರೆ ಮರುಳೋ ಎನ್ನುವ ಮಾತಿದೆ ಅಲ್ವಾ. ಹಾಗೆ ಕೆಲವು ಜನರಿಗೆ ತಾವು ಏನು ಮಾಡುತ್ತಿದ್ದೇನೆ ಅನ್ನೋದು ಅರ್ಥವೇ ಆಗುವುದಿಲ್ಲ ಎನಿಸುತ್ತೆ. ಯಾಕೆಂದರೆ ನಾವು ಸಂಬಂಧ ಬೆಳೆಸಬೇಕಾಗಿದ್ದು ಮನುಷ್ಯರ ಜೊತೆಗೆ ಆದರೆ ವಿಷಯ ಜಂತುಗಳ ಜೊತೆ ಹೋದರೆ ಅದು ಸುಮ್ಮನೆ ಬಿಟ್ಟಿತೇ? ಹೌದು ಜನ ತಾವು ಏನು ಮಾಡಬೇಕು ಅನ್ನೋದನ್ನ ಮರೆತು ಬೇಡವಾದ ವಿಷಯಗಳಿಗೆ ತಲೆ ಹಾಕಿದ್ರೆ ಹೀಗೆ ಆಗೋದು. ವಿಶ್ವ ಚಂತುವಿಗೆ ಮುತ್ತಿಡುವುದಕ್ಕೆ ಹೋಗಿ ಕೊನೆಗೆ ಈ ವ್ಯಕ್ತಿಯ ಗತಿ ಏನಾಗಿದೆ ಗೊತ್ತಾ ಬನ್ನಿ ಒಂದು ಇಂಟರೆಸ್ಟಿಂಗ್ ಕಥೆ ಹೇಳ್ತೀವಿ.
ಹೌದು, ಇತ್ತೀಚಿಗೆ ಸ್ನೇಕ್ ಮಾಸ್ಟರ್ ನಜೀರ್ ಎನ್ನುವ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ಒಂದು ಅಪ್ಲೋಡ್ ಆಗಿತ್ತು. ಬಹುಶಃ ಅದು ಹಾವು ಹಿಡಿಯುವುದರಲ್ಲಿ ನಿಸ್ಸೀಮನು ಇರಬಹುದು. ಆದರೂ ನಾವು ಪ್ರಾಣಿ ಪಕ್ಷಿಗಳ ವಿಷಯದಲ್ಲಿ ಎಷ್ಟು ಜಾಗೃತೆ ವಹಿಸಿದ್ದರು ಸಾಕಾಗುವುದಿಲ್ಲ. ಉದಾಹರಣೆಗೆ ನಾಯಿಯನ್ನು ಬಹಳ ಪ್ರೀತಿಯಿಂದ ಸಾಕುತ್ತಾರೆ.
ಆದರೆ ಅದೇ ನಾಯಿ ಮನೆ ಮಾಲೀಕರಿಗೆ ಕಚ್ಚಿದ ಘಟನೆಗಳು ಅದೆಷ್ಟೋ ನಡೆದಿವೆ. ಪ್ರಾಣಿಗೆ ಮಾನವನ ರಕ್ತದ ರುಚಿ ಒಮ್ಮೆ ನೋಡಿದ್ರೆ ಮತ್ತೆ ಅದು ಬೇಕು ಎನಿಸುತ್ತೆ ಎಂದು ಹೇಳಲಾಗುತ್ತೆ. ಹಾಗಾಗಿ ಮಾನವನ ರಕ್ತದ ರುಚಿ ನೋಡಿದ ಪ್ರಾಣಿಗಳು ಸುಲಭವಾಗಿ ಬಿಡುವುದಿಲ್ಲ. ಅಷ್ಟೇ ಅಲ್ಲ ಸ್ನೇಹಿತರೆ ಸುಮ್ಮನೆ ತಮ್ಮ ಪಾಡಿಗೆ ತಾವು ಇದ್ದ ಪ್ರಾಣಿಗಳನ್ನು ಕೆಣಕೋದಕ್ಕೆ ಹೋಗಿ ಅವರಿಂದ ಅಪಾಯ ಎದುರಿಸಿದ ಜನರು ಸಾಕಷ್ಟು.
ಹೌದು ಪ್ರಾಣಿಗಳ ವಿಷಯದಲ್ಲಿ ತುಂಬಾನೇ ಜಾಗೃತಿ ವಹಿಸಬೇಕು. ಅದರಲ್ಲೂ ಸರ್ಪ ಅಥವಾ ನಾಗರಹಾವು ವಿಷ ಜಂತು ಎನ್ನುವುದು ಎಲ್ಲರಿಗೂ ಗೊತ್ತು ಹಾಗಂದ ಮಾತ್ರಕ್ಕೆ ಹಾವೂ ಕೂಡ ಸುಮ್ಮನೆ ಯಾರಿಗೂ ಕಡಿಯುವುದಕ್ಕೆ ಹೋಗೋದಿಲ್ಲ ಅದಕ್ಕೆ ಅಪಾಯವಾದಾಗ ಅಥವಾ ನಾವೇನಾದರೂ ಭಯ ಉಂಟು ಮಾಡಿದಾಗ ಅದು ಮೈಮೇಲೆ ಎರಗೊದೂ ಸಹಜ.
ಇಲ್ಲೊಬ್ಬ ಭೂಪ ಹಾವನ್ನ ಕೈಯಲ್ಲಿ ಹಿಡಿದು ಅದಕ್ಕೆ ಮುತ್ತು ಕೊಡಲು ಹೋಗಿದ್ದಾನೆ. ಆ ಹಾವು ತಟ್ಟನೆ ಹಿಂದಕ್ಕೆ ಕುತ್ತಿಗೆ ತಿರುಗಿಸಿ ಪಟ್ ಅಂತ ಕಚ್ಚಿದೆ. ತಕ್ಷಣವೇ ಕೈಯಲ್ಲಿದ್ದ ಹಾವನ್ನ ಬಿಟ್ಟು ತನಗೆ ಏನಾಯಿತು ಎನ್ನುವ ಗೊಂದಲದಲ್ಲಿ ಇದ್ರೆ ಇನ್ನೊಬ್ಬ ಆ ಹಾವನ್ನು ಮತ್ತೆ ಹಿಡಿಯಲು ಹೊರಟಿದ್ದಾನೆ. ಆಗಲು ಆ ಹಾವು ಕಚ್ಚೋದನ್ನ ನಿಲ್ಲಿಸಿಲ್ಲ. ಹೌದು, ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.
30 ಸೆಕೆಂಡು ಈ ವಿಡಿಯೋ ಯೂಟ್ಯೂಬ್ ನಲ್ಲಿ ಅಪ್ಲೋಡ್ ಆಗಿದ್ದು ಸಾಕಷ್ಟು ವೀಕ್ಷಣೆಯನ್ನು ಪಡೆದುಕೊಂಡಿದೆ. ಅಂದಹಾಗೆ ಈ ವಿಡಿಯೋ ಸ್ನೇಕ್ ಮಾಸ್ಟರ್ ಸಜೀರ್ ಎನ್ನುವವವ್ರ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಆಗಿದೆ. ಇವರು ವಿಷ ಜಂತುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡುವ ಕೆಲಸವನ್ನು ಮಾಡುತ್ತಾರೆ.
ಇನ್ನು ಈ ವಿಡಿಯೋಗೆ ಮಾತ್ರ ಸಾಕಷ್ಟು ಕಮೆಂಟ್ ಗಳು ಬಂದಿದ್ದು ಜನರು ಹಾವು ಹಿಡಿಯಲು ಹೋದ ವ್ಯಕ್ತಿ ಜೊತೆಗೆ ಹಾವಿಗೆ ಮುತ್ತಿಕ್ಕಲು ಹೋದ ವ್ಯಕ್ತಿಗೆ ಚೆನ್ನಾಗಿ ಬೈದಿದ್ದಾರೆ. ವಿಷ ಜಂತು ಜೊತೆಗೆ ಸರಸ ಆಡೋದಕ್ಕೆ ಹೋದರೆ ಹೀಗೆ ಆಗೋದು ಆ ವ್ಯಕ್ತಿಗೆ ಸರಿಯಾಗಿ ಆಗಿದೆ ಅಂತ ಕಮೆಂಟ್ ಮಾಡಿದ್ದಾರೆ. ಸ್ನೇಹಿತರೆ ಈ ವಿಡಿಯೋ ನೋಡಿ ನಿಮಗೆ ಏನನ್ನಿಸಿತು ನಮಗೆ ತಪ್ಪದೆ ಕಮೆಂಟ್ ಮಾಡಿ ತಿಳಿಸಿ.