ಪ್ರಕೃತಿಯಲ್ಲಿ ಕಾಣಸಿಗುವ ಕೆಲವೊಂದು ದೃಶ್ಯಗಳು ನಿಜಕ್ಕೂ ಅಚ್ಚರಿ ಮತ್ತು ದಿಗ್ಭ್ರಮೆ ಮೂಡಿಸುತ್ತದೆ. ಸಾಕಷ್ಟು ಸಂದರ್ಭದಲ್ಲಿ ಇಂತಹ ದೃಶ್ಯಗಳು ನಮ್ಮನ್ನು ಎದುರುಗೊಳ್ಳುತ್ತವೆ. ಇವುಗಳಲ್ಲಿ ಕೆಲವು ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗುತ್ತಿರುತ್ತದೆ. ಇದೀಗ ಇಂತಹದ್ದೇ ಇನ್ನೊಂದು ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯ ನೆಟ್ಟಿಗರನ್ನು ಮಾತ್ರ ಅಲ್ಲ, ವಿಜ್ಞಾನಿಗಳನ್ನೂ ಒಂದು ಕ್ಷಣ ಚಕಿತಗೊಳ್ಳುವಂತೆ ಮಾಡಿದೆ.
ಇದು ದೈತ್ಯ ಆಮೆಯೊಂದು ಹಕ್ಕಿಯನ್ನು ಬೇಟೆಯಾಡಿ ತಿನ್ನುವ ದೃಶ್ಯ. ಈ ದೃಶ್ಯ ಸಹಜವಾಗಿಯೇ ವಿಜ್ಞಾನಿಗಳಲ್ಲೂ ಕುತೂಹಲ ಮೂಡಿಸಿದೆ. ಸಸ್ಯಾಹಾರಿ ಎಂದು ತಿಳಿದುಕೊಂಡಿದ್ದ ಆಮೆ ಬೇಟೆಯಾಡುವ ಈ ದೃಶ್ಯ ಈಗ ಎಲ್ಲರ ಕುತೂಹಲಕ್ಕೂ ಕಾರಣವಾಗಿದೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ದೃಶ್ಯ ಇದು. ಹೊಂಚು ಹಾಕುತ್ತಾ ಹಕ್ಕಿಯ ಹಿಂದೆ ಹಿಂದೆಯೇ ಆಮೆ ಬರುವ ದೃಶ್ಯದ ಮೂಲಕ ಈ 1 ನಿಮಿಷ 53 ಸೆಕೆಂಡುಗಳ ಈ ವಿಡಿಯೋ ಕ್ಲಿಪ್ ಶುರುವಾಗುತ್ತದೆ. ಹಕ್ಕಿ ಕೂಡಾ ಯಾವುದೇ ಭಯ ಇಲ್ಲದೆ ಆಮೆಯ ಪಕ್ಕ ಇರುತ್ತದೆ. ಆದರೆ, ಒಂದು ಹಂತದಲ್ಲಿ ಗಬಕ್ಕನೆ ಬಾಯಿ ಹಾಕುವ ಆಮೆ ಹಕ್ಕಿಯ ಜೀವ ತೆಗೆಯುತ್ತದೆ. `ಸಂಶೋಧಕರು ಅನಿರೀಕ್ಷಿತ ಸನ್ನಿವೇಶವನ್ನು ಸೆರೆಹಿಡಿದಿದ್ದಾರೆ.
ಸಸ್ಯಾಹಾರಿ ಎಂದು ತಿಳಿದುಕೊಂಡಿದ್ದ ಬೃಹತ್ ಆಮೆ ಕಡಲ ಹಕ್ಕಿಯೊಂದರ ಮೇಲೆ ದಾಳಿ ಮಾಡಿ ತಿಂದಿದೆ’ ಎಂದು ಕ್ಯಾಪ್ಶನ್‌ನಲ್ಲಿ ಉಲ್ಲೇಖಿಸಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಬಗ್ಗೆ ವಿವಿ ತನ್ನ ಬ್ಲಾಗ್‌ನಲ್ಲಿ ಇನ್ನಷ್ಟು ಮಾಹಿತಿಯನ್ನು ಹಂಚಿಕೊಂಡಿದೆ. ಜತೆಗೆ, ಇದೇ ಮೊದಲ ಬಾರಿಗೆ ಆಮೆ ಬೇಟೆಯಾಡುವ ಇಂತಹ ದೃಶ್ಯವನ್ನು ಸೆರೆ ಹಿಡಿಯಲಾಗಿದೆ ಎಂದು ಇಲ್ಲಿ ಉಲ್ಲೇಖಿಸಲಾಗಿದೆ. ಅದೇ ರೀತಿ ಇನ್ನೊಂದು ದೃಶ್ಯದಲ್ಲಿ ಆಮೆ ನೀರಿನಲ್ಲಿರುವ ಬಾತುಕೋಳಿ ಮರಿಯನ್ನು ಹಿಡಿದು ತಿಂದಿದ್ದು ಅಲ್ಲಿ ತಾಯಿ ಬಾತು ಕೋಳಿ ಇದ್ದರೂ ಏನುಮಾಡಲಾಗಲಿಲ್ಲ.
ಅದೇ ರೀತಿ ಸಿಂಹ,ನಾಯಿಯ, ಕುದುರೆ ಮೇಲೂ ಎರಗಿದೆ. ಹಾವುಗಳು ಸಾಮಾನ್ಯವಾಗಿ ಕಪ್ಪೆ, ಪಕ್ಷಿ, ಅಳಿಲುಗಳಂತಹ ಸಣ್ಣ ಜೀವಿಗಳನ್ನು ಬೇಟೆಯಾಡುತ್ತವೆ. ಆದರೆ ಅವುಗಳಿಗೆ ದೀರ್ಘಕಾಲದವರೆಗೆ ಆಹಾರ ಸಿಗದಿದ್ದಾಗ ಅವುಗಳ ತಮ್ಮ ಮಿತಿಯನ್ನು ದಾಟುತ್ತವೆ. ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೊಂದು ಅಪರೂಪದ ಹೋರಾಟ, ಜನರು ಇದನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ.
ವೈರಲ್ ಆಗಿರುವ ವಿಡಿಯೋ ಎಲ್ಲಿಂದ ಬಂದಿದೆ ಎಂಬುದು ತಿಳಿದಿಲ್ಲ. ಆದರೆ ಜನರು ಅದನ್ನು ತುಂಬಾ ಇಷ್ಟಪಟ್ಟಿದ್ದಾರೆ. ಇದರಲ್ಲಿ ಒಂದು ಆಮೆ ತನ್ನ ತಂಪಾದ ಚಲನೆಯಲ್ಲಿ ಹೋಗುತ್ತಿತ್ತು. ಆಗ ಒಂದು ನಾಗರಹಾವು ಅಲ್ಲಿಗೆ ತಲುಪಿದೆ. ತುಂಬಾ ಹಸಿದ ಹಾವು ಬೇಟೆಗಾಗಿ ಸುತ್ತಲೂ ನೋಡಿತು. ಆದರೆ ಏನೂ ಸಿಗಲಿಲ್ಲ. ಇದಾದ ಬಳಿಕ ಅಲ್ಲಿದ್ದ ಆಮೆಯ ಮೇಲೆ ಕಣ್ಣು ಬಿದ್ದು ಅದನ್ನು ಬೇಟೆಯಾಡಲು ಯೋಜನೆ ರೂಪಿಸಿದೆ. ಏಕಾಏಕಿ ಹಾವು ಆಮೆ ಮೇಲೆ ದಾಳಿ ಮಾಡಿದೆ. ಆಗ ಹಾವಿನ ತಲೆ ಆಮೆಯ ಕುತ್ತಿಗೆ ಭಾಗದಲ್ಲಿ ಸಿಕ್ಕಿಕೊಂಡಿತು. ಹಾವು ದಾಳಿ ಮಾಡಿ ಹೊರಟು ಹೋಗುವ ಸಂಚು ಇಲ್ಲಿ ಹುಸಿಯಾಯಿತು. ನಾಗರಹಾವು ಎಲ್ಲಾ ರೀತಿ ಪ್ರಯತ್ನ ಮಾಡಿದರೂ ತನ್ನ ಕುತ್ತಿಯನ್ನು ಆಮೆಯಿಂದ ಬಿಡಿಸಿಕೊಳ್ಳಲು ಆಗಲಿಲ್ಲ. ಕೊನೆಗೆ ನಡೆದದ್ದು ಆಶ್ಚರ್ಯಕರವಾಗಿತ್ತು.
ಹಾವು ಪ್ರವೇಶಿಸಿದ ಕೂಡಲೇ ಆಮೆ ಮಗುಚಿ ಬಿದ್ದಿದೆ. ನಂತರ ಹಾವನ್ನು ಬಾಯಿಂದ ಹಿಡಿದುಕೊಂಡಿದೆ. ಇದರಿಂದ ಹಾವು ಗೋಳಾಡತೊಡಗಿತು. ಹಾವು ಸಾಕಷ್ಟು ಪ್ರಯತ್ನ ಪಟ್ಟರೂ ಚರ್ಮದ ಒಳಗಿನಿಂದ ಹೊರಬರಲು ಸಾಧ್ಯವಾಗಲಿಲ್ಲ. ಬಹಳ ಪ್ರಯತ್ನದ ನಂತರ, ಆಮೆಯ ಹಿಡಿತದಿಂದ ಬಿಡುಗಡೆಯಾಯಿತು. ಬಳಿಕ ಅಲ್ಲಿಂದ ವೇಗವಾಗಿ ಹೋಗಿದೆ. ಆಮೆ ಸರ್ವಭಕ್ಷಕ ಅಂದರೆ ಅದು ಹಣ್ಣುಗಳು ತರಕಾರಿಗಳು ಇತ್ಯಾದಿಗಳನ್ನು ತಿನ್ನುತ್ತದೆ. ಅದರ ಮೇಲಿನ ಚರ್ಮವು 60 ವಿಧದ ಮೂಳೆಗಳಿಂದ ಮಾಡಲ್ಪಟ್ಟಿದೆ. ಹೀಗಾಗಿ ಅದರ ಮೇಲೆ ಟ್ರಕ್ ಹೋದರೂ ಅವರಿಗೆ ಏನೂ ಆಗುವುದಿಲ್ಲ ಎಂಬಷ್ಟು ಪ್ರಬಲವಾಗಿದೆ.