ನದಿಯಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ವಿಷಪೂರಿತ ಹಾವು…ನೆನೆಸಿಕೊಂಡರೂ ಎದೆ ನಡುಗುತ್ತದೆ…

Today News / ಕನ್ನಡ ಸುದ್ದಿಗಳು

Snake Viral Video: ನದಿಯಲ್ಲಿ ಕಾಲು ಬಿಟ್ಟು ಕುಳಿತು ಮೊಬೈಲ್ ನೋಡುತ್ತಿದ್ದ ಯುವಕನ ಬಳಿ ಇದ್ದಕ್ಕಿದ್ದಂತೆ ವಿಷಪೂರಿತ ಹಾವು ಕಾಣಿಸಿಕೊಂಡರೆ ಹೇಗಿರುತ್ತೇ… ಅಬ್ಬಬ್ಬಾ ಅದನ್ನು ನೆನೆಸಿಕೊಂಡರೂ ಎದೆ ನಡುಗುತ್ತದೆ…

ಹಾವಿನ ವೈರಲ್ ವಿಡಿಯೋ: ಹಾವು ಎಂದರೆ ಎಂತಹವರಿಗೂ ಭಯ ಇದ್ದೇ ಇರುತ್ತದೆ. ಹೆಚ್ಚಿನ ಜಾತಿಯ ಹಾವುಗಳು ವಿಷಕಾರಿ ಆಗಿರುವುದೇ ಇದಕ್ಕೆ ಪ್ರಮುಖ ಕಾರಣ. ಕೆಲವರು ಕನಸಿನಲ್ಲಿ ಹಾವನ್ನು ಕಂಡರೂ ಸಹ ಬೆಚ್ಚಿ ಬೀಳುತ್ತಾರೆ. ಹೀಗಿರುವಾಗ ನದಿಯಲ್ಲಿ ಕಾಲು ಬಿಟ್ಟು ಕುಳಿತು ಮೊಬೈಲ್ ನಲ್ಲಿ ಮುಳುಗಿದ್ದವರ ಮುಂದೆ ಏಕಾಏಕಿ ವಿಷಪೂರಿತ ಹಾವು ಹರಿದು ಬಂದರೆ ಹೇಗಿರುತ್ತೇ… ಅಬ್ಬಬ್ಬಾ… ಇದನ್ನು ಊಹಿಸಿಕೊಂಡರೂ ಎದೆ ಝಲ್ ಎಂದೆನಿಸುತ್ತದೆ.  ಇದೀಗ ಅಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಹೌದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಕೆಲವರು ನದಿಯಲ್ಲಿ ಈಜುತ್ತಿರುವುದನ್ನು ಕಾಣಬಹುದು. ಇದೇ ವೇಳೆ ಯುವಕನೊಬ್ಬ ನದಿ ಮಧ್ಯೆಯಲ್ಲಿ ಮೊಬೈಲ್ ನೋಡುತ್ತಾ ಕುಳಿತಿರುವುದನ್ನು ಕಾಣಬಹುದು. ಅಷ್ಟರಲ್ಲಿ ಉದ್ದನೆಯ ಹಾವೊಂದು ಆತನ ಕಡೆಗೆ ಚಲಿಸುತ್ತದೆ. ಹಾವು ತನ್ನೆಡೆ ಬರುತ್ತಿರುವುದನ್ನು ಗಮನಿಸಿದ ಆತ ಗಾಬರಿಯಿಂದ ತಕ್ಷಣವೇ ಅಲ್ಲಿಂದ ಎದ್ದು ಹೊರಡುತ್ತಾನೆ. ಆಗ ಹಾವು ಮಾಡಿದ್ದೇನು ಗೊತ್ತಾ…

ಈ ವಿಡಿಯೋ ನೋಡಿ…ವಾಸ್ತವವಾಗಿ, ಆ ಯುವಕನು ಹಾವನ್ನು ಕಂಡು ಅಲ್ಲಿಂದ ಎದ್ದು ನದಿಯಿಂದ ಹೊರ ಬರುತ್ತಾನೆ. ಆದರೆ, ಆತನ ಬೆಂಬಿಡದ ಹಾವು ಆತನನ್ನೇ ಅರಸಿ ಬಂದಂತೆ ಅವನ ಹಿಂದೆಯೇ ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು. ಅವನು ಎಲ್ಲಿಗೆ ಹೋದರೂ ಹಾವು ಅವನನ್ನು ಹಿಂಬಾಲಿಸುತ್ತದೆ. ಹಾವನ್ನು ಕಂಡು ಅಲ್ಲಿದ್ದವರೆಲ್ಲ ಹೆದರುತ್ತಾರೆ. 

 

https://zeenews.india.com/kannada/viral/a-poisonous-snake-suddenly-appears-in-river-see-what-happend-next-77764

 

View this post on Instagram

 

A post shared by Wildistic ™ (@wildistic)

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.