ನಿದ್ರೆಯಲ್ಲಿ ಯಾರೊ ನಿಮ್ಮ ಎದೆ ಮೇಲೆ ಕೂತಂತೆ ಆಗುತ್ತಾ ಮೇಲಿಂದ ಬಿದ್ದಂತೆ ಆಗುತ್ತಾ ನಿದ್ರೆಯಲ್ಲಿ ಮಾತಾಡ್ತೀರಾ ಆಗಿದ್ರೆ ಮೊದಲು ಈ ವಿಷಯ ತಿಳ್ಕೋಳಿ

ನೀವು ನಿದ್ರೆ ಮಾಡುವಾಗ ಈ ರೀತಿ ನಿಮಗೂ ಆಗುತ್ತೆ ಅಂದ್ರೆ ನೀವೆಲ್ಲರೂ ಈ ವಿಷಯವನ್ನು ತಿಳಿದುಕೊಳ್ಳಲೇಬೇಕು.ಪ್ರತಿಯೊಬ್ಬರೂ ನಿದ್ರಿಸುವಾಗ ಏನು ನಡೆಯುತ್ತದೆ ಎಂದು ನೀವು ಯಾವತ್ತಾದರೂ ಯೋಚಿಸಿದ್ದೀರಾ ದೇಹದ ಅವಯವಗಳು ವಿಶ್ರಾಂತಿಯಲ್ಲಿ ಇರುತ್ತದೆ ಮುಖ್ಯವಾಗಿ ಈ ಸಮಯದಲ್ಲಿ ನಮ್ಮ ತಲೆ ಕೂದಲು ಹೆಚ್ಚಾಗಿ ಉದುರುತ್ತವೆ ಎಂದು ಹಲವಾರು ಜನ ಹೇಳುತ್ತಾರೆ ಇದೇ ಕಾರಣಕ್ಕಾಗಿ ಸೆಲೆಬ್ರಿಟಿಗಳು ದೊಡ್ಡ ಸ್ಟಾರ್ ನಟರು ತಮ್ಮ ಸೌಂದರ್ಯ ಹಾಗೂ ತ್ವಚೆಯ ಕಾಂತಿಯ ರಹಸ್ಯ ಉತ್ತಮ ನಿದ್ರೆ ಎಂದು ಆಗಾಗ ಹೇಳುತ್ತಲೇ ಇರುತ್ತಾರೆ ನಿದ್ರೆ ಮಾಡುವಾಗ ಇದೊಂದೇ ಅಲ್ಲ ಇನ್ನು ಅನೇಕ ಅದ್ಭುತ ಹಾಗೂ ಅಚ್ಚರಿದಾಯಕ ಸಂಗತಿಗಳು ಜರುಗುತ್ತವೆ.

ನೀವು ಮಲಗಿದ್ದಾಗ ಕೆಳಗೆ ಯಾವುದೋ ಒಂದು ದೊಡ್ಡ ಪ್ರಪಾತಕ್ಕೆ ಬಿದ್ದಂತೆ ಅಥವಾ ಅರ್ಧ ರಾತ್ರಿಯ ಸಮಯದಲ್ಲಿ ನಿಮ್ಮ ಎದೆಯ ಮೇಲೆ ಯಾರಾದರೂ ಬಲವಾಗಿ ಕುಳಿತುಕೊಂಡ ಹಾಗೆ ಇಂತಹ ಸಮಯ ದಲ್ಲಿ ನೀವು ಕೂಗಬೇಕು ಎಂದು ಎಷ್ಟೇ ಪ್ರಯತ್ನವನ್ನು ಪಟ್ಟರು ಕೂಡ ನಿಮ್ಮ ಬಾಯಿಯಿಂದ ಒಂದೇ ಒಂದು ಮಾತು ಕೂಡ ಹೊರಡುವುದಿಲ್ಲ ಹಾಗಾಗಿ ಪ್ರತಿಯೊಬ್ಬರೂ ಕೂಡ ನಿದ್ರೆ ಮಾಡುವಂತಹ ಸಮಯದಲ್ಲಿ ಈ ರೀತಿಯಾದಂತಹ ಹಲವಾರು ಅಚ್ಚರಿಗಳನ್ನು ಎದುರಿಸುತ್ತಿರುತ್ತೀರಾ ಹಾಗಾದರೆ ಅಂತಹ ವಿಷಯಗಳು ಯಾವುವು ಎಂಬುದನ್ನು ಈ ಕೆಳಗಿನಂತೆ ತಿಳಿಯುತ್ತಾ ಹೋಗೋಣ.ಮೊದಲನೆಯದಾಗಿ ನೀವು ಮಲಗಿದ್ದಂತಹ ವೇಳೆ ಯಲ್ಲಿ

ಒಂದು ದೊಡ್ಡ ಪ್ರಪಾತಕ್ಕೆ ಬಿದ್ದಂತೆ ಅನುಭವ ವಾಗುತ್ತದೆ ಹೀಗೆ ಕಾಣುವುದು ಸಹಜ ಕೇವಲ ನಿಮ್ಮೊಬ್ಬರಿಗೆ ಮಾತ್ರ ಹೀಗೆ ಆಗುತ್ತಿದೆ ಎಂದುಕೊಳ್ಳು ವುದು ತಪ್ಪು ಬದಲಾಗಿ ಇಂತಹ ಘಟನೆಗಳು ಪ್ರತಿಯೊಬ್ಬರಿಗೂ ಕೂಡ ಎದುರಾಗುತ್ತಿರುತ್ತದೆ ಕೆಲವ ರಿಗೆ ಈ ರೀತಿ ಅನುಭವ ಆದರೆ ತಾವು ಮಲಗಿದ್ದಂತಹ ಸ್ಥಳದಲ್ಲಿಯೇ ಒದ್ದಾಡುತ್ತಿರುತ್ತಾರೆ ಇನ್ನು ಕೆಲವರು ನಿದ್ರೆ ಮಾಡುತ್ತಿದ್ದಂತೆ ತಕ್ಷಣ ಎದ್ದು ಕುಳಿತುಕೊಳ್ಳುತ್ತಾರೆ ಇದು ಯಾವುದೇ ರೀತಿಯಾದಂತಹ ದೈಹಿಕ ಹಾಗೂ ಮಾನಸಿಕ ರೋಗದ ಲಕ್ಷಣವಲ್ಲ ಬದಲಾಗಿ ಅತಿಯಾದ ಕೆಲಸದ ಒತ್ತಡ ಹಾಗೂ ಸ್ಟ್ರೆಸ್ ನಿಂದ ಆಗುವಂತಹ ಅವಸ್ತೆಯಾಗಿದೆ. ಅನೇಕ ಜನರು ಮಲಗುವ ಸಮಯದಲ್ಲಿ ಮೊಬೈಲ್ ಅನ್ನು ಮತ್ತು ಸಿಸ್ಟಮ್ ಅನ್ನು ಬಳಸುತ್ತಲೇ ಇರುತ್ತಾರೆ.ಮತ್ತು ಬೆಳಗಿನ ಸಮಯದಲ್ಲಿಯೂ ಕೂಡ ಹೆಚ್ಚಿನ ಮೊಬೈಲ್ ಮತ್ತು ಸಿಸ್ಟಮ್ ಗಳನ್ನು ಬಳಸುತ್ತಿರುವ ವರಿಗೆ ಅಂತವರಿಗೆ ಇಂತಹ ಅನುಭವ ಆಗುವುದು

ಸಹಜ ಇದು ಆ ಬೆಳಕಿನ ಪ್ರತಿಫಲವನ್ನು ಮೆದುಳಿನಲ್ಲಿ ರೆಕಾರ್ಡ್ ಮಾಡಿಕೊಂಡು ಮಲಗಿದಾಗ ಆ ಅನುಭವ ವನ್ನು ನಮಗೆ ಮೂಡಿಸುತ್ತದೆ ಆದ್ದರಿಂದ ಹೆಚ್ಚಾಗಿ ಮೊಬೈಲ್ ಮತ್ತು ಸಿಸ್ಟಮ್ ಗಳನ್ನು ಬಳಸುವವರಿಗೆ ಇಂತಹ ಅನುಭವ ಆಗುವುದು ಖಂಡಿತ. ಮಲಗಿದಂತಹ ಸಮಯದಲ್ಲಿ ನಮ್ಮ ಮೆದುಳಿಗೆ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಬೇಕಾಗಿರುತ್ತದೆ ಇದರಿಂದ ನಮ್ಮ ದೇಹದಲ್ಲಿ ಹೆಚ್ಚಿನದಾಗಿ ರಕ್ತ ಸಂಚಾರ ಆಗುತ್ತದೆ ಆದ್ದರಿಂದ ಮಲಗುವ ಸಮಯದಲ್ಲಿ ಯಾವುದೇ ರೀತಿಯಾದಂತಹ ಸ್ಟ್ರೆಸ್ ಅನ್ನು ಇಟ್ಟು ಕೊಂಡು ಮಲಗಬಾರದು ಬದಲಾಗಿ ನೆಮ್ಮದಿಯಿಂದ ನಿದ್ದೆ ಮಾಡುವುದು ಮುಖ್ಯ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

You might also like

Comments are closed.