ಬದುಕಿನ ಬಂಡಿ ಸಾಗಿಸಲು ನೂರಾರು ದಾರಿಗಳು.. ಊರು ಬಿಟ್ಟು ಊರಿಗೆ ಬಂದು ಜೀವನ ಸಾಗಿಸುವ ಅದೆಷ್ಟೋ ಮಂದಿ ಇದ್ದಾರೆ.. ಅದರಲ್ಲೂ ಹಳ್ಳಿಗಳಿಂದ ಪಟ್ಟಣಕ್ಕೆ ಬಂದು ಬದುಕು ಕಟ್ಟಿಕೊಂಡು ಗೌರವಯುತವಾಗಿ ಜೀವನ ಸಾಗಿಸುವವರು ಇದ್ದಾರೆ.. ಮತ್ತಷ್ಟು ಮಂದಿ ಜೀವನ ಕಟ್ಟಿಕೊಳ್ಳಲು ಬೇರೆ ದಾರಿ ಹಿಡಿದು ಜೀವನದಲ್ಲಿ ದಾರಿ ತಪ್ಪಿದವರೂ ಸಹ ಇದ್ದಾರೆ.. ಆದರೆ ಇಲ್ಲೊಂದು ಅಕ್ಕ ತಂಗಿ ಊರಿಂದ ಊರಿಗೆ ಬಂದು ಗಾರ್ಮೆಂಟ್ಸ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡು ಗೌರವಯುತವಾಗಿ ತಮ್ಮ ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದರು.. ಆದರೆ ಇದೀಗ ಐದಾರು ದಿನಗಳಾದರೂ ಸಹ ಮನೆ ಬಾಗಿಲು ತೆರೆಯದೆ ಅವರು ಸಿಕ್ಕಿರುವ ಸ್ಥಿತಿ ನಿಜಕ್ಕೂ ಮನಕಲಕುವಂತಿದೆ..

ಹೌದು ಈ ಘಟನೆ ದಾವಣಗೆರೆಯ ಹೊರವಲಯದಲ್ಲಿ ನಡೆದಿದೆ. ಇವರ ಹೆಸರು ಗೌರಮ್ಮ ವಯಸ್ಸಿನ್ನೂ ಮೂವತ್ತ ನಾಲ್ಕು ಮತ್ತೊಬ್ಬರು ಅವರ ತಂಗಿಯ ಹೆಸರು ರಾಧಮ್ಮ ವಯಸ್ಸು ಮೂವತ್ತೆರೆಡು ವರ್ಷ.. ಇವರು ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ನಿವಾಸಿಗಳು.. ತಮ್ಮ ಜೀವನವನ್ನು ಕಟ್ಟಿಕೊಳ್ಳುವ ಸಲುವಾಗಿ ಅಕ್ಕ ತಂಗಿ ಇಬ್ಬರೂ ಸಹ ಕೆಲಸಕ್ಕೆಂದು ಹಳ್ಳಿ ಬಿಟ್ಟು ಬರುತ್ತಾರೆ.. ಹೌದು ದಾವಣಗೆರೆಯ ಹೊರ ವಲಯದಲ್ಲಿರುವ ಆಂಜನೇಯ ಕಾಟನ್ ಮಿಲ್ ನಲ್ಲಿ ಕೆಲಸಕ್ಕೆ ಸೇರಿಕೊಂಡ ಗೌರಮ್ಮ ಹಾಗೂ ರಾಧಮ್ಮ ನೆಮ್ಮದಿ ಜೀವನ ಸಾಗಿಸುತ್ತಿದ್ದರು.. ಇತ್ತ ಅಕ್ಕ ಗೌರಮ್ಮನಿಗೆ ಮದುವೆಯಾಗಿತ್ತು ಎಂದು ತಿಳಿದುಬಂದಿದೆ..

ಕೂಲಿ ಮಾಡಿದರು ಸ್ವಾಭಿಮಾನದಿಂದ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದ ಇವರಿಬ್ಬರು ತಮ್ಮ ಗಾರ್ಮೆಂಟ್ಸ್ ಇದ್ದ ಬಡಾವಣೆಯಲ್ಲಿಯೇ ಮನೆ ಮಾಡಿಕೊಂಡಿದ್ದರು.. ಪ್ರತಿದಿನ ಗಾರ್ಮೆಂಟ್ಸ್ ಕೆಲಸ ಮಾಡಿಕೊಂಡು ಮನೆಗೆ ಮರಳುತ್ತೊದ್ದರು.. ಆದರೆ ಕಳೆದ ಆರು ದಿನಗಳಿಂದಲೂ ಸಹ ಮನೆ ಬಾಗಿಲು ತೆರೆಯಲಿಲ್ಲ.. ಅಕ್ಕ ಪಕ್ಕದವರಿಗೆ ಅನುಮಾನ ಬಂದು ಸುಮ್ಮನಾದರು.. ಆದರೆ ಬರುಬರುತ್ತಾ ಆ ಮನೆಯ ಕಡೆಯಿಂದ ಹೇಳಲಾಗದಂತಹ ವಾಸನೆಯೊಂದು ಬರಲು ಶುರುವಾಯಿತು.

ಇದರಿಂದ ಅನುಮಾನ ಹಾಗೂ ಗಾಬರಿಗೊಂಡ ಅಕ್ಕ ಪಕ್ಕದ ಜನರು ಹತ್ತಿರದ ವಿದ್ಯಾ ನಗರದ ಪೊಲೀಸ್ ಠಾಣೆಗೆ ವಿಚಾರ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಮನೆ ಬಾಗಿಲು ತೆರೆಯುವಂತೆ ಬಹಳಷ್ಟು ಬಾರಿ ಬಾಗಿಲು ಬಡಿದು ಕೂಗುತ್ತಾರೆ. ಆದರೆ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಪೊಲೀಸರೇ ಬಾಗಿಲು ತೆರೆದು ನೋಡಿದಾಗ ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ.. ಹೌದು ಮನೆಯೊಳಗೆ ಗೌರಮ್ಮ ಹಾಗೂ ರಾಧಮ್ಮ ಇಬ್ಬರೂ ಸಹೋದರಿಯರು ಕೊಳೆತ ಸ್ಥಿತಿಯಲ್ಲಿದ್ದಿದ್ದನ್ನು ಕಂಡು ಅಕ್ಕಪಕ್ಕದವರು ಪೊಲೀಸರು ಎಲ್ಲರೂ ಶಾಕ್ ಆಗಿದ್ದಾರೆ.. ಐದು ದಿನದ ಹಿಂದಷ್ಟೇ ಚೆನ್ನಾಗಿ ಅಕ್ಕಪಕ್ಕದವರ ಜೊತೆ ಮಾತನಾಡಿದ್ದ ಗೌರಮ್ಮ ರಾಧಮ್ಮ ಇದೀಗ ಈ ರೀತಿಯ ಸ್ಥಿತಿಯಲ್ಲಿ ಇದ್ದು ವಾಸನೆ ಬರುತ್ತಿದ್ದದ್ದನ್ನು ನೋಡಿ ಸ್ಥಳೀಯರು ಮರುಗಿದ್ದಾರೆ..

ಇನ್ನು ಈ ಕುರಿತು ಪೊಲೀಸರು ಗೌರಮ್ಮ ರಾಧಮ್ಮ ಅವರ ಸಂಬಂಧಿಕರಿಗೆ ವಿಚಾರ ತಿಳಿಸಿದ್ದು ಹಳ್ಳಿಯಿಂದ ಸಂಬಂಧಿಕರು ಆಗಮಿಸಿ ಅಕ್ಕ ತಂಗಿಯ ಸ್ಥಿತಿ ನೋಡಿ ಕಣ್ಣೀರಿಟ್ಟಿದ್ದಾರೆ.. ಇನ್ನು ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ವಿಚಾರಣೆ ನಡೆಸುತ್ತಿದ್ದಾರೆ.. ಆದರೆ ಇತ್ತ ಸಂಬಂಧಿಕರು ಗೌರಮ್ಮನ ಪತಿ ಮಂಜುನಾಥ್ ಎಂಬುವವರ ಮೇಲೆ ಅನುಮಾನ ವ್ಯಕ್ತಪಡಿಸಿ ಅವರ ಮೇಲೆ ದೂರು ನೀಡಿದ್ದಾರೆ ಎನ್ನಲಾಗಿದೆ.. ಒಟ್ಟಿನಲ್ಲಿ ಜೀವನ ಕಟ್ಟಿಕೊಳ್ಳಲು ಹಳ್ಳಿ ಬಿಟ್ಟು ಪಟ್ಟಣಕ್ಕೆ ಬಂದಿದ್ದ ಅಕ್ಕ ತಂಗಿಯ ಬದುಕು ಈ ರೀತಿ ಅಂತ್ಯವಾಗಿದ್ದು ನಿಜಕ್ಕೂ ಕಂಬನಿ ತರಿಸುತ್ತದೆ.. ಹೆಣ್ಣು ಮಕ್ಕಳಾಗಲಿ ಗಂಡು ಮಕ್ಕಳಾಗಲಿ ಊರಿಣ್ದ ಊರಿಗೆ ಬಂದು ಕೆಲಸ ಓದು ಅಂತ ಅಪರಿಚಿತ ಸ್ಥಳಗಳಲ್ಲಿ ವಾಸಿಸುವಾಗ ಬಹಳಷ್ಟು ಎಚ್ಚರಿಕೆಯಿಂದಿದ್ದರೆ ಒಳ್ಳೆಯದಷ್ಟೇ..