ನಾಗಿಣಿ 2 ಸೀರಿಯಲ್ ನಟಿ ನಮ್ರತಾ ಬಡೇ ಪಾರ್ಟಿ ಹೇಗಿತ್ತು ನೋಡಿ ವಿಡಿಯೋ

ಈಗಾಗಲೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿದಿನ ಪ್ರಸಾರವಾಗುತ್ತಿದ್ದ ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ಹಿಮ ಪಾತ್ರಧಾರಿಯಾಗಿ ಎಲ್ಲರ ಮನಸ್ಸನ್ನು ಗೆದ್ದಿರುವ ನಮ್ರತಾ ಗೌಡ ಅವರು ಈಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ 2 ಧಾರಾವಾಹಿಯಲ್ಲಿ ಶಿವಾನಿ ಪಾತ್ರವನ್ನು ಅಚ್ಚು ಕಟ್ಟಾಗಿ ನಟಿಸುತ್ತಿದ್ದಾರೆ. ಅವರ ಬರ್ತಡೆ ಇದೆ ತಿಂಗಳು 14 ರಂದು ಇದ್ದು ಅವರ ಸ್ನೇಹಿತರು, ಸಹ ನಟರು ಅವರಿಗೆ ಸರ್ಪ್ರೈಸ್ ಬರ್ತಡೆ ಪಾರ್ಟಿ ಕೊಟ್ಟರು ಅದರ ಬಗ್ಗೆ ಕೆಲವು ಮಾಹಿತಿಯನ್ನು ಹಾಗೂ ಅವರ ಬಗ್ಗೆ ಈ ಲೇಖನದಲ್ಲಿ ನೋಡೋಣ.

Namratha Gowda: ಬೋಲ್ಡ್ ಫೋಟೋ ಹಂಚಿಕೊಂಡ 'ಪುಟ್ಟಗೌರಿ ಮದುವೆ' ನಟಿ ನಮ್ರತಾ ಗೌಡ - naagini 2 serial actress namratha gowda share bold photo from bali - Vijay Karnataka

ಜೀ ಕನ್ನಡ ಚಾನೆಲ್ ನಲ್ಲಿ ಪ್ರತಿದಿನ ಪ್ರಸಾರವಾಗುತ್ತಿರುವ ನಾಗಿಣಿ 2 ಧಾರಾವಾಹಿಯಲ್ಲಿ ನಮ್ರತಾ ಗೌಡ ಅವರು ಶಿವಾನಿ ಎಂಬ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಏಪ್ರಿಲ್ 14 ರಂದು ಅವರ ಬರ್ತಡೆಗೆ ಅವರ ಸ್ನೇಹಿತರು ಮತ್ತು ಸಹ ನಟರು ಸರ್ಪ್ರೈಸ್ ಬರ್ತಡೆ ಪಾರ್ಟಿ ಆಯೋಜಿಸಿದ್ದರು. ತನಗಾಗಿ ಇಲ್ಲಿಯವರೆಗೂ ಯಾರು ಈ ರೀತಿ ಕ್ಯೂಟ್ ಆಗಿ ಸರ್ಪ್ರೈಸ್ ಪಾರ್ಟಿ ಮಾಡಿರಲಿಲ್ಲ ಎಂದು ನಮೃತಾ ಅವರು ಭಾವುಕರಾಗಿ ಕಣ್ಣು ತುಂಬಿಕೊಂಡರು. ನಮ್ರತಾ ಅವರ ಸರ್ಪ್ರೈಸ್ ಬರ್ತಡೆ ಪಾರ್ಟಿಯ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ನಮ್ರತಾ ಗೌಡ ಅವರು ಏಪ್ರಿಲ್ 14, 1993 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ್ದಾರೆ.

ನಮ್ರತಾ ಗೌಡ ಅವರು ನಟಿ, ಮೋಡೆಲ್ ಹಾಗೂ ಡ್ಯಾನ್ಸರ್. ನಮ್ರತಾ ಗೌಡ ಅವರು ನಾಗಿಣಿ 2 ಧಾರಾವಾಹಿಯಲ್ಲಿ ನಟಿಸುವ ಮೊದಲು ಪುಟ್ಟ ಗೌರಿ ಮದುವೆ, ನಾಕುತಂತಿ, ಚೆಲುವಿ, ಸಿಲ್ಲಿ ಲಲ್ಲಿ ಧಾರಾವಾಹಿಗಳಲ್ಲಿ ನಟಿಸಿದ್ದರು. ಇವರು ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ ಮಿಲನ, ಎಕ್ಸ್ ಕ್ಯೂಸಮಿ, ಗೇಮ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಫೇವರೇಟ್ ಸ್ಥಳ ಗೋವಾ, ಫೇವರೇಟ್ ಹೀರೊ ಪುನೀತ್ ರಾಜಕುಮಾರ್,

ಇವಳು ಬಾಲಿವುಡ್​ ಬೆಡಗಿನಾ? ನಾಗಿಣಿ ಹುಡುಗಿನಾ? ಬಿಕಿನಿ ತೊಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದ ನಮ್ರತಾ ಗೌಡ! | Actress Namrata Gowda shared a photo wearing a bikini– News18 Kannada

ಫೇವರೇಟ್ ಧಾರವಾಹಿ ಗಟ್ಟಿಮೇಳ. ಇವರ ಹವ್ಯಾಸ ಟ್ರಾವೆಲಿಂಗ್, ಡ್ಯಾನ್ಸಿಂಗ್, ಕರಾಟೆ. ಇವರು ನಟನೆಯಲ್ಲಿ ಮಾತ್ರವಲ್ಲದೆ ಕರಾಟೆ ಮತ್ತು ಡ್ಯಾನ್ಸ್ ಮಾಡುವದರಲ್ಲಿ ಖ್ಯಾತಿ ಪಡೆದಿದ್ದಾರೆ. ಇವರು ಒಂದು ಎಪಿಸೋಡ್ ಗೆ 24,000 ರೂಪಾಯಿ ಸಂಭಾವನೆ ಪಡೆಯುತ್ತಾರೆ, ಇವರ ಒಟ್ಟು ಆಸ್ತಿ 45-50 ಲಕ್ಷ. ಇವರು ತಮ್ಮ ನಿಜಜೀವನದಲ್ಲಿ ಮೊಡರ್ನ್ ಆಗಿದ್ದಾರೆ, ಇವರ ಟಿಕ್ ಟಾಕ್ ವೀಡಿಯೋಗಳು ಬಹಳ ಫೇಮಸ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ನಮ್ರತಾ ಗೌಡ ಅವರು ಫೇಮಸ್ ಆಗಿದ್ದಾರೆ. ಅವರಿಗೆ ಧಾರವಾಹಿ ಮತ್ತು ಸಿನಿಮಾಗಳಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿ ಎಂದು ಆಶಿಸೋಣ.

You might also like

Comments are closed.