ಕಾಂತಾರ ಸಿನಿಮಾದ ಖ್ಯಾತಿಯೇ ಆ ರೀತಿ ಇದೆ, ಸಣ್ಣ ಬಜೆಟ್ ನಲ್ಲಿ ತಯಾರಾದ ಈ ಸಿನಿಮಾ ಇಂದು 400 ಕೋಟಿಗಿಂತಲೂ ಹೆಚ್ಚು ಗಳಿಕೆ ಮಾಡುವ ಮೂಲಕ ಪಾನ್ ಇಂಡಿಯಾ ಸಿನಿಮಾವಾಗಿ ಈವರೆಗೆ ಸಿನಿಮಾ ಬಿಡುಗಡೆ ಆಗದ ಜಾಗದಲ್ಲೆಲ್ಲ ಕನ್ನಡಕ್ಕೆ ದೊಡ್ಡ ಹಿರಿಮೆಯನ್ನು ತಂದಿದೆ. ಈ ಸಿನಿಮಾದ ಕಥೆ, ಛಾಯಾಗ್ರಹಣ, ಕಲಾವಿದರ ಅಭಿನಯ, ಕಥೆಯ ಸಂದೇಶ, ಸ್ಕ್ರಿಪ್ಟ್ ಜೊತೆ ಸಂಗೀತವೂ ಕೂಡ ಬಾರಿ ಸದ್ದು ಮಾಡಿದೆ.
ಹಾಡಿನಲ್ಲಿರುವ ಎಲ್ಲಾ ಹಾಡುಗಳು ಕೂಡ ಸೂಪರ್ ಹಿಟ್ ಹಾಡುಗಳು ಆಗಿದ್ದು, ಈ ವರ್ಷದ ಟ್ರೆಂಡಿಂಗ್ ಹಾಡುಗಳಾಗಿವೆ. ಇದರಲ್ಲಿ ನಾಯಕ ನಟ ಹಾಗೂ ನಟಿಯ ಡುಯೆಟ್ ಸಾಂಗ್ ಆದ ಸಿಂಗಾರ ಸಿರಿಯೇ ಹಾಡು ಇನ್ನೂ ಹೆಚ್ಚಿನ ಮೋಡಿ ಮಾಡಿದ್ದು ರೀಲ್ಸ್ ಮಾಡುವವರ ಫೇವರೆಟ್ ಹಾಡು ಇದಾಗಿದೆ. ಈ ಹಾಡಿಗೆ ಹೆಣ್ಣು ಐಕಳೆಲ್ಲ ಸೀರೆ ಉಟ್ಟು ಲೀಲಾರಂತೆ ಕುಣಿದಿದ್ದರೆ ಗಂಡು ಹುಡುಗರು ಪಂಚೆ ಎತ್ತಿಕಟ್ಟಿ ಹಾಕಿ ಶಿವನನ್ನು ಅನುಕರಣೆ ಮಾಡುತ್ತಾ ಸಕ್ಕತ್ತಾಗಿ ಪೋಸ್ ಕೊಟ್ಟಿದ್ದಾರೆ.
ಈ ರೀತಿ ರೀಲ್ಸ್ ಮಾಡುವವರ ಸಂಖ್ಯೆಯಲ್ಲಿ ಸ್ಕೂಲ್ ಟೀಚರ್ಸ್ ಕೂಡ ಸೇರಿದ್ದಾರೆ ಎನ್ನುವುದೇ ವಿಶೇಷ. ಈಗ ಟ್ರೋಲ್ ಮಚ್ಚಿ ಅಫೀಸಿಯಲ್ ಇನ್ಸ್ಟಾಗ್ರಾಮ್ ಖಾತೆಯಿಂದ ಅಪ್ಲೋಡ್ ಆಗಿರುವ ಈ ವಿಡಿಯೋ ಬಹಳ ವೈರಲಾಗುತ್ತಿದೆ. ಈ ಹಾಡಿನಲ್ಲಿ ಸಿಂಗಾರ ಸಿರಿಯೇ ಹಾಡಿಗೆ ಮೂವರು ಶಾಲಾ ಶಿಕ್ಷಕಿಯರು ಸಕ್ಕತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ಇವರು ಹಾಕಿರುವ ಈ ಹೆಜ್ಜೆಗಳು ಅನುಕರಣೀಯವಾಗಿದ್ದು ಮುದ್ದಾಗಿ ಕುಣಿದಿರುವ ಇವರ ಡ್ಯಾನ್ಸ್ ನೋಡಿ ಮೆಚ್ಚದವರಿಲ್ಲ.

ಈವರೆಗೂ ಈ ವಿಡಿಯೋವನ್ನು ಎರಡು ಮಿಲಿಯನ್ ಗಿಂತಲೂ ಹೆಚ್ಚು ಜನ ನೋಡಿದ್ದು ಸುಮಾರು 2000 ಕ್ಕಿಂತ ಹೆಚ್ಚು ಮಂದಿ ಇದಕ್ಕೆ ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಯಾವುದೋ ಭಾಗದ ಪ್ರೈವೇಟ್ ಶಾಲೆಯ ಕ್ಲಾಸ್ ರೂಮ್ ಒಳಗೆ ಈ ಮೂರು ಜನ ಶಿಕ್ಷಕಿಯರು ಈ ನೃತ್ಯ ಮಾಡಿದ್ದಾರೆ. ಶಾಲಾ ಊಟ ಸಮಯದಲ್ಲಿ ಮಕ್ಕಳೆಲ್ಲ ಆಚೆ ಇದ್ದಾಗ ಈ ಮೂವರು ರೀಲ್ಸ್ ಮಾಡುವ ಆಸೆಯಿಂದ ಈ ಹಾಡನ್ನು ಆರಿಸಿಕೊಂಡು ಹೆಜ್ಜೆ ಹಾಕಿದ್ದಾರೆ.
ಇವರ ವಿಡಿಯೋಗೆ ತರಾವರಿಯಾಗಿ ಕಾಮೆಂಟ್ ಬರುತ್ತಿದ್ದು, ಅದರಲ್ಲಿ ಒಬ್ಬರು ನಮಗೂ ಸಹ ಈ ರೀತಿ ಟೀಚರ್ ಸಿಕ್ಕಿದ್ದರೆ ಒಂದು ದಿನ ಕೂಡ ಮಿಸ್ ಮಾಡದೆ ದಿನ ಶಾಲೆಗೆ ಹೋಗುತ್ತಿದ್ದೆ ಎಂದು ಹೇಳಿದ್ದಾರೆ! ಮತ್ತೊಬ್ಬ ಕಮೆಂಟಿಗರು ನಮಗೆ ಯಾಕೆ ಈ ರೀತಿ ಶಿಕ್ಷಕಿಯರು ಸಿಗಲಿಲ್ಲ ಎಂದು ಬಹಳ ಬೇಜಾರಾಗುತ್ತಿದೆ ಎಂದಿದ್ದರೆ, ಮತ್ತೊಬ್ಬರು ನಾವೇನಾದರೂ ಈ ರೀತಿ ಟೀಚರ್ ಸಿಕ್ಕಿದರೆ ಮುಂದಿನ ತರಗತಿಗೆ ಹೋಗುತ್ತಲೇ ಇರಲಿಲ್ಲವೇನೋ ಎಂದು ತಮಾಷೆ ಮಾಡಿದ್ದಾರೆ.
ಕೆಲವರು ನಮ್ಮ ಟೀಚರ್ ಸಹ ಇದೆ ಥರ ಚೆನ್ನಾಗಿ ನಮಗೆ ಡ್ಯಾನ್ಸ್ ಹೇಳಿಕೊಡುತ್ತಿದ್ದರು ಎಂದು ಅವರ ಟೀಚರನ್ನು ನೆನೆಸಿಕೊಂಡಿದ್ದಾರೆ. ಬಹುತೇಕ ಶಾಲೆಗಳಲ್ಲಿ ವಾರ್ಷಿಕೋತ್ಸವ ತಯಾರಿ ನಡೆಯುತ್ತಿದ್ದು ಶಿಕ್ಷಕಿಯರು ತಮ್ಮ ಮಕ್ಕಳಿಗೆ ಡ್ಯಾನ್ಸ್ ಕಲಿಸುವಲ್ಲಿ ನಿರತರಾಗಿದ್ದಾರೆ, ಅಂಥ ಯಾವುದೋ ಮೂಡ್ ನಲ್ಲಿ ಈ ಡ್ಯಾನ್ಸ್ ಮಾಡಿರಬಹುದು. ಈಗ ವೈರಲ್ ಆಗುತ್ತಿರುವ ವಿಡಿಯೋವನ್ನು ನೋಡಿ ಡ್ಯಾನ್ಸ್ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.
ಆ ವಿಡಿಯೊ ಕೆಳಗಿದೆ ನೋಡಿ…
ಸಿಂಗಾರ ಸಿರಿಯೇ ಹಾಡಿಗೆ ಸಿಂಪಲ್ಲಾಗಿ ಡ್ಯಾನ್ಸ್ ಮಾಡಿದ ಶಿಕ್ಷಕಿಯರು pic.twitter.com/rxQPEBo6oG
— The Dreamer (@The_Drea_me_r) January 16, 2023