ಸಿಲಿಲಲ್ಲಿ ಧಾರಾವಾಹಿ(Serial) ಜನಪ್ರಿಯತೆ ಇಂದಿಗೂ ಸಹ ಕಡಿಮೆಯಾಗಿಲ್ಲ.ಬಹಳ ಹಿಂದೆ ಈ ಟಿವಿ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ಸಿಲಿಲಲ್ಲಿ ಧಾರಾವಾಹಿ ಜನಪ್ರಿಯತೆ ಇಂದಿಗೂ ಸಹ ಕಡಿಮೆಯಾಗಿಲ್ಲ. ಈವತ್ತಿಗೂ ಸಹ ಈ ಧಾರಾವಾಹಿ(Serial) ಮರುಪ್ರಸಾರವಾಗಬೇಕೆಂದು ಧಾರಾವಾಹಿ ಪ್ರಿಯರು ಇಷ್ಟಪಡುತ್ತಾರೆ. ಅರ್ಧ ಗಂಟೆ ಟಿವಿ ಮುಂದೆ ಕುಳಿತು ಮನೆಮಂದಿಯೆಲ್ಲ ಎಂಜಾಯ್ ಮಾಡುವಂತಹ ಸೀರಿಯಲ್ ಇದು. ಈ ರಾವಾಹಿಯ ಎಲ್ಲಾ ಪಾತ್ರಗಳು ಸಹ ಸಕ್ಕತ್ ಜನಪ್ರಿಯತೆ ಪಡೆದಿದ್ದವು.

ಸಮಾಜ ಸೇವಕಿ(Social Worker) ಲಲಿತಾಂಬ, ಡಾ.ವಿಠ್ಠಲ್ ರಾವ್, ಕಥಾಲೇಖಕಿ ಶ್ರೀಲತಾ, ಲಲಿತಾಂಬರ ಆಸಿಸ್ಟಂಟ್ ಹಾಗೂ ನೆರೆಹೊರೆಯವರಾದ ವಿಶಾಲು ಮತ್ತು ಅವರ ಪತಿ, ಪ್ರಹ್ಲಾದ ಎಲ್ಲಾ ಪಾತ್ರಗಳು ಸಹ ಜನಪ್ರಿಯತೆ ಗಳಿಸಿದ್ದವು. ಈ ಧಾರಾವಾಹಿಯಲ್ಲಿ ವಿಶಾಲು ಪಾತ್ರ ಕೂಡ ಬಹಳ ಜನಪ್ರಿಯತೆ ಗಳಿಸಿತ್ತು. ಇವರ ಚಪ್ಪಾಳೆ ಡೈಲಾಗ್ ಅಂತೂ ಸಕ್ಕತ್ ಫೇಮಸ್ ಆಗಿತ್ತು. ಈ ನಟಿ ಈಗ ಹೇಗಿದ್ದಾರೆ ಗೊತ್ತಾ ? ನಿಜ ಜೀವನದಲ್ಲಿ ವಿಶಾಲು ಪಾತ್ರಧಾರಿ ಹೇಗಿದ್ದಾರೆ ಅವರ ಜೀವನ ಶೈಲಿ ಹೇಗಿದೆ ನೋಡಿ..

ವಿಶಾಲು ಪಾತ್ರಧಾರಿಯ ನಿಜವಾದ ಹೆಸರು ಸುನೇತ್ರ ಪಂಡಿತ್(Sunetra Pandit). 1995 ರಲ್ಲಿ ಓಂ ಸಿನಿಮಾ ಮೂಲಕ ನಟನೆ ಶುರು ಮಾಡಿದ್ದರು. ನಿನಗೋಸ್ಕರ, ಯಾರೇ ನೀನು ಚೆಲುವೆ , ಹಾಗೂ ಇತ್ತೀಚಿನ ಬಿಸಿಲೆ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ನಟನೆಗಿಂತ ಹೆಚ್ಚಾಗಿ ಇವರು ಡಬ್ಬಿಂಗ್ ಕಲಾವಿದರು. ಸ್ಯಾಂಡಲ್ ವುಡ್ ನಲ್ಲಿ ಹಲವಾರು ನಟಿಯರಿಗೆ ಇವರು ಧ್ವನಿ ನೀಡಿದ್ದಾರೆ. ಪ್ರೇಮ, ರೋಜಾ, ದೇವಯಾನಿ ಸೇರಿದಂತೆ ಹಲವಾರು ನಟಿಯರಿಗೆ ಕನ್ನಡದಲ್ಲಿ ಡಬ್ಬಿಂಗ್ ಮಾಡಿದ್ದಾರೆ ನಟಿ ಸುನೇತ್ರ ಪಂಡಿತ್. ಹಲವಾರು ಹಾಸ್ಯ ಕಾರ್ಯಕ್ರಮಗಳಲ್ಲಿ ಸಹ ಪಾಲ್ಗೊಳ್ಳುತ್ತಾರೆ.

ಇವರ ಪತಿ ರಮೇಶ್ ಪಂಡಿತ್ ಇವರು ಸಹ ನಟರು, ಅನೇಕ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈ ದಂಪತಿಗೆ ಶ್ರೀಯಾ ಪಂಡಿತ್ ಎಂಬ ಹೆಸರಿನ ಮಗಳಿದ್ದಾಳೆ. ಸುನೇತ್ರಾ ಪಂಡಿತ್ ಅವರಿಗೆ ನಿದ್ದೆ ಅಂದ್ರೆ ಬಹಳ ಇಷ್ಟ ಅಂತೆ, ಧಾರಾವಾಹಿ ಶೂಟಿಂಗ್ ಇದ್ದಾಗ ಮಾತ್ರ ಅಲಾರಂ ಇಟ್ಟು ಎದ್ದೇಳುತ್ತಾರಂತೆ. ಇಲ್ಲದಿದ್ದರೆ ಸಖತ್ತಾಗಿ ನಿದ್ದೆ ಮಾಡುತ್ತಾರಂತೆ. ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಆಕ್ಟಿವ್ ಆಗಿರುವ ಸುನೇತ್ರಾ ಪಂಡಿತ್ ಅವರಿಗೆ 20ಸಾವಿರಕ್ಕೂ ಫಾಲೋವರ್ಸ್ ಗಳು ಇದ್ದಾರೆ. ಶಾಲಾದಿನಗಳಲ್ಲಿ ರಿಲೇ ಮತ್ತು ಲಾಂಗ್ ಜಂಪ್ ನಲ್ಲಿ ಕ್ರೀಡಾಪಟುವಾಗಿದ್ದರಂತೆ ಸುನೇತ್ರಾ. ಹಾಗೂ 10ನೇ ತರಗತಿ ನಂತರ ಥಿಯೇಟರ್ ಗೆ ಕಾಲಿಟ್ಟರಂತೆ ನಟಿ ಸುನೇತ್ರಾ ಪಂಡಿತ್.