ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯನವರ ಮಾತುಗಳು, ನಡವಳಿಕೆಗಳು ಆಗಾಗ ಸೋಷಿಯಲ್ ಮೀಡಿಯಾಗಳಿಗೆ ಆಹಾರವಾಗುವುದುಂಟು. ಹಲವು ಬಾರಿ ಟ್ರೋಲ್ ಗೆ ಅವರು ತುತ್ತಾಗುತ್ತಾರೆ.
ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯನವರ ಮಾತುಗಳು, ನಡವಳಿಕೆಗಳು ಆಗಾಗ ಸೋಷಿಯಲ್ ಮೀಡಿಯಾಗಳಿಗೆ ಆಹಾರವಾಗುವುದುಂಟು. ಹಲವು ಬಾರಿ ಟ್ರೋಲ್ ಗೆ ಅವರು ತುತ್ತಾಗುತ್ತಾರೆ.
ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ನ ‘ನಾ ನಾಯಕಿ’ ಸಮಾವೇಶ ಏರ್ಪಾಡಾಗಿತ್ತು. ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕಾರ್ಯಕ್ರಮದ ಕೇಂದ್ರಬಿಂದು. ಅರಮನೆ ಮೈದಾನ ಸುತ್ತಮುತ್ತ, ಕಾರ್ಯಕ್ರಮ ಸ್ಥಳದಲ್ಲಿ ಅಪಾರ ಸಂಖ್ಯೆಯಲ್ಲಿ ಕೈ ಅಭಿಮಾನಿಗಳು, ಕಾರ್ಯಕರ್ತರು ಜಮಾಯಿಸಿದ್ದರು.ಕೆಂಪೇಗೌಡ ಏರ್ ಪೋರ್ಟ್ ನಿಂದ ಬೆಂಗಳೂರಿಗೆ ಬಂದಿಳಿದ ಪ್ರಿಯಾಂಕಾ ಅಭಿಮಾನಿಗಳತ್ತ, ಕೈ ಕಾರ್ಯಕರ್ತರ ನೋಡಿ ನಗು ಬೀರುತ್ತಾ ಕೈ ಕುಲುಕುತ್ತಾ ವೇದಿಕೆ ಕಡೆಗೆ ಸಾಗಿದರು.
ವೇದಿಕೆಯಲ್ಲಿ ನಾಯಕಿ ಸಮಾವೇಶದಲ್ಲಿ ಮಹಿಳೆಯರೇ ತುಂಬಿ ಹೋಗಿದ್ದರು. ನಿರೂಪಕಿ ತಮ್ಮ ಪಾಡಿಗೆ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದರು. ಪ್ರಿಯಾಂಕಾ ಗಾಂಧಿ ವೇದಿಕೆಗೆ ಎಂಟ್ರಿ ಕೊಟ್ಟು ಎಲ್ಲರನ್ನೂ ಔಪಚಾರಿಕವಾಗಿ ಮಾತನಾಡಿಸಿ ತಮ್ಮ ಸೀಟಿಗೆ ಹೋಗಿ ಕುಳಿತುಕೊಂಡರು.
ಕಾರ್ಯಕ್ರಮ ಆರಂಭವಾಯಿತು. ಪ್ರಾರಂಭದಲ್ಲಿ ಜ್ಯೋತಿ ಬೆಳಗಿಸಲು ಕಾಂಗ್ರೆಸ್ ನ ಹಿರಿಯ ಮತ್ತು ಪ್ರಮುಖ ನಾಯಕರನ್ನು ವೇದಿಕೆ ಮೇಲೆ ಕರೆಯಲಾಯಿತು. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರು ವೇದಿಕೆ ಹತ್ತಿ ದೀಪ ಬೆಳಗಿ ನಾಯಕಿ ಸಮಾವೇಶದಲ್ಲಿ ನಮಗೇನು ಕೆಲಸ ಎಂದು ಕೆಳಗೆ ಇಳಿದು ಹೋದರು.
ವೇದಿಕೆಯಿಂದ ಕೆಳಗೆ ಇಳಿಯುವಾಗ ಸಿದ್ದರಾಮಯ್ಯನವರು ನಿರೂಪಕಿಯನ್ನು ನೋಡಿದ ರೀತಿಗೆ ಜನ ಬಿದ್ದುಬಿದ್ದು ನಗುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ನಿರೂಪಕಿಯನ್ನು ಮೇಲಿನಿಂದ ಕೆಳಗೊಮ್ಮೆ ದಿಟ್ಟಿಸಿ ನೋಡಿದ ರೀತಿ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದಿದ್ದು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ಯಾರಪ್ಪಾ ಇವಳು, ಓ ನೀನಾ ಎಂದು ಹೇಳುವ ರೀತಿ ಸಿದ್ದರಾಮಯ್ಯನವರು ಕೈಸನ್ನೆ ಮಾಡಿ ನಕ್ಕು ಕೆಳಗಿಳಿದು ಹೋಗುತ್ತಾರೆ.
ಯಾಕಾಗಿ ಸಿದ್ಧರಾಮಯ್ಯ ಈ ರೀತಿ ನೋಡಿದರು ಎಂದು ಅವರಿಗೇ ಗೊತ್ತು. ಕಾಂಗ್ರೆಸ್ ನಾಯಕಿಯೊಬ್ಬರ ಹೆಸರು ಹೇಳಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ನಿರೂಪಕಿ ಹೇಳುವ ಹೊತ್ತಿನಲ್ಲಿ ಸಿದ್ಧರಾಮಯ್ಯ ನಿರೂಪಕಿಯಿಂದ ಹಿಂಭಾಗದಿಂದ ಪಾಸ್ ಆಗುತ್ತಾರೆ. ಈ ವೇಳೆ ಆಕೆಯನ್ನೇ ದಿಟ್ಟಿಸಿ ನೋಡುತ್ತಾರೆ.
ಈ ಸೆಕೆಂಡ್ ಗಳ ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ‘ಮೆನ್ ವಿಲ್ ಬಿ ಮೆನ್’ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದರೆ, ಇನ್ನು ಕೆಲವರು ‘ದಿ ಬಾಯ್ಸ್’ ಮೂಮೆಂಟ್ ಎಂದು ಪೋಸ್ಟ್ ಮಾಡಿದ್ದಾರೆ. ಸಿದ್ದರಾಮಯ್ಯನವರು ಆಚೆ ಹೋದ ನಂತರ ನಿರೂಪಕಿ ಕೂಡ ಯಾಕಪ್ಪಾ ನನ್ನನ್ನು ಅವರು ಆ ರೀತಿ ನೋಡಿದರು, ನಾನೇನಾದರೂ ತಪ್ಪು ಮಾಡಿದೆನೇ ಎನ್ನುವ ಅರ್ಥದಲ್ಲಿ ತಿರುಗಿ ನೋಡುತ್ತಾರೆ.
#Siddaramaiah ಸಿದ್ದರಾಮಯ್ಯನವರು ನಿರೂಪಕಿಯನ್ನು ನೋಡಿದ ರೀತಿಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ನಿರೂಪಕಿಯನ್ನು ಮೇಲಿನಿಂದ ಕೆಳಗೊಮ್ಮೆ ದಿಟ್ಟಿಸಿ ನೋಡಿದ ರೀತಿ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದಿದ್ದು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. (ವಿಡಿಯೊ ಕೃಪೆ-ಸೋಷಿಯಲ್ ಮೀಡಿಯಾ ಟ್ರೋಲ್ ಪೇಜ್ ) @XpressBengaluru pic.twitter.com/wVltQZxi2C
— kannadaprabha (@KannadaPrabha) January 17, 2023