ಎಂಥ ಅದ್ಭುತವಾಗಿದೆ ನೋಡಿ ಸಿದ್ದೇಶ್ವರ ಸ್ವಾಮಿಗಳ ಕೊನೆಯ ಸಂದೇಶ,ಎಷ್ಟು ಅರ್ಥಪೂರ್ಣವಾಗಿದೆ ನೋಡಿ

Heap/ರಾಶಿ ಭವಿಷ್ಯ

ನಡೆದಾಡುವ ದೇವರು ಎಂದೇ ಪ್ರಖ್ಯಾತಿಯನ್ನು ಪಡೆದಿಕೊಂಡಿದ್ದಂತಹ ಶ್ರೀ ಸಿದ್ದೇಶ್ವರ ಸ್ವಾಮಿಗಳು ಶ್ರೇಷ್ಟ ಆಧ್ಯಾತ್ಮಿಕ ಚಿಂತಕರು, ಇವರ ಪ್ರವಚನಗಳನ್ನು ಕೇಳಿ ಅದೆಷ್ಟೋ ಜನ ತಮ್ಮ ಮನಸ್ಸನ್ನು ಪರಿವರ್ತನೆ ಮಾಡಿಕೊಂಡಿದ್ದಾರೆ. ಉತ್ತರ ಕರ್ನಾಟಕ ಮಂದಿಗೆ ಇವರು ಮನೆ ದೇವರಾಗಿದ್ದರು, ಅಷ್ಟರ ಮಟ್ಟಿಗೆ ಜನರ ಮನೆಮನೆಗಳಲ್ಲಿ ಸಿದ್ದೇಶ್ವರ ಸ್ವಾಮಿಗಳು ತಲುಪಿದ್ದರು. ಸಿದ್ದೇಶ್ವರ ಸ್ವಾಮಿಗಳ ಜೀವನ ಹಾಗೂ ಅವರ ಇತಿಹಾಸವೇ ಒಂದು ರೋಚಕ, ದಕ್ಷಿಣ ಭಾಗದ ಕರ್ನಾಟಕದಲ್ಲಿ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳನ್ನು ಹೇಗೆ ಪೂಜಿಸುತ್ತಾರೆಯೋ ಅದೇ ರೀತಿ ಉತ್ತರ ಕರ್ನಾಟಕದಲ್ಲಿ ಸಿದ್ದೇಶ್ವರ ಸ್ವಾಮಿಗಳನ್ನು ಪೂಜಿಸುತ್ತಾರೆ.

ಹಾಗಂತ ಶ್ರೀಗಳು ಕೇವಲ ಉತ್ತರ ಕರ್ನಾಟಕ ಅಥವಾ ಕರ್ನಾಟಕಕ್ಕೆ ಮಾತ್ರ ಸೇರಿದವರಲ್ಲ, ಅವರ ಅನುಯಾಯಿಗಳು ಅಥವಾ ಭಕ್ತರಲ್ಲಿ ಅನೇಕರು ಪರರಾಜ್ಯದವರೂ ಇದ್ದಾರೆ, ಹೊರದೇಶಗಳಲ್ಲೂ ಸಹ ಇದ್ದಾರೆ. ಒಮ್ಮೆ ಭಾರತ ಸರ್ಕಾರದಿಂದ ಸಿದ್ದೇಶ್ವರ ಸ್ವಾಮಿಗಳ ಸಮಾಜ ಸೇವೆ ಹಾಗೂ ಆಧ್ಯಾತ್ಮಿಕದ ಬದುಕು ಸರಳತೆಯನ್ನು ಮೈಗೂಡಿಸಿಕೊಂಡಿದ್ದಂತಹ ವಿಧಾನ ಇವೆಲ್ಲವನ್ನೂ ನೋಡಿ ಅವರ ಸೇವೆಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಬೇಕು ಎಂದು ನಿರ್ಧಾರ ಮಾಡಿದರು.

ಅದರಂತೆ ಸಿದ್ದೇಶ್ವರ ಸ್ವಾಮಿಗಳಿಗೆ ಆಹ್ವಾನ ನೀಡುತ್ತಾರೆ. ಆಗ ನನಗೇತಕೆ ಈ ಆಹ್ವಾನ, ನನಗೆ ಪದ್ಮಶ್ರೀ ಪ್ರಶಸ್ತಿ ಬೇಡ ಎಂದು ಹೇಳಿದ ಏಕೈಕ ಮಹನೀಯ ವ್ಯಕ್ತಿ ಇವರು. ಇದರಿಂದಲೇ ನಮಗೆ ತಿಳಿಯುತ್ತದೆ ಸಿದ್ದೇಶ್ವರ ಸ್ವಾಮಿಗಳು ಎಷ್ಟು ಸರಳರಾಗಿದ್ದರು ಹಾಗೂ ಯಾವುದಕ್ಕೂ ಕೂಡ ಆಸೆ ಪಡುತ್ತಿರಲಿಲ್ಲ ಎಂಬುದು.

ಸಿದ್ದೇಶ್ವರ ಸ್ವಾಮಿಯ ಜೀವನ ಚರಿತ್ರೆಯನ್ನು ನೋಡುವುದಾದರೆ ಇವರು ವಿಜಯಪುರ ಜಿಲ್ಲೆಯ ತಾಳ ಬಿಜ್ಜರಗಿಯಲ್ಲಿ ಜನಿಸಿದರು. ಸ್ವಾಮೀಜಿಯನ್ನು ಉತ್ತರ ಕರ್ನಾಟಕದ ನಡೆದಾಡುವ ದೇವರು ಎಂದೇ ಕರೆಯಲಾಗುತ್ತದೆ. 19ನೇ ವಯಸ್ಸಿನಲ್ಲಿ ಸ್ವಾಮೀಜಿಯವರು ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ತತ್ವ ಶಿರೋಮಣಿ ಪುಸ್ತಕವನ್ನು ಬರೆದರು. ತಮ್ಮ ಆಧ್ಯಾತ್ಮಿಕ ಚಟುವಟಿಕೆಯ ಜೊತೆಗೆ ಸಿದ್ದೇಶ್ವರರು ಕಾಲೇಜಿನಲ್ಲಿ ತಮ್ಮ ಅಧ್ಯಯನವನ್ನು ಮುಂದುವರೆಸಿದರು.

ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ನಂತರ, ಸಿದ್ದೇಶ್ವರರು ಕೊಲ್ಲಾಪುರ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎಂಎ ಪದವಿಯನ್ನು ಮುಗಿಸಿದರು. ಇನ್ನು ಸಿದ್ದೇಶ್ವರರು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರಲಿಲ್ಲ, ಗೋವಾ, ಮಹಾರಾಷ್ಟ್ರ ಸೇರಿದಂತೆ ಹಲವಾರು ಪ್ರದೇಶಗಳಿಗೆ ಹೋಗಿ ಅಲ್ಲಿ ಪ್ರವಚನವನ್ನು ಮಾಡುತ್ತಿದ್ದರು. ಇವರ ಪ್ರವಚನದಿಂದ ಸಾಕಷ್ಟು ಜನ ಮನಂ ಪರಿವರ್ತನೆ ಮಾಡಿಕೊಂಡಿದ್ದರು.

1982 ರ ವರೆಗೂ ಕೂಡ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗಿ ಅಲ್ಲಿನ ಜನರಿಗೆ ಸರಳ ಬದುಕಿನ ಬಗ್ಗೆ ಹಾಗೂ ಆಧ್ಯಾತ್ಮಿಕದ ಬಗ್ಗೆ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳುವುದರ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದರು. ತಮ್ಮ ಜೀವನದುದ್ದಕ್ಕೂ ಜನರಿಗೆ ಒಳಿತನ್ನೇ ಮಾಡುತ್ತಾ ಬಂದ ಮಹಾನ್ ಪುಣ್ಯವಂತ ಸಿದ್ದೇಶ್ವರ ಸ್ವಾಮಿಜೀ ಕೇವಲ ಪ್ರವಚನವನ್ನು ಮಾತ್ರ ನೀಡುತ್ತಿರಲಿಲ್ಲ, ಇದರ ಜೊತೆಗೆ ಶಿಕ್ಷಣದ ಬಗ್ಗೆಯೂ ಕೂಡ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು.

ವಿಜಯಪುರದಲ್ಲಿ ಜ್ಞಾನಯೋಗಾಶ್ರಮ ಎಂಬ ಸಂಸ್ಥೆಯನ್ನು ಪ್ರಾರಂಭ ಮಾಡುತ್ತಾರೆ, ಈ ಒಂದು ಸಂಸ್ಥೆಯ ಮೂಲಕ ಮಕ್ಕಳಿಗೆ ಜ್ಞಾನಾರ್ಜನೆಯನ್ನು ನೀಡಲು ಮುಂದಾಗುತ್ತಾರೆ. ಇಂದು ಶ್ರೀಗಳು ನಮ್ಮೊಂದಿಗಿಲ್ಲ, ಆದರೆ ಅವರ ಮಾತು – ಪ್ರವಚನ ಎಂದೆಂದಿಗೂ ಹಲವು ರೂಪದಲ್ಲಿ ನಮ್ಮೊಂದಿಗಿರುತ್ತವೆ ಹಾಗೂ ನಮಗೆ ದಾರಿ ದೀಪವಾಗುತ್ತವೆ. ಸಿದ್ದೇಶ್ವರ ಸ್ವಾಮಿಗಳು ಅಂತಿಮವಾಗಿ ತಮ್ಮ ವಿಲ್ ನಲ್ಲಿ ಏನು ಬರೆದಿದ್ದರು ಎಂಬುದನ್ನು ನೋಡುವುದಾದರೆ…

ಅಂತಿಮ ಅಭಿವಂದನ ಪತ್ರ : ಬದುಕು ಅನುಭವಗಳ ಪ್ರವಾಹ, ಅದರ ಸಿರಿವಂತಿಕೆಯು ವಿಶ್ವ-ಚಿಂತನೆ ಹಾಗೂ ಸತ್ಯಶೋಧನೆಗಳಿಂದ. ಅದರ ಸೌಂದರ್ಯವು ರಾಗದ್ವೇಷರಹಿತವಾದ ಹಾಗೂ ಅಸೀಮಿತವಾದ ಸದ್ಭಾವದಿಂದ. ಅದನ್ನು ಸುಭಗ ಹಾಗೂ ಸಮೃದ್ಧಗೊಳಿಸುವುದೇ ‘ಸಾಧನೆ’, ಅಂಥ ಜೀವನದ ಉಪಯುಕ್ತವಾದ ಅನುಭವಗಳನ್ನು ಆಸಕ್ತರೊಂದಿಗೆ ಹಂಚಿಕೊಳ್ಳುವುದೇ ‘ಧರ್ಮ’.

ಅದು ಸ್ವ-ಪರ ನೆಮ್ಮದಿಗೆ ಕಾರಣ. ನನ್ನದು ಆವೇಗವಿಲ್ಲದ, ಸಾವಧಾನದ ಸಾಮಾನ್ಯ ಬದುಕು, ಅದನ್ನು ರೂಪಿಸಿದವರು ‘ಗುರುದೇವರು’. ಅದನ್ನು ಹದುಳಿಸಿದವರು ನಾಡಿನ ಪೂಜ್ಯರು, ಹಿತೈಷಿಗಳು, ಸ-ಹೃದಯರು, ಸಾಧಕರು, ಹಾಗೂ ಶ್ರೀ ಸಾಮಾನ್ಯರು. ನಿಸರ್ಗವು ಮೈ ಮನಸ್ಸುಗಳಿಗೆ ತಂಪನಿತ್ತಿದೆ. ತಾತ್ವಿಕ ಚಿಂತನೆಗಳು ತಿಳಿಬೆಳಗ ಹರಡಿವೆ. ಜಾಗತಿಕ ತತ್ತ್ವಜ್ಞಾನಿಗಳ ಮತ್ತು ವಿಜ್ಞಾನಿಗಳ ಶೋಧನೆಗಳು ದೃಷ್ಟಿಯ ಪರಿಸೀಮೆಯನ್ನು ದೂರ ದೂರ ಸರಿಸಿವೆ.

ಆದ್ದರಿಂದಲೇ ನಾನು ಎಲ್ಲರಿಗೂ ಎಲ್ಲದಕ್ಕೂ ‘ಉಪಕೃತ’, ಬದುಕು ಮುಗಿಯುತ್ತದೆ, ದೀಪ ಆರಿದಂತೆ, ತೆರೆ ಅಡಗಿದಂತೆ, ಮೇಘ ಕರಗಿದಂತೆ. ಉಳಿಯುವುದು ಬರಿ ಬಯಲು. ಮಹಾಮೌನ, ಶೂನ್ಯಸತ್ಯ. ಹಲವು ದಶಕಗಳ ಕಾಲ ಈ ಅದ್ಭುತ ಜಗತ್ತಿನಲ್ಲಿ ಬಾಳಿದ್ದೇನೆ, ನೋಡಿ ತಿಳಿದು ಅನುಭವಿಸಿದ್ದೇನೆ. ನನ್ನ ಬದುಕು ಕೊನೆಗೊಳ್ಳುವ ಮುಂಚೆ ಅದನ್ನು ಕೃತಜ್ಞತೆಯಿಂದ ಸ್ಮರಿಸಬೇಕು, ಅದಕ್ಕಾಗಿ ಈ ‘ಅಂತಿಮ ಅಭಿವಂದನ-ಪತ್ರ’.

ದೇಹದ ವಿಷಯದಲ್ಲಿ ಒಂದೆರಡು ಆಶಯಗಳು : ದೇಹವನ್ನು ಭೂಮಿಯಲ್ಲಿಡುವ ಬದಲು ಅಗ್ನಿಗೆ ಅರ್ಪಿಸಬೇಕು, ಶ್ರಾದ್ಧಿಕ ವಿಧಿ-ವಿಧಾನಕರ್ಮಗಳನ್ನು ಮಾಡುವ ಅಗತ್ಯವಿಲ್ಲ. ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸಬೇಖು, ಯಾವುದೇ ಬಗೆಯ ಸ್ಮಾರಕ ನಿರ್ಮಿಸಬಾರದು.
ಅಂತಿಮ ನೆನಹು : “ಸತ್ಯವೂ ಇಲ್ಲ, ಅಸತ್ಯವೂ ಇಲ್ಲ. ಸಹಜವೂ ಇಲ್ಲ, ಅಸಹಜವೂ ಇಲ್ಲ, ನಾನೂ ಇಲ್ಲ, ನೀನೂ ಇಲ್ಲ. ಇಲ್ಲ, ಇಲ್ಲ ಎಂಬುದು ತಾನಿಲ್ಲ. ಗುಹೇಶ್ವರನೆಂಬುದು ತಾ ಬಯಲು”. ಅಂತ್ಯ: ಪ್ರಣಾಮಾಂಜಲಿ (ಸ್ವಾಮಿ ಸಿದ್ದೇಶ್ವರ)

ಇಂಥ ಮಹಾನ್ ಸ್ವಾಮಿಜಿಯ ಪಾರ್ಥಿವ ಶರಿರದ ದರ್ಶನ ಇಂದು ಜನಸಾಮಾನ್ಯರಿಗೆ ಲಭಿಸಲಿದೆ, ಆ ಬಗ್ಗೆ ವಿವರ ಕೆಳಗಿನ ವಿಡಿಯೊದಲ್ಲಿ ಇದೆ ನೋಡಿ…

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...