ಸಾಮಾನ್ಯವಾಗಿ ಈ ನಟಿಯರು ತಮಗೆ ಮಕ್ಕಳಾದ ಮೇಲೆ ಜನರಿಂದ, ಸಾಮಾಜಿಕ ಕಾರ್ಯಕ್ರಮಗಳಿಂದ ತುಂಬಾ ದೂರ ಉಳಿದು ಬಿಡುತ್ತಾರೆ. ಮಕ್ಕಳಾದ ಮೇಲೂ ಹೆಚ್ಚು ಹೆಚ್ಚು ಕಾರ್ಯಕ್ರಮದಲ್ಲಿ ಭಾಗೀ ಆಗುವುದು ಕೆಲವೇ ನಟಿಯರು. ಹಾಗೆ ಒಂದು ವೇಳೆ ಮರಳಿ ತಮ್ಮ ಕಾರ್ಯ ಕ್ಷೇತ್ರಕ್ಕೆ ಬಂದರೂ ತಮ್ಮ ಪುಟ್ಟ ಮಕ್ಕಳನ್ನು ಮಾತ್ರ ಕ್ಯಾಮರಾ ಮುಂದೆ ತರಲು ಇಷ್ಟ ಪಡುವುದಿಲ್ಲ. ನಾವು ನೋಡಿದ ಹಾಗೆ ರಾಧಿಕಾ ಪಂಡಿತ್ ಕೇವಲ ಮಕ್ಕಳು ಆಟ ಆಡುವ ವಿಡಿಯೋಗಳನ್ನು ಹಾಕುತ್ತಿರುತ್ತಾರೆ, ಅದೇ ರೀತಿ ಶ್ವೇತಾ ಚೆಂಗಪ್ಪ ಅವರು ಕೂಡ ಮಗನ ಒಂದು ಜಾಹೀರಾತಿನ ಶೂಟ್ ಬಿಟ್ಟರೆ.
ನಂತರ ಆಗಲೋ ಈಗಲೋ ಮಗನ ಜೊತೆ ಆಟಾ ಆಡುವ ಕ್ಲಿಪ್ ಹಾಕುತ್ತಿದ್ದಾರೆ. ಆದರೆ ಈ ಎಲ್ಲರಿಗಿಂತ ತುಂಬಾ ಭಿನ್ನ ಅನ್ನಿಸಿರುವುದು ನಟಿ ಶ್ವೇತಾ ಶ್ರೀವಾತ್ಸವ್. ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಚಿತ್ರದ ಮೂಲಕ ಕನ್ನಡ ಜನತೆಯ ಮನಗೆದ್ದಿದ್ದ ಸಿಂಪಲ್ ಬ್ಯೂಟಿ ಅನ್ನಿಸಿಕೊಂಡವರು. ಆ ನಂತರ ಅವರು ಕಿರಗೂರಿನ ಗಯ್ಯಾಳಿಗಳು ಚಿತ್ರದಲ್ಲಿ ಅಧ್ಬುತವಾಗಿ ನಟಿಸಿದ್ದರು. ಇವರು ನಟಿಸಿದ್ದು ಕೇವಲ ಬೆರಳೆಣಿಕೆಯ ಚಿತ್ರಗಳಲ್ಲಿ ಮಾತ್ರ, ಆದ್ರೆ ಅಪಾರ ಅಭಿಮಾನಿಗಳನ್ನು ತನ್ನವರನ್ನಾಗಿಸಿಕೊಂಡಿದ್ದಾರೆ. ನಂತರ ಇವರು ಗರ್ಭವತಿಯಾಗಿ ತನ್ನ ಹೊಟ್ಟೆಯ ಮೇಲೆ ಟ್ಯಾಟೂ ಒಂದನ್ನು ಮಾಡುವುದರ ಮೂಲಕ ಸಿಕ್ಕಾ ಪಟ್ಟೆ ಫೇಮಸ್ ಆಗಿದ್ದರು.
ಇವ್ರು 2017 ರಲ್ಲಿ ಅಸ್ಮಿತಾ ಅನ್ನುವ ಮುದ್ದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆ ನಂತರ ತನ್ನ ಸಂಪೂರ್ಣ ಜೀವನವನ್ನು ತನ್ನ ಮಗಳಿಗಾಗಿಯೇ ಮುಡಿಪಾಗಿಟ್ಟಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿದ್ದ ಅವರು ತಮ್ಮ ಮಗುವಿನ ಹೆಸರಿನ ಇನ್ಸ್ಟಾಗ್ರಾಂ ಖಾತೆ ಮಾಡಿ ಅಲ್ಲಿ ಮಗಳ ಪ್ರತಿ ವಿಡಿಯೋ, ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿದ್ದರು. ಇದೀಗ ಮಗಳಿಗೆ ನಾಲ್ಕು ವರ್ಷ ತುಂಬಿದ ಮೇಲೂ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಭಾಗಿ ಆಗಿ. ತನ್ನ ಮಗಳ ಜೊತೆ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿದ್ದಾರೆ.
ಮಗಳಿಗೆ 1.76 ಲಕ್ಷ ಫಾಲೋವರ್ಸ್ ಇದ್ದರೆ ಶ್ವೇತಾ ಅವರೈಗೆ 7 ಲಕ್ಷ ಫಾಲೋವರ್ಸ್ ಇದ್ದಾರೆ. ಅದೇ ರೀತಿ ಇದೀಗ ಡ್ಯಾನ್ಸ್, ವರ್ಕೌಟ್ ಮಾಡುತ್ತಾ ಮತ್ತೆ ತನ್ನ ಸುಂದರ ಮೈ ಮಾಟವನ್ನು ವಾಪಾಸ್ ಪಡೆದ ಶ್ವೇತಾ ಮತ್ತೆ ಚಿರ ಯೌವನೆಯಂತೆ ಕಾಣಿಸಿಸುತ್ತಿದ್ದಾರೆ. ಆದರೆ ಶ್ವೇತಾ ಅವರಿಗೆ ಇದೀಗ 34 ವರ್ಷ ವಯಸ್ಸಾಗಿದೆ ಎಂದು ಯಾರಿಂದಲೂ ಹೇಳಲು ಸಾಧ್ಯ ಇಲ್ಲ. ಆ ರೀತಿ ತನ್ನ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ನಮಗೆ ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.